ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಸಂಪರ್ಕಿಸುವ ರೈಲುಗಳ ಸೇವೆ ಸ್ಥಗಿತ: ಸಮಯ ಬದಲಾವಣೆ

Mangalore: ನವೆಂಬರ್ 24 ಮತ್ತು 25 ರಂದು ಎರಡು ದಿನಗಳ ಕಾಲ ರೈಲು ಸೇವೆ ಸ್ಥಗಿತಗೊಳ್ಳಲಿದ್ದು, (mangalore train timing change) ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹೆಚ್ಚುವರಿ

ಪ್ಲಾಟ್‌ಫಾರ್ಮ್ ನಿರ್ಮಾಣ ಕಾಮಗಾರಿ ಆರಂಭವಾದ ಹಿನ್ನೆಲ್ಲೆಯಲ್ಲಿ ನವೆಂಬರ್ 24ರ ರೈಲು ಸಂಖ್ಯೆ 06487 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು (Mangalore Central-Kabaka Puttur )

ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 06486 ಕಬಕ ಪುತ್ತೂರು- ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (Express) ಅನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ರದ್ದಾಗುವ ರೈಲುಗಳು
೧. ನವೆಂಬರ್ 24 ರಂದು ಮಡಗಾಂವ್ ಜಂಕ್ಷನ್‌ನಿಂದ (Madgaon Junction) ಹೊರಡುವ ರೈಲು ಸಂಖ್ಯೆ 10107 ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ಮೆಮು ಎಕ್ಸ್‌ಪ್ರೆಸ್

ಠೋಕೂರಿನಲ್ಲೇ ಕೊನೆಗೊಳ್ಳುತ್ತದೆ. ತೋಕೂರು ಮತ್ತು ಮಂಗಳೂರು ಸೆಂಟ್ರಲ್ ನಡುವೆ ರೈಲು ಭಾಗಶಃ ರದ್ದಾಗಲಿದ್ದು, ರೈಲು ಸಂಖ್ಯೆ 06485 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಎಕ್ಸ್‌ಪ್ರೆಸ್

ಮತ್ತು ರೈಲು ಸಂಖ್ಯೆ 06484 ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಅನ್ನು ನವೆಂಬರ್ 25ರಂದು ಸಂಪೂರ್ಣ ರದ್ದುಗೊಳಿಸಲಾಗಿದೆ.

೨. ನವೆಂಬರ್ (November) 24 ರಂದು ಮಡಗಾಂವ್ ಜಂಕ್ಷನ್‌ನಿಂದ ಹೊರಡುವ ರೈಲು ಸಂಖ್ಯೆ 06601 ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು, ಮಂಗಳೂರು

ಜಂಕ್ಷನ್‌ನಲ್ಲೇ ಕೊನೆಗೊಳ್ಳುತ್ತದೆ. ರೈಲು ಮಂಗಳೂರು ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ (mangalore train timing change) ನಡುವಿನ ರೈಲುಗಳು ಭಾಗಶಃ ರದ್ದುಗಲಿವೆ.

ರೈಲು ಕಾರ್ಯಾಚರಣೆಯಲ್ಲಿ ಬದಲಾವಣೆ

೧. ಮಂಗಳೂರು ಸೆಂಟ್ರಲ್-ಮಡ್ಗಾಂವ್ ಜಂಕ್ಷನ್ ಮೆಮು ಎಕ್ಸ್‌ಪ್ರೆಸ್ ರೈಲು ಸಂಖ್ಯೆ 10108, ನವೆಂಬರ್ 24 ರಂದು ಮಂಗಳೂರು ಸೆಂಟ್ರಲ್ (Mangalore Central) ಬದಲಿಗೆ ತೋಕೂರು

ನಿಲ್ದಾಣದಿಂದ ಹೊರಡಲಿದ್ದು, ಮಂಗಳೂರು ಸೆಂಟ್ರಲ್ ಮತ್ತು ತೋಕೂರ್ ನಡುವೆ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗುವುದು (ತೋಕೂರಿನಲ್ಲಿ ನಿರ್ಗಮನ ಸಮಯ ಸಂಜೆ 4.25)

೨. ಮಂಗಳೂರು ಸೆಂಟ್ರಲ್-ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (West Coast Superfast Express) ರೈಲು ಸಂಖ್ಯೆ 22638, ನವೆಂಬರ್ 24 ರಂದು

ಮಂಗಳೂರು ಸೆಂಟ್ರಲ್ ಬದಲಿಗೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದೆ. (ಮಂಗಳೂರು ಜಂಕ್ಷನ್‌ನಲ್ಲಿ ನಿಗದಿತ ನಿರ್ಗಮನ ಸಮಯ ರಾತ್ರಿ 11.45)

೩.ಮಂಗಳೂರು ಸೆಂಟ್ರಲ್-ಕೋಜಿಕೋಡ್ (Kozhikode) ಎಕ್ಸ್‌ಪ್ರೆಸ್ ರೈಲು ಸಂಖ್ಯೆ 16610, ನವೆಂಬರ್ 25 ರಂದು ಮಂಗಳೂರು ಸೆಂಟ್ರಲ್ ಬದಲಿಗೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದೆ.

(ಮಂಗಳೂರು ಜಂಕ್ಷನ್‌ನಲ್ಲಿ ನಿಗದಿತ ನಿರ್ಗಮನ ಸಮಯ ಬೆಳಗ್ಗೆ 5.15)

ಇದನ್ನು ಓದಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Exit mobile version