ಬಾಲಿವುಡ್ ನಲ್ಲಿ(Bollywood) ಕೆಲವೊಂದಕ್ಕೆ ರಾಜಿ ಆಗ್ಲಿಲ್ಲ ಅಂದ್ರೆ, ದೊಡ್ಡ ಸ್ಟಾರ್ ನಟರ ಜೊತೆ ಮತ್ತು ದೊಡ್ಡ ಬ್ಯಾನರ್ ನಲ್ಲಿ ನಟಿಸಲು ಅವಕಾಶ ಸಿಗೊದಿಲ್ಲ ಎಂದು ನಟಿ(Actress) ಮಲ್ಲಿಕಾ ಶೆರವಾತ್(Mallika Sherawat) ದೊಡ್ಡ ಬಾಂಬ್ ಸಿಡಿಸಿದ್ದಾರೆ. ಆರ್.ಕೆ ಚಿತ್ರದ ಮೂಲಕ ಮಲ್ಲಿಕಾ ಶರಾವತ್ ಮತ್ತೆ ಬಾಲಿವುಡ್ ಚಿತ್ರರಂಗಕ್ಕೆ ಬಂದಿದ್ದಾರೆ. ವಾಪಸ್ ಬರುತ್ತಲೇ ಒಂದು ದೊಡ್ಡ ಬಾಂಬ್ ಸಿಡಿಸಿದ್ದಾರೆ. ತಾನು ಯಾವುದೇ ವಿಷಯದಲ್ಲೂ ರಾಜಿ ಮಾಡಿಕೊಳ್ಳದೇ ಇದ್ದ ಕಾರಣ ನನಗೆ ಬಾಲಿವುಡ್ ಸ್ಟಾರ್ ನಟರ ಜೊತೆಗೆ ನಟಿಸುವುದಕ್ಕೆ ಅವಕಾಶ ಸಿಗಲಿಲ್ಲಾ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಮಲ್ಲಿಕಾ ಒಂದು ಕಾಲಕ್ಕೆ ಬಾಲಿವುಡ್ ಚಿತ್ರರಂಗದ ಹಾಟ್ ನಟಿ ಎಂದೇ ಗುರುತಿಸಿಕೊಂಡಿದ್ದರು. ಜಾಕಿ ಅಭಿನಯದ “ದಿ ಮಿಥ್” ಮತ್ತು “ಹಿಸ್” ಎಂಬ ಚಿತ್ರಗಳಲ್ಲೂ ನಟಿಸಿದ್ದು, ವೆಲ್ಕಮ್ ಸೇರಿದಂತೆ ಒಂದಿಷ್ಟು ಚಿತ್ರಗಳಲ್ಲಿ ಅಭಿನಯಿಸಿದರು. ಆದರೆ ಹೆಚ್ಚು ಕಾಲ ಚಿತ್ರರಂಗದಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ. ಈ ಕುರಿತು ಮಾತನಾಡಿದ ಮಲ್ಲಿಕಾ ಶರಾವತ್, ಬಾಲಿವುಡ್ ಸ್ಟಾರ್ ನಟರೆಲ್ಲಾ ನನ್ನ ಜತೆಗೆ ನಟಿಸೋದಕ್ಕೆ ನಿರಾಕರಿಸಿದರು. ಕಾರಣ, ನಾನು ಯಾವುದಕ್ಕೂ ರಾಜಿ ಆಗಲಿಲ್ಲ! ಹಾಗಾಗಿಯೇ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದರೂ ಅವಕಾಶ ವಂಚಿತಳಾದೆ ಎಂದು ಹೇಳಿಕೊಂಡಿದ್ದಾರೆ.
ಇಲ್ಲಿನ ಹೀರೋ ಬೆಳಗ್ಗೆ 3 ಗಂಟೆಗೆ ಫೋನ್ ಮಾಡಿ ನನ್ನ ಮನೆಗೆ ಬಾ ಎಂದು ಕರೆದರು ಹೋಗಬೇಕು. ಹಾಗೆ ಹೋದರೆ ಅವರ ಚಿತ್ರಗಳಲ್ಲಿ ಅವಕಾಶ ಸಿಗುತ್ತದೆ! ಇಲ್ಲದೆ ಹೋದರೆ ಸಿನಿಮಾವೂ ಇಲ್ಲ, ನಟನೆಯೂ ಇಲ್ಲ. ಇದನ್ನು ನಿರಾಕರಿಸುತ್ತ ಹೋದರೆ, ಅವಕಾಶ ಸಿಗುವುದಿಲ್ಲ. ಇಲ್ಲಿ ಹೀರೊಗಳ ಮಾತುಗಳಿಗೆ ಪ್ರಾಮುಖ್ಯತೆ ಹೆಚ್ಚು. ಯಾರೂ ಅವರ ಮಾತಿಗೆ ಮತ್ತು ಕರೆದ ಕಡೆ ಹೋಗುತ್ತಾರೋ, ಅವರು ಹೇಳಿದಕ್ಕೆಲ್ಲಾ ರಾಜಿ ಮಾಡಿಕೊಳ್ಳುತಾರೋ ಅವರಿಗೆ ಅವಕಾಶಗಳು ಸಿಗುತ್ತದೆ. ನನ್ನದು ಆ ರೀತಿಯ ವ್ಯಕ್ತಿತ್ವ ಅಲ್ಲ!

ಯಾರದೋ ಹೇಳಿಕೆಗೆ ನಾನು ಬದುಕೋದಿಲ್ಲ, ಹಾಗಾಗಿ ಕೆಲವು ದೊಡ್ಡ ದೊಡ್ಡ ಅವಕಾಶಗಳು ನನಗೆ ಸಿಗಲಿಲ್ಲ ಎಂದು ಮಲ್ಲಿಕಾ ಶರಾವತ್ ಹೇಳಿದ್ದಾರೆ. ಈ ಒಂದು ಹೇಳಿಕೆ ಈಗ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
- ಕುಮಾರ್, ಬೆಂಗಳೂರು