ಕಣ್ಣಲ್ಲೇ ಅಭಿನಯಿಸುವ ಚೆಲುವೆ ; ಕನ್ನಡ ಚಿತ್ರರಂಗದ `ಲಕ್ಕಿ’ ಹಿರೋಯಿನ್ ಸಂಗೀತ ಶೃಂಗೇರಿ

Sangeetha

Sandalwood : ಕನ್ನಡ ಚಿತ್ರರಂಗ(Kannada Film Industry) ಸದ್ಯ ವಿಭಿನ್ನ, ವಿನೂತನ, ವಿಶಿಷ್ಟ, ವಿಶೇಷ ಕಥಾಹಂದರಗಳ ಸಿನಿಮಾಗಳನ್ನು ಸಿನಿಪ್ರೇಕ್ಷಕರಿಗೆ ನೀಡುವಲ್ಲಿ ಸದಾ ಮುಂದಿದೆ ಹಾಗೂ ಯಶಸ್ವಿಯಾಗಿದೆ.

ಪ್ರತಿವಾರವೂ ಕನ್ನಡ ಚಿತ್ರರಂಗದಿಂದ ಒಳೊಳ್ಳೆ ಚಿತ್ರಗಳು ಸಿನಿಪ್ರೇಕ್ಷಕರ ಮುಂದೆ ಹಾಜರಾಗುತ್ತಿವೆ.

Lucky Man

ಈ ಪೈಕಿ ಕಳೆದ ವಾರ ಸಿನಿಪ್ರೇಕ್ಷಕರ ಮುಂದೆ ಹಾಜರಾದ ಬಹುನಿರೀಕ್ಷಿತ ಚಿತ್ರ ಲಕ್ಕಿ ಮ್ಯಾನ್’(Lucky Man), ಅಪ್ಪು ಅಭಿಮಾನಿಗಳನ್ನು ಪ್ರಾರಂಭದಲ್ಲಿ ಕುಣಿಸಿ, ಅಂತ್ಯದಲ್ಲಿ ಅಳಿಸಿದೆ. ಪ್ರೀತಿಸಿ, ಆರಾಧಿಸಿದ ಕನ್ನಡಿಗರ ನಿಜವಾದ ಆರಾಧ್ಯದೈವ ಪವರ್ ಸ್ಟಾರ್(Power Star) ಡಾ. ಶ್ರೀ ಪುನೀತ್ ರಾಜಕುಮಾರ್(Dr. Puneeth Rajkumar),

ಈ ಚಿತ್ರದಲ್ಲಿ ದೈವದ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಅಪ್ಪು `ಅಭಿ’ಮಾನಿಗಳ ಅಗಾಧ ಪ್ರೀತಿಗೆ ಮತ್ತೊಮ್ಮೆ ಸಾಕ್ಷಿಯಾಯಿತು. ಅತ್ತ ಲಕ್ಕಿಮ್ಯಾನ್ ಚಿತ್ರ ಸಿನಿಪ್ರೇಕ್ಷಕರ ಮನಗೆದ್ದು ಯಶಸ್ವಿ ಪಯಣ ಮುಂದುವರೆಸುತ್ತಿದ್ದರೆ, ಇತ್ತ ಲಕ್ಕಿ ಮ್ಯಾನ್ ಸಿನಿಮಾದ `ಲಕ್ಕಿ’ ಹೀರೋಯಿನ್ ಬಗ್ಗೆ ಇದೀಗ ಸಿನಿಪ್ರೇಕ್ಷಕರು(Cinema Audience) ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Darling Krishna And Sangeetha Sringeri

ನಟಿ(Actress) ಸಂಗೀತ ಶೃಂಗೇರಿ(Sangeetha Sringeri) ಅವರ ಸರಳ ಅಭಿನಯವನ್ನು ಮೆಚ್ಚಿ ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಯಾರು ಈ ಸಂಗೀತ ಶೃಂಗೇರಿ? ಇವರು ಕನ್ನಡ ಚಿತ್ರರಂಗಕ್ಕೆ ಹೇಗೆ ಪರಿಚಯಗೊಂಡರು? ಇಂದು ನಮಗೆಲ್ಲಾ ಹೇಗೆ ಚಿರಪರಿಚಿತರಾದರು? ಎಂಬ ನಿಮ್ಮ ಕೆಲ ಕುತೂಹಲಕಾರಿ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಹುಡುಕುವ ಸಮಯ. ಮುಂದುವರೆಸಿ ನಿಮ್ಮ ಕುತೂಹಲದ ಓಟವ….

ಮೂಲತಃ ಚಿಕ್ಕಮಗಳೂರು(Chikkamaglur) ಜಿಲ್ಲೆಯ, ಶೃಂಗೇರಿಯಲ್ಲಿ(Sringeri) ಜನಿಸಿದ ನಟಿ ಸಂಗೀತ ಶೃಂಗೇರಿ, ತಮ್ಮ 18ನೇ ವಯಸ್ಸಿನಲ್ಲಿ ನಟನೆಗೆ ಹೆಜ್ಜೆಯಿಟ್ಟ ಚೆಲುವೆ. ಮೊದ ಮೊದಲು ಸ್ಟಾರ್ ಸುವರ್ಣ(Star Suvarna) ಎಂಬ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹರ ಹರ ಮಹಾದೇವ ಧಾರವಾಹಿಯಲ್ಲಿ ಸತಿ ಪಾತ್ರದಲ್ಲಿ ನಟಿಸಿ, ಜನರಿಗೆ ಕಿರು ಪರಿಚಯವಾದರು.

Sangeetha sringeri

ತದನಂತರ ಕಿರು’ತೆರೆಯಲ್ಲಿ `ಕಿರು’ಪರಿಚಯದಿಂದ, ಬೆಳ್ಳಿತೆರೆಗೆ 777 ಚಾರ್ಲಿ(777 Charlie) ಮೂಲಕ ಕನ್ನಡಿಗರಿಗೆ, ಕನ್ನಡ ಸಿನಿಪ್ರೇಕ್ಷಕರಿಗೆ ಚಿರಪರಿಚಿತರಾದರು. ರಕ್ಷಿತ್ ಶೆಟ್ಟಿ(Rakshit Shetty) ಅಭಿನಯದ ಚಾರ್ಲಿ ಸಿನಿಮಾದಲ್ಲಿ ಬಣ್ಣ ಹಚ್ಚುವ ಮುನ್ನವೇ ಸಂಗೀತಾ ಧಾರವಾಹಿಯಲ್ಲಿ ಬಣ್ಣ ಹಚ್ಚಿ, ಮಿಂಚಿ ಬಂದವರು.

ಚಾರ್ಲಿ ಸಿನಿಮಾಗೂ ಮುನ್ನ 50ಕ್ಕೂ ಹೆಚ್ಚು ಸ್ಕ್ರಿಪ್ಟ್ ಗಳನ್ನು(Script) ಕೇಳಿದ್ದ ಸಂಗೀತಾ, ತಾನು ಕೂಡ ಶ್ವಾನ ಪ್ರಿಯರಾಗಿದ್ದರಿಂದಲೋ ಏನೋ ಚಾರ್ಲಿ ಸಿನಿಮಾದ ಆಡಿಷನ್‍ಗೆ ಹೋಗಿ, ತಮ್ಮ ಅಭಿನಯದ ಛಾಪು ಮೂಡಿಸಿ ಆಡಿಷನ್‍ಗೆ ಬಂದಿದ್ದ 2,700 ಜನರ ಪೈಕಿ ಚಿತ್ರದ ನಾಯಕಿಯಾಗಿ ಆಯ್ಕೆಯಾದರು.

Sangeetha

777 ಚಾರ್ಲಿ ಸಿನಿಮಾದಲ್ಲಿ ಹೆಚ್ಚು ಸಮಯ ಕಾಣಿಸಿಕೊಳ್ಳದೇ ಇದ್ದರೂ, ದೇವಿಕಾ ಪಾತ್ರದಲ್ಲಿ ಅಭಿನಯಿಸಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಚಾರ್ಲಿ ಚಿತ್ರದ ಪೂರ ಹೆಚ್ಚು ಸಂಭಾಷಣೆ(Dialogues) ತಮಗಿಲ್ಲದ್ದಿದ್ರೂ, ತಮ್ಮ ಕಣ್ಣಿನಲ್ಲೇ ಭಾವನೆ ಬೆಸೆದು, ಸರಳ ಅಭಿನಯದಿಂದಲೇ ಎಲ್ಲರ ಮನಗೆದ್ದ ಚಾರ್ಮಿಂಗ್ ನಟಿ.

ಮುದ್ದು ಮಾತು, ಪೆದ್ದು ಮನಸ್ಸು, ಪ್ರೀತಿಯ ಮುಗುಳುನಗೆಯಿಂದಲೇ ಕನ್ನಡಿಗರು ಹಾಗೂ ಕನ್ನಡ ಸಿನಿಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿರುವ ಕಣ್ಣಿನ ಚೆಲುವೆ, ಇದೀಗ ಲಕ್ಕಿ ಮ್ಯಾನ್ ಚಿತ್ರದ ಮೂಲಕ ಮತ್ತೊಮ್ಮೆ ತಮ್ಮ ಸರಳ ನಟನೆಯಿಂದಲೇ ಮತ್ತಷ್ಟು, ಮಗದಷ್ಟು ಸಿನಿರಸಿಕರ ಪ್ರೀತಿಯನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.

https://vijayatimes.com/why-media-banned-actor-darshan/

Sangeetha with Charlie

ಒಟ್ಟಾರೆ ಎರಡು ಪ್ರಮುಖ ಸಿನಿಮಾಗಳಲ್ಲಿ ನಟಿಸಿದ ಸಂಗೀತಾ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ನಟನೆಯ ಛಾಪು ಮೂಡಿಸಿ ಬಹುಬೇಗನೇ ಕನ್ನಡ ಸಿನಿಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ಸದ್ಯ ಗೆಲುವಿನ ಓಟದಲ್ಲಿರುವ ನಟಿ, ಕನ್ನಡ ಚಿತ್ರರಂಗಕ್ಕೆ ಒಲವಿನ `ಸಂಗೀತ’ವಾಗಲಿ.

ನಾಯಕಿಯಾಗಿ ನಟಿಸಿರುವ ತಮ್ಮ ಮುಂದಿನ ಚಿತ್ರ ಪಂಪ ಇದೇ ಸೆಪ್ಟಂಬರ್ 16 ರಂದು ಬಿಡುಗಡೆಗೆ ಸಜ್ಜಾಗಿದ್ದು, ನಟ ದಿಗಂತ್‍ಗೆ ಜೋಡಿಯಾಗಿ ಮಾರಿಗೋಲ್ಡ್ ಚಿತ್ರದಲ್ಲೂ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ಪಂಪ ಚಿತ್ರದ ಬಿಡುಗಡೆಯ ಮುಖೇನ ಮತ್ತಷ್ಟು ಖ್ಯಾತಿಗಳಿಸಲಿ ಮತ್ತು ಇನ್ನು ಹೆಚ್ಚೆಚ್ಚು ವಿಶೇಷ ಪಾತ್ರಗಳಲ್ಲಿ ಅಭಿನಯಿಸಲು ಅವಕಾಶಗಳು ದೊರಕಲಿ ಎಂಬುದೇ ನಮ್ಮ ಆಶಯ. ನಿಮ್ಮ ಮುಂದಿನ ಸಿನಿಪಯಣ ಅದ್ದೂರಿಯಾಗಿ, `ಸಂಗೀತ’ಮಯವಾಗಿ ಸಾಗಲಿ, ಶುಭವಾಗಲಿ.
Exit mobile version