ಇದು ಯುಪಿ ಅಲ್ಲ, ಇಲ್ಲಿ ಲವ್ ಜಿಹಾದ್ ನಡೆಸುವುದಿಲ್ಲ : ಮಮತಾ ಬ್ಯಾನರ್ಜಿ!

Westbengal

ನಾಡಿಯಾ(Nadia) ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ(Rape) ಪ್ರಕರಣದ ಕುರಿತು ಪಶ್ಚಿಮ ಬಂಗಾಳದ(West Bengal) ಮುಖ್ಯಮಂತ್ರಿ(CM) ಮಮತಾ ಬ್ಯಾನರ್ಜಿ(Mamatha Banerjee) ಅವರು ಕೊಟ್ಟ ಹೇಳಿಕೆಯ ವಿರುದ್ಧ ತೀವ್ರ ಅಸಮಾಧಾನ ಕೇಳಿಬಂದಿದೆ. ಈ ಕುರಿತು ಖ್ಯಾತ ಚಲನಚಿತ್ರ ನಿರ್ಮಾಪಕ ಶ್ರೀಜಿತ್ ಮುಖರ್ಜಿ ಯಾವುದೇ ಮಾತುಗಳನ್ನು ಆಡದೇ ಮೌನ ಮುರಿದಿದ್ದಾರೆ.

ಮುಖರ್ಜಿ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ, “ಹ್ನಾಷ್ಖಾಲಿ ಅತ್ಯಾಚಾರ ಪ್ರಕರಣದ ಬಗ್ಗೆ ಸಿಎಂ ಅವರಿಂದ ಯೋಚಿಸಲಾಗದಷ್ಟು ಆಕ್ಷೇಪಾರ್ಹ ಮತ್ತು ಸೂಕ್ಷ್ಮವಲ್ಲದ ಕಾಮೆಂಟ್.” ಮಮತಾ ಬ್ಯಾನರ್ಜಿ ಅತ್ಯಾಚಾರವನ್ನು ಪ್ರಶ್ನಿಸಿದ ನಂತರ ಆಕ್ರೋಶ ವ್ಯಕ್ತವಾಗಿದೆ. ಅತ್ಯಾಚಾರದಿಂದ ಅಪ್ರಾಪ್ತ ಯುವತಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗುತ್ತಿದೆ, ನೀವು ಅದನ್ನು ಅತ್ಯಾಚಾರ ಎಂದು ಕರೆಯುತ್ತೀರಾ? ಅವಳು ಗರ್ಭಿಣಿನಾ? ಅಥವಾ ಪ್ರೇಮ ಸಂಬಂಧ ಇತ್ತೋ? ಅವರು ವಿಚಾರಿಸಿದ್ದಾರೆಯೇ? ತಿಳಿದಿಲ್ಲ. ಈ ಬಗ್ಗೆ ಪೊಲೀಸರನ್ನು ನಾನು ಕೇಳಿದ್ದೇನೆ, ಅವರು ಈಗಾಗಲೇ ಆತನನ್ನು ಬಂಧಿಸಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಆ ಹುಡುಗಿಗೆ ಆ ಹುಡುಗನ ಜೊತೆ ಪ್ರೇಮ ಸಂಬಂಧ ಇತ್ತು ಎಂಬುದು ನಿಜವಾಗಿದೆ. ಮಮತಾ ಬ್ಯಾನರ್ಜಿ, “ಇದು ಪ್ರೇಮ ಪ್ರಕರಣ ಎಂಬುದು ಸ್ಪಷ್ಟವಾಗಿದೆ, ಇಬ್ಬರ ಮನೆಯವರಿಗೆ ಈ ವಿಷಯ ತಿಳಿದಿರುವುದು ದೃಢಪಟ್ಟಿದೆ. ಇಬ್ಬರು ಸಂಬಂಧದಲ್ಲಿದ್ದರೆ, ನಾನು ಅದನ್ನು ನಿಲ್ಲಿಸಬಹುದೇ? ಇದು ಯುಪಿ ಅಲ್ಲ, ನಾವು ಇಲ್ಲಿ ಲವ್ ಜಿಹಾದ್ ಮಾಡುವುದಿಲ್ಲ. ಇದು ಅವರ ವೈಯಕ್ತಿಕ ಸ್ವಾತಂತ್ರ್ಯ, ಆದ್ರೆ ಯಾವುದೇ ದುಷ್ಕೃತ್ಯಗಳಿದ್ದರೆ, ಪೊಲೀಸರು ಅಪರಾಧಿಗಳನ್ನು ಬಂಧಿಸುತ್ತಾರೆ, ಒಬ್ಬ ಶಂಕಿತನನ್ನು ಕೂಡ ಈಗಾಗಲೇ ಬಂಧಿಸಲಾಗಿದೆ ಎಂದು ಘಟು ಧ್ವನಿಯಲ್ಲಿ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಅವರ ಹೇಳಿಕೆಯ ಬೆನ್ನಲ್ಲೇ ಟ್ವಿಟರ್ ನಲ್ಲಿ ಕೆಲವರು ಸಿಡಿದೆದ್ದು, ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಮಮತಾ ಬ್ಯಾನರ್ಜಿ ಅವರ ಹೇಳಿಕೆಯನ್ನು 2012ರ ಪಾರ್ಕ್ ಸ್ಟ್ರೀಟ್ ಅತ್ಯಾಚಾರ ಪ್ರಕರಣಕ್ಕೆ ಅವರ ಹೇಳಿಕೆಯನ್ನು ಹೋಲಿಸಿದ್ದಾರೆ. “ಮಮತಾ ಬ್ಯಾನರ್ಜಿ ಅವರು 10 ವರ್ಷಗಳ ಸವಾಲನ್ನು ಸ್ವೀಕರಿಸಿದ್ದಾರೆ. 2012 ರಲ್ಲಿ, ಅವರು ಪಾರ್ಕ್ ಸ್ಟ್ರೀಟ್ ಅತ್ಯಾಚಾರ ಸಂತ್ರಸ್ತೆಯನ್ನು ಅವಮಾನಿಸಿದ್ದರು ಮತ್ತು ಘಟನೆಯನ್ನು ಕಪೋಲಕಲ್ಪಿತ ಎಂದು ಕರೆದಿದ್ದರು. ಮತೋರ್ವ “ಅತ್ಯಾಚಾರವು ಅತ್ಯಾಚಾರ ಮತ್ತು ಅತ್ಯಾಚಾರಕ್ಕೆ ಯಾವುದೇ ಸಮರ್ಥನೆ ಇಲ್ಲ.

ನೀವು ಮಹಿಳೆಯಾಗಿದ್ದರೂ ಕೆಲವು ಅತ್ಯಾಚಾರ ಪ್ರಕರಣಗಳನ್ನು ಮರೆಮಾಡಿದ್ದೀರಿ. ನಿಮಗೆ ತಿಳಿದಿರಬೇಕು, ಈ ಪೀಳಿಗೆಯ ಮಹಿಳೆಯರು ಇದನ್ನು ಸರಿಯಾಗಿ ತೆಗೆದುಕೊಳ್ಳುತ್ತಿಲ್ಲ.”ಹಂಸಖಾಲಿಯಲ್ಲಿ 14 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆಯ ಕುರಿತು ಮಮತಾ ಬ್ಯಾನರ್ಜಿಯ ಕ್ರೂರವಾದ ಹೇಳಿಕೆ ಕೇವಲ ಅಸಹ್ಯಕರವಲ್ಲ ಆದರೆ ಸಂಪೂರ್ಣ ಅಕ್ರಮದಲ್ಲಿ ಮುಳುಗಿದೆ. ಇದು ಅಪರಾಧ. ಆಕೆಯ ಕೊಲೆ ಅಪರಾಧ. ಬಂಗಾಳ ಸಿಎಂ ಸಂತ್ರಸ್ತೆಯನ್ನು ಅವಮಾನಿಸಿದ್ದಾರೆ ಮತ್ತು ಆರೋಪಿಗಳನ್ನು ಸಮರ್ಥಿಸಿಕೊಂಡಿದ್ದಾರೆ, ”ಎಂದು ಟ್ವೀಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version