ರೈಲಿಗೆ ಬೆಂಕಿ: ಅಕ್ರಮವಾಗಿ ಸಾಗಿಸುತ್ತಿದ್ದ ಗ್ಯಾಸ್ ಸಿಲಿಂಡರ್ ಮಧುರೈ ರೈಲಿನಲ್ಲಿ ಬೆಂಕಿಗೆ ಕಾರಣ !

Madurai: ಮಧುರೈ ರೈಲಿನ ಬೋಗಿಯಲ್ಲಿ ಶನಿವಾರ ಬೆಳಿಗ್ಗೆ 5:15 ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು (lpg smuggling in train) ವರದಿ ಮಾಡಿದ್ದ ಅವರು ತಕ್ಷಣ

ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಬೆಳಗ್ಗೆ 5.45ಕ್ಕೆ ಆಗಮಿಸಿದ್ದರು. ಬೆಂಕಿಯನ್ನು ಬೆಳಗ್ಗೆ 7.15ಕ್ಕೆ ನಂದಿಸಲಾಯಿತು. ಇನ್ನು ಉಳಿದ ಬೋಗಿಗಳಿಗೆ ಯಾವುದೇ ಹಾನಿಯಾಗಿಲ್ಲ

ಎಂದು ದಕ್ಷಿಣ ರೈಲ್ವೆ (lpg smuggling in train) ಅಧಿಕಾರಿಗಳು ತಿಳಿಸಿದ್ದರು.

ಅಕ್ರಮವಾಗಿ ಎಲ್‌ಪಿಜಿ ಸಿಲಿಂಡರ್ (LPG Cylinder) ಅನ್ನು ಖಾಸಗಿ ಕೋಚ್‌ನಲ್ಲಿದ್ದ ಪ್ರಯಾಣಿಕರು ಕಳ್ಳಸಾಗಣೆ ಮಾಡಿದ್ದಾರೆ ಎಂದು ಶಂಕಿಸಲಾಗಿದ್ದು, ಶನಿವಾರ ನಸುಕಿನ ವೇಳೆ ಮಧುರೈ

ರೈಲು ನಿಲ್ದಾಣದ ಬಳಿ ಭಾರತ್ ಗೌರವ್ (Bharat Gourav) ವಿಶೇಷ ರೈಲಿನಲ್ಲಿ ಬೆಂಕಿಗೆ ಇದೇ ಕಾರಣ ಆಗಿದೆ ಎಂದು ದಕ್ಷಿಣ ರೈಲ್ವೆ ಹೇಳಿದೆ. ಮಧುರೈ ರೈಲ್ವೇ ಜಂಕ್ಷನ್ ಬಳಿ ನಿಲುಗಡೆಯಾಗಿದ್ದ

ಟೂರಿಸ್ಟ್ ಕೋಚ್‌ನಲ್ಲಿ (Tourist Coach) ಸಂಭವಿಸಿದ ಅಗ್ನಿ ಅವಘಡದಲ್ಲಿ 3 ಮಹಿಳೆಯರು ಸೇರಿದಂತೆ 9 ಮಂದಿ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ ಎಂದು ರೈಲ್ವೇ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಉತ್ತರ ಪ್ರದೇಶದ (Uttar Pradesh) ಸುಮಾರು 55 ಪ್ರಯಾಣಿಕರು ಈ ಕೋಚ್ ಅಲ್ಲಿ ಇದ್ದು, ಅವರಲ್ಲಿ ಕೆಲವರು ಕಾಫಿ ಮಾಡಲು ಗ್ಯಾಸ್ ಸ್ಟೌವ್ (Gas Stove) ಅನ್ನು ಹೊತ್ತಿಸಿದರು. ಆಗ ಸಿಲಿಂಡರ್

ಸ್ಫೋಟಗೊಂಡಿದೆ ಎಂದು ಮೂಲಗಳು ಹೇಳಿವೆ. 3:47 ಕ್ಕೆ ಮಧುರೈಗೆ ಆಗಮಿಸಿದ ಪುನಲೂರ್ (Punalur)-ಮಧುರೈ ಎಕ್ಸ್‌ಪ್ರೆಸ್‌ನಲ್ಲಿ (Madurai Express) ನಿನ್ನೆ ನಾಗರ್‌ಕೋಯಿಲ್ ಜಂಕ್ಷನ್‌ನಲ್ಲಿ

(Nager coil Junction) ಪ್ರೈವೆಟ್ ಕೋಚ್ ಮತ್ತು ಪಾರ್ಟಿ ಕೋಚ್ ಅನ್ನು ಬೇರ್ಪಡಿಸಿ ಮಧುರೈ ಸ್ಟೇಬ್ಲಿಂಗ್ ಲೈನ್‌ನಲ್ಲಿ (Stabling Line) ಇರಿಸಲಾಗಿತ್ತು.

ಆಗಸ್ಟ್ 17 ರಂದು ಪಾರ್ಟಿ ಕೋಚ್ (Party Coach) ಲಕ್ನೋದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿತ್ತು. ಕೊಲ್ಲಂ ಎಕ್ಸ್‌ಪ್ರೆಸ್‌ನಲ್ಲಿ (Kollam Express) ಚೆನ್ನೈಗೆ ಹಿಂತಿರುಗಲು ಮತ್ತು ಚೆನ್ನೈನಿಂದ

(Chennai) ಲಕ್ನೋಗೆ ಹಿಂತಿರುಗಲು ನಿರ್ಧರಿಸಲಾಗಿತ್ತು. ಈ ಪ್ರಯಾಣಿಕರು ಗ್ಯಾಸ್ ಸಿಲಿಂಡರ್ ಅನ್ನು ಕಳ್ಳಸಾಗಣೆ ಮಾಡಿದ್ದಾರೆ. ಇದರಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯನ್ನು ಗಮನಿಸಿದ ಅನೇಕ

ಪ್ರಯಾಣಿಕರು ಕೋಚ್‌ನಿಂದ ಹೊರಬಂದಿದ್ದಾರೆ. ಕೆಲವು ಪ್ರಯಾಣಿಕರು ಪ್ಲಾಟ್‌ಫಾರ್ಮ್‌ನಲ್ಲಿಯೇ ಉಳಿದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಿದ್ದು ಇಸ್ರೋ ವಿಜ್ಞಾನಿಗಳ ಸನ್ಮಾನಕ್ಕೆ ಪಕ್ಷದ ಸಭೆಗಲ್ಲ : ಬಿಜೆಪಿ ತಿರುಗೇಟು..!

ರೈಲಿನಲ್ಲಿ 60ಕ್ಕೂ ಹೆಚ್ಚು ಪ್ರಯಾಣಿಕರು ಇದ್ದು, ಇನ್ನೂ 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದೆ. ಮೃತದೇಹಗಳನ್ನು ಮಧುರೈನ ಸರ್ಕಾರಿ ರಾಜಾಜಿ

(Rajaji) ಆಸ್ಪತ್ರೆಗೆ ರವಾನಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಮೃತರು ಉತ್ತರ ಪ್ರದೇಶ ಮೂಲದವರು (Uttar Pradesh) ಎಂದು ಗುರುತಿಸಲಾಗಿದ್ದು, ಮೃತರ ಕುಟುಂಬ

ಸದಸ್ಯರಿಗೆ ದಕ್ಷಿಣ ರೈಲ್ವೇ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಎಂದು ವರದಿಗಳು ತಿಳಿಸಿವೆ.

ಗ್ಯಾಸ್ ಸಿಲಿಂಡರ್ ಅನ್ನು ಖಾಸಗಿ ಪಾರ್ಟಿ ಕೋಚ್‌ನಲ್ಲಿ ಪ್ರಯಾಣಿಕರು ಕಳ್ಳಸಾಗಣೆ ಮಾಡಿದ್ದಾರೆ. ಇದರಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯನ್ನು ಗಮನಿಸಿದ ಅನೇಕ ಪ್ರಯಾಣಿಕರು ಕೋಚ್‌ನಿಂದ

ಹೊರಬಂದಿದ್ದು, ಇನ್ನು ಕೆಲವು ಪ್ರಯಾಣಿಕರು ಪ್ಲಾಟ್‌ಫಾರ್ಮ್‌ನಲ್ಲಿಯೇ (Platform) ಉಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭವ್ಯಶ್ರೀ ಆರ್.ಜೆ

Exit mobile version