ಎಲ್ಲಾ ಸಮುದಾಯಗಳು ಹೈಕೋರ್ಟ್ ಆದೇಶವನ್ನು ಪಾಲಿಸಬೇಕು : ಖರ್ಗೆ!

mallikarjun kharghe

ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸದೃಡವಾಗಿದೆ. ಹೀಗಾಗಿ ನ್ಯಾಯಾಲಯಗಳು ನೀಡುವ ಆದೇಶಗಳನ್ನು ದೇಶದ ಎಲ್ಲ ಸಮುದಾಯಗಳು ಪಾಲಿಸಬೇಕು. ಧಾರ್ಮಿಕ ಕಟ್ಟಡಗಳಲ್ಲಿ ಧ್ವನಿವರ್ಧಕ ಬಳಕೆ ಕುರಿತು ಈಗಾಗಲೇ ಹೈಕೋರ್ಟ್(Highcourt) ನೀಡಿರುವ ಆದೇಶವನ್ನು ನಾಡಿನ ಎಲ್ಲಾ ಸಮುದಾಯಗಳು(Community) ಪಾಲಿಸಬೇಕೆಂದು ಕಾಂಗ್ರೆಸ್‍ನ(Congress) ಹಿರಿಯ ನಾಯಕ(Leader) ಮಲ್ಲಿಕಾರ್ಜುನ ಖರ್ಗೆ(Mallikarjuna Karghe) ಹೇಳಿದ್ದಾರೆ.

ಕೋಮು ಬಿರುಕುಗಳನ್ನು ಸೃಷ್ಟಿಸಲು ಕೇವಲ ಧ್ರುವೀಕರಣ ರಾಜಕೀಯ ಉದ್ದೇಶಕ್ಕಾಗಿ ಇದನ್ನೆಲ್ಲಾ ಮಾಡಲಾಗುತ್ತದೆ. ಮತಗಳಿಗಾಗಿ ಕೋಮುಸಂಘರ್ಷ ಸೃಷ್ಟಿಸಲಾಗುತ್ತದೆ, ಪ್ರಚೋದಿಸಲಾಗುತ್ತದೆ ಇದು ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರತಿಕೂಲವಾಗಿರುತ್ತದೆ. ಇಂತಹ ವಿಷಯಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಯಂತ್ರಣ ಸಾಧಿಸಿ ಎಲ್ಲ ಸಮುದಾಯಗಳ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕು ಎಂದರು.

ಇನ್ನು ಹಿಜಾಬ್ ವಿಚಾರವಾಗಿ ಅಲ್‍ಖೈದಾ(Al-Khaidha) ಸಂಘಟನೆಯ ವ್ಯಕ್ತಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಚೋದಿಸಲು ಪ್ರಯತ್ನಿಸುವವರ ವಿರುದ್ದ ಸರ್ಕಾರ ತನ್ನ ಸಾಮಾಥ್ರ್ಯಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಈ ರೀತಿಯ ಪ್ರಚೋದನೆಗಳನ್ನು ಸರ್ಕಾರ ನಿಯಂತ್ರಿಸಬೇಕು. ಅದೇ ರೀತಿ ಯಾರಾದರೂ ಪ್ರಚೋದಿಸಲು ಪ್ರಯತ್ನಿಸಿದರೆ ನೀವು ನಿಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ವರ್ತಿಸಬೇಕು. ತಪ್ಪು ಕೆಲಸಗಳನ್ನು ಮಾಡುವವರನ್ನು ಜನರು ಬೆಂಬಲಿಸಬಾರದು. ಯಾವುದೇ ರೀತಿಯ ವಿಷಯಗಳಿರಲಿ ಸರ್ಕಾರ ಅವುಗಳ ಬಗ್ಗೆ ನಿಯಂತ್ರಣ ಇಟ್ಟುಕೊಳ್ಳಬೇಕು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೆ ಕೆಲಸ ಮಾಡಿ, ಎಲ್ಲರನ್ನೂ ಜೊತೆಯಲ್ಲೇ ಕರೆದುಕೊಂಡು ಹೋಗಬೇಕೆಂದು ಕಿವಿಮಾತು ಹೇಳಿದರು. ಇನ್ನು ಮಲ್ಲಿಕಾರ್ಜುನ್ ಖರ್ಗೆ ಅವರು ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ರಾಜ್ಯ ರಾಜಕೀಯದಿಂದ ಖರ್ಗೆ ಅವರು ಅಂತರಕಾಯ್ದುಕೊಳ್ಳುತ್ತಿದ್ದಾರೆ. ಹಿಜಾಬ್, ಹಲಾಲ್, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಸೇರಿದಂತೆ ಯಾವುದೇ ವಿವಾದಕ್ಕೂ ಖರ್ಗೆ ಅವರು ಪ್ರತಿಕ್ರಿಯೆ ನೀಡಿರಲಿಲ್ಲ.

Exit mobile version