ಇದೇ ರೀತಿ ಆದ್ರೆ, ಮುಂದೊಂದು ದಿನ ಭಾರತದಲ್ಲಿ ಮಾಧ್ಯಮವೇ ಇರುವುದಿಲ್ಲ : ಮಮತಾ ಬ್ಯಾನರ್ಜಿ

West Bengal : ಬಿಬಿಸಿ (BBC News)ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯ ಸಮೀಕ್ಷೆಯ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಇದೇ ರೀತಿ ಮುಂದುವರಿದರೆ (Mamata Banerjee critisized government) ಮುಂದೊಂದು ದಿನ ದೇಶದಲ್ಲಿ ಯಾವುದೇ ಮಾಧ್ಯಮಗಳು ಇರುವುದಿಲ್ಲ ಎಂದು ಹೇಳಿದ್ದಾರೆ.

ದೆಹಲಿ(Delhi) ಮತ್ತು ಮುಂಬೈ(Mumbai) ನಗರದಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಸಮೀಕ್ಷೆ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ(West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಈ ಸಮೀಕ್ಷೆಯನ್ನು ಬಿಜೆಪಿಯ ರಾಜಕೀಯ ಅಜೆಂಡಾದ ಭಾಗ ಎಂದು ವ್ಯಂಗ್ಯವಾಡಿದ ಅವರು, ಇದು ಕೇವಲ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವುದಿಲ್ಲ, ಆದರೆ ಮುಂದೊಂದು ದಿನ ಈ ದೇಶದಲ್ಲಿ ಯಾವುದೇ ಮಾಧ್ಯಮಗಳು ಇರುವುದಿಲ್ಲ!

ಮಾಧ್ಯಮಗಳು ಈಗಾಗಲೇ ಅವರ ನಿಯಂತ್ರಣದಲ್ಲಿವೆ. ಮಾಧ್ಯಮಗಳು(Media) ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಲು ಸಾಧ್ಯವಿಲ್ಲ ಎಂದು ಹೇಳಿದರು. ಏಕೆಂದರೆ ಅವರು ಹಾಗೆ ಮಾಡಿದರೆ,

ಆಡಳಿತವು 24 ಗಂಟೆಗಳಲ್ಲಿ ಅವರ ಸೇವೆಯನ್ನು ಕಡಿತಗೊಳಿಸುತ್ತದೆ. ಇದು ಅವರ ನಿಯಂತ್ರಣ ಶಕ್ತಿಯಾಗಿದೆ. ಬಿಬಿಸಿ ಏನಾದರೂ ಅಕ್ರಮ ಮಾಡಿದ್ದರೆ ಮೊದಲು ನೋಟಿಸ್(Notice) ಕಳುಹಿಸಬೇಕಿತ್ತು ಎಂದು ಹೇಳಿದ್ದಾರೆ.

https://youtu.be/INx1lJ5D8jU

ನಾನು ಕಾನೂನುಬಾಹಿರ ವಿಷಯಗಳನ್ನು ಬೆಂಬಲಿಸುತ್ತಿಲ್ಲ. ಆದ್ರೆ, ಬಿಬಿಸಿ(BBC) ಈ ಸರ್ಕಾರದ ವಿರುದ್ಧ ಏನಾದರೂ ಮಾಡಿದರೇ,

ಅವರು ಮರುದಿನ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಾಧ್ಯ ಎಂಬುದನ್ನು ನಾನು (Mamata Banerjee critisized government) ನಂಬಲು ಸಾಧ್ಯವಿಲ್ಲ!

ಬಿಜೆಪಿಯ(BJP) ಆಡಳಿತಗಳು ದುರ್ಬಲ! ಅವರ ಜನಾದೇಶ ಎಲ್ಲಿದೆ? ಅವರು ಜನಾದೇಶದ ಬಗ್ಗೆ ಕಾಳಜಿ ವಹಿಸುವುದಿಲ್ಲ.

ಅವರ ಏಕೈಕ ಜನಾದೇಶ ಸರ್ವಾಧಿಕಾರ ಎಂದು ಆಡಳಿತಾರೂಢ ಬಿಜೆಪಿ ಸರಕಾರವನ್ನು ಹಿಟ್ಲರ್‌ನ(Hitler) ಸರ್ವಾಧಿಕಾರಕ್ಕೆ ಹೋಲಿಸಿ, ಮಾತನಾಡಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ ಸಿಎಂ ಮಮತಾ ಬ್ಯಾನರ್ಜಿ ಅವರು, ನೀವು ಅಧಿಕಾರದಲ್ಲಿದ್ದೀರಿ. ಆದ್ದರಿಂದ ನೀವು ಏನು ಬೇಕಾದರೂ ಮಾಡಬಹುದು ಎಂದು ನೀವು ಭಾವಿಸುತ್ತೀರಿ.

ಸರ್ಕಾರವು ನ್ಯಾಯಾಂಗವನ್ನು ನಿಯಂತ್ರಿಸಲು ಪ್ರಯತ್ನಿಸಿದೆ, ಆದರೆ ಅದು ತಟಸ್ಥವಾಗಿರಬೇಕು! ನ್ಯಾಯಾಂಗದಿಂದ ಮಾತ್ರ ಈ ದೇಶವನ್ನು ಉಳಿಸಲು ಸಾಧ್ಯ ಎಂದು ಹೇಳಿದ್ದಾರೆ.

Exit mobile version