ಮಾಡಾಳ್‌ಗೆ ನಿರೀಕ್ಷಣಾ ಜಾಮೀನು ವಿರೋಧಿಸಿ ಸಿಜೆಐಗೆ ಪತ್ರ  ಬರೆದ ವಕೀಲರ ಸಂಘ

Bengaluru :  ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (mandal bail vs advocate association) ಅವರಿಗೆ ನಿರೀಕ್ಷಣಾ ಜಾಮೀನು ನೀಡಿರುವ ರಾಜ್ಯ ಹೈಕೋರ್ಟ್‌ನ ಕ್ರಮಕ್ಕೆ ಅಸಮಾಧಾನ  ವ್ಯಕ್ತಪಡಿಸಿರುವ 

ಬೆಂಗಳೂರು ವಕೀಲರ  ಸಂಘ ಈ ಕುರಿತು  ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ (mandal bail vs advocate association) ಬರೆದಿದೆ. 

ಬೆಳಗಾಗುವುದರೊಳಗೆ ವಿಚಾರಣೆ ನಡೆಸಿ  ನಿರೀಕ್ಷಣಾ ಜಾಮೀನು ಮಾನ್ಯ ಮಾಡಿರುವ ನ್ಯಾಯಾಂಗ ಪ್ರಕ್ರಿಯೆಗೆ ಬೆಂಗಳೂರು ವಕೀಲರ ಸಂಘ ತೀವ್ರ ಆಘಾ ತ ವ್ಯಕ್ತಪಡಿಸಿದೆ.

ಈ ಕುರಿತಂತೆ  ತುರ್ತು ಸಭೆ ನಡೆಸಿದ  ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ (Vivek Reddy), ಪ್ರಧಾನ  ಕಾರ್ಯದರ್ಶಿ ಟಿ.ಜಿ.ರವಿ ಮತ್ತು ಖಜಾಂಚಿ ಎಂ.ಟಿ.ಹರೀಶ್ ಅವರು  ಸುಪ್ರೀಂಕೋರ್ಟ್‌ ಮುಖ್ಯ

ನ್ಯಾಯಮೂತ್ರಿ  ಡಿ.ವೈ.ಚಂದ್ರಚೂಡ್ (D.Y.Chandrachud) ಅವರಿಗೆ  ಪತ್ರ ಬರೆದು, ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೆ ನಿರೀಕ್ಷಣಾ ಜಾಮೀನು ನೀಡಿರುವುದು  ನ್ಯಾಯಾಂಗದ ಬಗ್ಗೆ ಶ್ರೀ ಸಾಮಾನ್ಯರಿಗಿರುವ ನಂಬಿಕೆಯನ್ನು ಹುಸಿ ಮಾಡಿದೆ.

ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿ  ಕೆ.ನಟರಾಜನ್‌ ಅವರಿದ್ದ ಏಕಪೀಠ ಸದಸ್ಯ ಪೀಠ ನಡೆಸಿರುವ ಈ ಪ್ರಕ್ರಿಯೆ ಆಘಾತ ಉಂಟು ಮಾಡಿದೆ ಎಂದಿದೆ.

ಇದನ್ನು ಓದಿ: ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಮೊರೆ ಹೋದ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ!

ನಿರೀಕ್ಷಣಾ ಜಾಮೀನು ಕೋರಿಕೆಯ ಅರ್ಜಿಗಳು ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಲು ವಾರಗಟ್ಟಲೆ ಸಮಯ ತೆಗೆದುಕೊಳ್ಳುತ್ತವೆ. ಆದರೆ, ದೊಡ್ಡವರ ಪ್ರಕರಣಗಳನ್ನು ಮಾತ್ರ ದಿನಬೆಳಗಾಗುವದರೊಳಗೆ ಪುರಸ್ಕರಿಸಲಾಗುತ್ತಿದೆ. 

ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Mandal Virupakshappa)ವಿಚಾರಣೆಯಲ್ಲಿ  ನಡೆಸಿದ ತುರ್ತು ವಿಚಾರಣೆ, ಶ್ರೀಸಾಮಾನ್ಯರ ವಿಷಯದಲ್ಲೂ ಅನುಸರಿಸುವಂತಾಗಬೇಕು. 

ಈ ಪ್ರಕರಣದಿಂದಾಗಿ  ಸಾಮಾನ್ಯ ಜನರು ನ್ಯಾಯಾಂಗದ ಮೇಲಿನ ನಂಬಿಕೆ ಹುಸಿಗೊಳಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ. ಉಳ್ಳವರಿಗೆ ಒಂದು ಕಾನೂನು,

ಇಲ್ಲದವರಿಗೆ ಇನ್ನೊಂದು ಕಾನೂನು ಎಂಬ ರೀತಿಯಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆ ಸಾಗಬಾರದು.

ಈ ನಿಟ್ಟಿನಲ್ಲಿ  ನ್ಯಾಯಾಂಗ ವ್ಯವಸ್ಥೆಯ ತುರ್ತು ಸುಧಾರಣೆ ಅವಶ್ಯಕತೆಯಿದೆ.  ಹೀಗಾಗಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಈ ಕುರಿತು  ತುರ್ತು ಗಮನ ಹರಿಸಬೇಕು ಎಂದು ಬೆಂಗಳೂರು  ವಕೀಲರ ಸಂಘ ಪತ್ರ ಬರೆದಿದೆ.

ಇನ್ನು ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ(Mandal Virupakshappa) ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಆತನ ಮಗನ ಕಚೇರಿಯಲ್ಲಿ ಸುಮಾರು ಆರು ಕೋಟಿಗೂ ಅಧಿಕ  ಮೊತ್ತವನ್ನು ಲೋಕಾಯುಕ್ತ ಅಧಿಕಾರಿಗಳು  ವಶಪಡಿಸಿಕೊಂಡಿದ್ದರು. ಈ ಪ್ರಕರಣ ಇಡೀ ರಾಜ್ಯದಲ್ಲೇ ಭಾರೀ ಸದ್ದು ಮಾಡಿದೆ.
Exit mobile version