• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಮಂಗಳೂರಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳ ಬಂಧನ.

Preetham Kumar P by Preetham Kumar P
in ರಾಜ್ಯ
ಮಂಗಳೂರಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳ ಬಂಧನ.
0
SHARES
0
VIEWS
Share on FacebookShare on Twitter

ಮಂಗಳೂರು  ನ 24 : ಮಂಗಳೂರು ಹೊರಹೊಲಯದ ಉಳಾಯಿಬೆಟ್ಟು ಪರಾಯಿ ಎಂಬಲ್ಲಿನ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಎಂಟರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಭಾರತ ಮೂಲದ ನಾಲ್ವರು ಕಾರ್ಮಿಕರನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ನಗರವನ್ನೇ ಬೆಚ್ಚಿಬೀಳಿಸಿದ ಉಳಾಯಿಬೆಟ್ಟು ಪರಾರಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಜಾಯ್ ಸಿಂಗ್ ಯಾನೆ ಜಾಯಿಬಾನ್, ಮುಖೇಶ್ ಸಿಂಗ್, ಮನೀಶ್ ತಿಕ್ರಿ, ಮುನೀಮ್ ಸಿಂಗ್ ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾರ್ಖಂಡ್ ಮೂಲದ ಕೂಲಿ ಕಾರ್ಮಿಕ ದಂಪತಿಯ ಎಂಟರ ಹರೆಯ ಬಾಲಕಿಯನ್ನು ತನ್ನ ಸಹೋದರರೊಂದಿಗೆ ಆಟವಾಡುತ್ತಿದ್ದ ವೇಳೆ ದಿನಾಂಕ 21.11.2021 ರಂದು ಪುಸಲಾಯಿಸಿದ ಆರೋಪಿಗಳು ರಾಜ್ ಟೈಲ್ಸ್ ಫ್ಯಾಕ್ಟರಿಯ ಬಳಿಯಿರುವ ತಮ್ಮ ವಾಸಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ ನಂತರ ಕತ್ತು ಹಿಸುಕಿ ಕೊಲೆ ನಡೆಸಿರುವುದಾಗಿ ವಿಚಾರಣೆಯ ವೇಳೆ ಬಾಯಿ ಬಿಟ್ಟಿರುವುದಾಗಿ ತಿಳಿದು ಬಂದಿದೆ. ಬಂಧಿತ ಆರೋಪಿಗಳನ್ನು ಸದ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ

ಜಾರ್ಖಂಡ್ ಮೂಲದ ದಂಪತಿಗೆ ನಾಲ್ವರು ಮಕ್ಕಳಿದ್ದು, ಸುಮಾರು 2 ವರ್ಷಗಳಿಂದ ಈ ದಂಪತಿ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡುತ್ತಿದೆ. ನ.21ರಂದು ಮಧ್ಯಾಹ್ನ ದಂಪತಿಯ ನಾಲ್ಕು ಮಕ್ಕಳು ಫ್ಯಾಕ್ಟರಿ ಪಕ್ಕದಲ್ಲೇ ಆಟವಾಡುತ್ತಿತ್ತು.ಆದರೆ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಮೂರು ಮಕ್ಕಳು ಮಾತ್ರ ಗುಡಿಸಲಿಗೆ ಹಿಂದಿರುಗಿದೆ. ಮಕ್ಕಳ ಪೋಷಕರು ಅಕ್ಕಪಕ್ಕದವರನ್ನು ವಿಚಾರಿಸಿದಾಗ ವಿಷಯ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಮಗು ಸಿಗಲಿಲ್ಲ. ಎಲ್ಲಾ ಕಡೆ ಹರಿದಾಡಿದ್ದು, ಸುತ್ತಮುತ್ತಲ ಎಲ್ಲಾ ನಿವಾಸಿಗಳು ಶೋಧ ಕಾರ್ಯದಲ್ಲಿ ತೊಡಗಿದರು. ಸಂಜೆ 6 ಗಂಟೆ ಸುಮಾರಿಗೆ ಸ್ಥಳೀಯ ನಿವಾಸಿ ವಿಶ್ವನಾಥ್ ಎಂಬವರಿಗೆ ಮಗುವಿನ ಮೃತದೇಹ ತೋಡಿನ ಒಳಗಡೆ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಮಗುವನ್ನು ಅಲ್ಲಿಂದ ಮೇಲಕ್ಕೆತ್ತಿ ಪರಿಶೀಲಿಸಿದಾಗ ಬಾಲಕಿ ಮೃತಪಟ್ಟಿರುವುದು ಕಂಡುಬಂದಿತ್ತು.

ವಿಷಯ ತಿಳಿದ ತಕ್ಷಣ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದರು. ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ ಪ್ರಕರಣದ ಗಂಭೀರತೆಯನ್ನು ಅರಿತು ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದರು. ಈ ತಂಡ ಸಿಸಿಟಿವಿ ದೃಶ್ಯಾವಳಿ, ಸಿಡಿಆರ್ ವಿಶ್ಲೇಷಣೆ, ಪ್ರತ್ಯಕ್ಷ ಸಾಕ್ಷಿ, ಸಾಂದರ್ಭಿಕ ಸಾಕ್ಷಿಗಳನ್ನು ಕಲೆಹಾಕಿ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಆರೋಪಿಗಳು ತಪೊಪ್ಪಿಕೊಂಡಿದ್ದಾರೆ.

ಮೊದಲೇ ಯೋಜನೆ ರೂಪಿಸಿದ್ದ ಆರೋಪಿಗಳು

ಆರೋಪಿ ಮನೀಶ್ ತಿರ್ಕಿ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಕಳೆದ 11 ತಿಂಗಳಿಂದ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆರೋಪಿ ಜಯಬನ್ ಮತ್ತು ಮುಖೇಶ್ ಸಿಂಗ್ ಇದೇ ಫ್ಯಾಕ್ಟರಿಯಲ್ಲಿ ಕಳೆದ ಮೂರು ತಿಂಗಳಿಂದ ಕೂಲಿ ಕೆಲಸ ಮಾಡುತ್ತಿದ್ದರು. ನಾಲ್ಕನೇ ಆರೋಪಿ ಮುನೀಮ್ ಸಿಂಗ್ ಪುತ್ತೂರಿನಲ್ಲಿ ಕೂಲಿ ಕಾರ್ಮಿಕನಾಗಿದ್ದು, ಕೃತ್ಯ ನಡೆದ ಹಿಂದಿನ ದಿನ ಮನೀಶ್ ತಿರ್ಕಿಯನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದಾನೆ.

ಜಯಬನ್ ಮತ್ತು ಮನೀಶ್ ತಿರ್ಕಿ ಹೆಚ್ಚಾಗಿ ಒಂದೇ ಕೊಠಡಿಯಲ್ಲಿ ವಾಸ ಮಾಡುತ್ತಿದ್ದರು. ಇವರಿಬ್ಬರೂ ಮೃತ ಬಾಲಕಿಯನ್ನು ಈ ಹಿಂದೆ ಅನೇಕ ಬಾರಿ ರೂಮಿಗೆ ಬರಮಾಡಿಕೊಂಡು ಹೆಚ್ಚಿನ ಸಲುಗೆಯಿಂದ ಇದ್ದರು. ಬಾಲಕಿಗೆ ಚಾಕಲೇಟ್, ಚಿಕ್ಕಿ ನೀಡಿ ಬಾಲಕಿಯ ಮೈಕೈ ಮುಟ್ಟುವುದು, ಹೀಗೆ ಬಾಲಕಿಯ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ನ.21ರಂದು ಮಧ್ಯಾಹ್ನ 1.10ರ ಸುಮಾರಿಗೆ ಬಾಲಕಿಯು ತನ್ನ ಸಹೋದರ, ಸಹೋದರಿಯರೊಂದಿಗೆ ಫ್ಯಾಕ್ಟರಿಯ ಕಂಪೌಂಡಿನ ಒಳಗಡೆ ಇರುವ ನೀರಿನ ಟ್ಯಾಂಕ್ ಬಳಿ ಆಟವಾಡುತ್ತಿದ್ದಾಗ ಜಯಬನ್ ಅಲಿಯಾಸ್ ಜೈ ಸಿಂಗ್ ಬಾಲಕಿಯ ಬಾಯಿಯನ್ನು ಕೈಯಿಂದ ಮುಚ್ಚಿ ಆಕೆಯನ್ನು ಎತ್ತಿಕೊಂಡು ರೂಮಿನೊಳಗೆ ಹೋಗುತ್ತಾನೆ. ನಂತರ ಮುಖೇಶ್ ಸಿಂಗ್ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಾನೆ. ಬಳಿಕ ಮನೀಶ್ ತಿರ್ಕಿ ಲೈಂಗಿಕ ಕ್ರೌರ್ಯವೆಸಗುತ್ತಾನೆ. ಹೀಗೆ ಒಬ್ಬರ ನಂತರ ಮತ್ತೊಬ್ಬರು ಲೈಂಗಿಕ ದೌರ್ಜನ್ಯವೆಸಗುತ್ತಾರೆ. ಈ ವೇಳೆ ಬಾಲಕಿ ತೀವ್ರ ರಕ್ತಸ್ರಾವದಿಂದ ಮತ್ತು ನೋವಿನಿಂದ ಬಳಲಿ ಕಿರುಚಿದ್ದು, ನಂತರ ಜಯಬನ್ ಅಲಿಯಾಸ್ ಜೈ ಸಿಂಗ್ ಬಾಲಕಿಯ ಕತ್ತು ಹಿಸುಕಿ ಸಾಯಿಸುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Related News

224 ಕ್ಷೇತ್ರಗಳಿಗೂ ಒಂದೇ ಹಂತದ ಮತದಾನ ,ಮೇ 10 ಕ್ಕೆ ಮತದಾನ ಹಾಗೂ ಮೇ 13 ಕ್ಕೆ ಫಲಿತಾಂಶ
ರಾಜಕೀಯ

224 ಕ್ಷೇತ್ರಗಳಿಗೂ ಒಂದೇ ಹಂತದ ಮತದಾನ ,ಮೇ 10 ಕ್ಕೆ ಮತದಾನ ಹಾಗೂ ಮೇ 13 ಕ್ಕೆ ಫಲಿತಾಂಶ

March 29, 2023
ಮಂಡ್ಯದ ರ್ಯಾಲಿ ವೇಳೆ ಜನರ ಮೇಲೆ ನೋಟು ಎಸೆದ ಡಿ.ಕೆ ಶಿವಕುಮಾರ್ : ಭಾರೀ ವಿರೋಧ
ರಾಜಕೀಯ

ಮಂಡ್ಯದ ರ್ಯಾಲಿ ವೇಳೆ ಜನರ ಮೇಲೆ ನೋಟು ಎಸೆದ ಡಿ.ಕೆ ಶಿವಕುಮಾರ್ : ಭಾರೀ ವಿರೋಧ

March 29, 2023
ಮಂಡ್ಯದಲ್ಲಿ ಸುಮಲತಾ ಫುಲ್‌ ಆಕ್ಟೀವ್‌; ಮದ್ದೂರು ಗೆಲ್ಲಲು ರಣತಂತ್ರ
ರಾಜಕೀಯ

ಮಂಡ್ಯದಲ್ಲಿ ಸುಮಲತಾ ಫುಲ್‌ ಆಕ್ಟೀವ್‌; ಮದ್ದೂರು ಗೆಲ್ಲಲು ರಣತಂತ್ರ

March 29, 2023
10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!
ಪ್ರಮುಖ ಸುದ್ದಿ

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!

March 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.