ತಮಿಳುನಾಡಿನ ಕುಟುಂಬದ ಸಮಾರಂಭದಲ್ಲಿ ಡೋಲು ಭಾರಿಸಿ, ಸಂಭ್ರಮಿಸಿದ ಮಮತಾ ಬ್ಯಾನರ್ಜಿ!

Tamilnadu : ಗುರುವಾರ ತಮಿಳುನಾಡಿನ(Tamilnadu) ರಾಜಧಾನಿ ಚೆನ್ನೈನಲ್ಲಿ ನಡೆದ ರಾಜ್ಯಪಾಲ ಲಾ ಗಣೇಶನ್ ಅವರ ಕುಟುಂಬದ ಕಾರ್ಯಕ್ರಮವೊಂದಕ್ಕೆ ಹಾಜರಾದ ಪಶ್ಚಿಮ ಬಂಗಾಳದ(West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Ji Enjoys Drum Beat) ಕುಟುಂಬದ ಸಂಭ್ರಮದಲ್ಲಿ ಭಾಗಿಯಾದರು.

ಕುಟುಂಬದವರು ಮಮತಾ ಬ್ಯಾನರ್ಜಿ (Mamata Ji Enjoys Drum Beat )ಅವರನ್ನು ವಿಶೇಷವಾಗಿ ಸ್ವಾಗತಿಸಲು ಡೋಲು ಬಾರಿಸುವವರನ್ನು ಕರೆಸಿ, ಸ್ವಾಗತಿಸಿದರು.

ಮಮತಾ ಬ್ಯಾನರ್ಜಿ ಅವರು ಆಗಮಿಸುತ್ತಿದ್ದಂತೆ ಡೋಲು ಬಾರಿಸಲು ಶುರು ಮಾಡಿದ ತಂಡಕ್ಕೆ ನಮಸ್ಕರಿಸಿ, ಅವರೊಡನೆ ಸೇರಿ ಡೋಲು ಬಾರಿಸಿ ಸಂಭ್ರಮಿಸಿದರು.

ಈ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗಿದೆ.

ಈ ಒಂದು ವೀಡಿಯೊ ನೋಡಿದ ಬಳಿಕ ಮಮತಾ ಬ್ಯಾನರ್ಜಿ ಅವರ ಅಭಿಮಾನಿಯೊಬ್ಬರು “ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಅವರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲಲ್ಲ. ಕಾರ್ಯಕ್ರಮಗಳಿಗೆ ಆಗಮಿಸಿ, ಸಂಭ್ರಮಿಸುತ್ತಾರೆ” ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ : https://vijayatimes.com/chethan-over-reservation/

ಇನ್ನು ದುರ್ಗಾಪೂಜಾ ಕಾರ್ನೀವಲ್ ಸಮಯದಲ್ಲಿ ಜಾನಪದ ನೃತ್ಯಗಾರರೊಡನೆ ಸೇರಿಕೊಂಡ ಅವರು
ಕೋಲ್ಕತ್ತಾದಲ್ಲಿ ದುರ್ಗಾಪೂಜಾ ಆಚರಣೆಯ ಸಂದರ್ಭದಲ್ಲಿ, ಪ್ರಮುಖ 95 ದುರ್ಗಾ ಪೂಜೆಗಳನ್ನು ಒಳಗೊಂಡಿರುವ ಭವ್ಯ ಕಾರ್ನೀವಲ್‌ನಲ್ಲಿ ಬುಡಕಟ್ಟು ನೃತ್ಯಗಾರರ ಗುಂಪಿನೊಂದಿಗೆ ಹೆಜ್ಜೆ ಹಾಕಿ ಕುಪ್ಪಳಿಸಿದ್ದಾರೆ.

https://twitter.com/ANI/status/1588033823517732864?s=20&t=EUSnn4KLJpBmOKTxynkwwg

ದುರ್ಗಾ ಪೂಜೆ ಕಾರ್ನೀವಲ್‌ನಲ್ಲಿ ಬುಡಕಟ್ಟು ಹಾಡಿಗೆ ನೃತ್ಯ ಮಾಡಿದ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡಿತ್ತು.

ಈ ಒಂದು ವೀಡಿಯೊಗೆ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Exit mobile version