ಹಿಜಾಬ್ ವಿವಾದ : ಯು.ಟಿ.ಖಾದರ್ ಬಗ್ಗೆ ಅಸಮಾಧಾನ ಹೊರಹಾಕಿದ ವಿದ್ಯಾರ್ಥಿನಿ!

highcourt

ಕರಾವಳಿಯಲ್ಲಿ(Coastal Region) ಮತ್ತೆ ಹಿಜಾಬ್(Hijab) ಸದ್ದು ಮಾಡುತ್ತಿದೆ. ಮಂಗಳೂರು ವಿಶ್ವವಿದ್ಯಾಲಯ(Mangaluru University) ಸೇರಿದಂತೆ ಕರಾವಳಿ ಭಾಗದಲ್ಲಿ ಹಿಜಾಬ್‍ ಧಾರಿ ವಿದ್ಯಾರ್ಥಿನಿಯರ ಹೋರಾಟಗಳು ಸದ್ದು ಮಾಡುತ್ತಿವೆ.

ಹೈಕೋರ್ಟ್ ತೀರ್ಪಿಗೆ(Highcourt Verdict) ಡೊಂಟ್‍ಕೇರ್ ಎಂದಿರುವ ಮುಸ್ಲಿಂ ವಿದ್ಯಾರ್ಥಿನಿಯರು ನಾವು ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಮಂಗಳೂರು ವಿವಿ ಸೇರಿದಂತೆ ಅನೇಕ ಕಡೆ ಹಿಜಾಬ್‍ಗೆ ಅವಕಾಶ ನಿರಾಕರಿಸಿದ ಬೆನ್ನಲ್ಲೇ ವಿದ್ಯಾರ್ಥಿನಿಯರು, ತಮ್ಮ ಹೋರಾಟಕ್ಕೆ ಬೆಂಬಲ ಕೋರಿ ಕಾಂಗ್ರೆಸ್ ಶಾಸಕ(Congress MLA) ಯು.ಟಿ.ಖಾದರ್(UT Khadhar) ಅವರನ್ನು ಭೇಟಿ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ವಿದ್ಯಾರ್ಥಿನಿ ಗೌಸಿರ್, “ನಾವು ಯು.ಟಿ.ಖಾದರ್ ಅವರನ್ನು ಭೇಟಿಯಾಗಿದ್ದೇವೆ.

ಆದರೆ ಅವರಿಂದ ಸರಿಯಾದ ಪ್ರತಿಕ್ರಿಯೆ ಬರಲಿಲ್ಲ. ಅವರು ಅಡ್ಯಾರ್ ಹೋಗಿ ಕ್ರಿಕೆಟ್ ಆಡುತ್ತಿದ್ದಾರೆ” ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ನಮ್ಮ ಹೋರಾಟಕ್ಕೆ ಬೆಂಬಲ ನೀಡುವ ಧಾರ್ಮಿಕ ಪಂಡಿತರು, ವಿದ್ಯಾರ್ಥಿ ಸಂಘಟನೆಗಳು, ಸ್ತ್ರೀಪರವಾಗಿರುವ ಯಾರೇ ಆಗಲಿ ಅವರ ಜೊತೆ ನಾವು ಹೋಗುತ್ತೇವೆ. ಇನ್ನು ನಾವು ಕಾನೂನು ರೀತಿಯಲ್ಲಿ ಹೋಗಬೇಕೆಂದು ಅನೇಕರು ಸಲಹೆ ನೀಡುತ್ತಾರೆ. ಆದರೆ ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ನಮಗೆ ಈಗಾಗಲೇ ಹಾಜರಾತಿ ಕಡಿಮೆಯಾಗಿದೆ. ಇನ್ನಷ್ಟು ಹಾಜರಾತಿ ಕಡಿಮೆಯಾದರೆ ಪರೀಕ್ಷೆಗೆ ತೊಂದರೆಯಾಗುತ್ತದೆ.

ಹೀಗಾಗಿ ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಗೌಸಿರ್ ಹೇಳಿದ್ದಾರೆ. ಇನ್ನು ಕರ್ನಾಟಕ ರಾಜ್ಯ ಹೈಕೋರ್ಟ್ ಶಾಲಾ-ಕಾಲೇಜಿನಲ್ಲಿ ಹಿಜಾಬ್ ಧರಿಸದಂತೆ ತೀರ್ಪು ನೀಡಿದೆ. ಈ ತೀರ್ಪಿನ ವಿರುದ್ದ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್‍ಗೆ(Supremecourt) ಮೇಲ್ಮನವಿ ಸಲ್ಲಿಸಿದ್ದು, ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.

Exit mobile version