ಫೆ.23 ಮಾರ್ಟಿನ್‌ ಟೀಸರ್‌ ; ಚಿತ್ರದಲ್ಲಿ 15 ಕೆಜಿ ತೂಕದ ಗನ್‌ ಹಿಡಿದು ಫೈಟ್‌ ಮಾಡಿದ್ದೀನಿ : ಧ್ರುವ ಸರ್ಜಾ

Bengaluru : ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರವಾಗಿರುವ ಆಕ್ಷ್ಯನ್‌ ಪ್ರಿನ್ಸ್‌ ನಟನೆಯ ಮಾರ್ಟಿನ್‌(Martin movie) ಚಿತ್ರದ ಬಗ್ಗೆ ಇದೀಗ ಹೊಸ ಮಾಹಿತಿಗಳು ದೊರೆತಿದ್ದು,

ಚಿತ್ರದ ಬಗ್ಗೆ ನಟ ಧ್ರುವ ಸರ್ಜಾ(Dhruva Sarja) ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಮಾರ್ಟಿನ್‌ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಧ್ರುವ ಸರ್ಜಾ ಅವರು, ಇದೇ ಫೆ.23 ರಂದು ನಮ್ಮ ಮಾರ್ಟಿನ್‌ ಚಿತ್ರದ ಟೀಸರ್‌ (Teaser) ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ. ನಾನು ಏನು ಹೇಳ್ತೀನಿ,

ನಿಮ್ಮ ಬಳಿ ಒಂದು ಮನವಿ ಮಾಡ್ತೀನಿ ಅಂದ್ರೆ, ಇಷ್ಟು ದಿನವೇ ನಾವೆಲ್ಲರೂ ಕಾದಿದ್ದೀವಿ ಅಲ್ವಾ? ಇನ್ನು ಸ್ವಲ್ಪ ದಿನ ಟೀಸರ್‌ ಬಿಡುಗಡೆ ಆಗುತ್ತೆ. ಆಗ ಟೀಸರ್‌ ನೋಡಿ, ನೋಡಿದ ಮೇಲೆ ನಿಮಗೆ ಏನೆಲ್ಲಾ ಪ್ರಶ್ನೆಗಳನ್ನು ಕೇಳಬೇಕು

ಅನಿಸುತ್ತೋ ಆಗ ಕೇಳಿ. ಅಲ್ಲಿಯವರೆಗೂ ನಮಿಗೂ ಏನೂ ಹೇಳಬೇಕೋ, ಏನು ಹೇಳಬಾರದೋ ತಿಳಿಯದು. 23 ಆದ ನಂತರ ನೀವು ಕೇಳೋ ಪ್ರಶ್ನೆಗೆ ಉತ್ತರ ಕೊಡಲು ನಾವು ಕೂಡ ತಯಾರಾಗಬಹುದು.

ಇದನ್ನೂ ಓದಿ: ಜೇಮ್ಸ್‌ ಕ್ಯಾಮರೂನ್‌ ನನ್ನ ಮಗ ರಾಮ್ ಚರಣ್‌ನನ್ನು ಹೊಗಳಿದ್ದು, ಆಸ್ಕರ್‌ ಬಂದಷ್ಟೇ ಖುಷಿ : ಮೆಗಾಸ್ಟಾರ್‌ ಚಿರಂಜೀವಿ

ನಮಗೂ ಒಂದು ಅವಕಾಶ ಸಿಗುತ್ತದೆ. ಮಾರ್ಟಿನ್‌ ಚಿತ್ರದ ಟೀಸರ್‌ ಅನ್ನು ಲಹರಿ ಯೂಟ್ಯೂಬ್‌ ಚಾನೆಲ್‌ನಲ್ಲಿ (Lahari Youtube Channel) ಬಿಡುಗಡೆಗೊಳಿಸಲು ಯೋಜಿಸಿದ್ದೇವೆ. ಮಾರ್ಟಿನ್‌ ಚಿತ್ರದ ಟೀಸರ್‌ ಅನ್ನು

ಥಿಯೇಟ್ರಿಕಲ್‌ ಅನುಭವ ನೀಡಲು ಕೂಡ ಪ್ಲಾನ್‌ ಮಾಡಿದ್ದೀವಿ. ಫಸ್ಟ್‌ ಟೈಮ್‌ ಪೈಡ್‌ ಮಾಡುವ ಬಗ್ಗೆ ಯೋಚಿರುವ ನಾವು, ಮಾರ್ಟಿನ್‌ ಚಿತ್ರದ ಟೀಸರ್‌ ಅನ್ನು ವೀರೇಶ್‌ ಚಿತ್ರಮಂದಿರದಲ್ಲಿ (Veeresh Theatre)

ಆಯೋಜಿಸಿದ್ದೇವೆ. ಟೀಸರ್‌ ಆಗಿರುವ ಕಾರಣ ಒಂದು ಚಿತ್ರಮಂದಿರದಲ್ಲಿ ಮಾತ್ರ ಆಯೋಜಿಸಿದ್ದೀವಿ. ಚಿತ್ರದ ಟ್ರೇಲರ್‌ (Martin movie) ಅನ್ನು ಹಲವು ಚಿತ್ರಮಂದಿರಗಳಲ್ಲಿ ಆಯೋಜಿಸಲಿದ್ದೇವೆ.

ನಮ್ಮ ಚಿತ್ರದಲ್ಲಿ ಒಂದು ಶಾಟ್‌ ಅನ್ನು ನಾಲ್ಕು ನಾಲ್ಕು ಬಾರಿ ಶೂಟ್‌ ಮಾಡಬೇಕಿತ್ತು. ಎಷ್ಟು ದಿನ ಚಿತ್ರೀಕರಣ ಮಾಡಿದ್ವಿ ಎಂಬುದನ್ನು ಬಿಟ್ಬಿಡಣ ಸರ್, ಕಡೆಯದಾಗಿ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದನ್ನು ಜನರು ನೋಡಿ ನಿರ್ಧರಿಸಲಿ ಅಷ್ಟೇ!

ನಾನು ಚಿತ್ರದಲ್ಲಿ ಬಳಸಿದ ಗನ್‌ ಹೆಸರು zu 24 ಅಂತ, ಅದು ಒಂದು 15 ಕೆ.ಜಿಯಷ್ಟು ತೂಕವಿತ್ತು. ಅದನ್ನು ಹಿಡಿದು ಚಿತ್ರದಲ್ಲಿ ನನ್ನ ಪಾತ್ರವನ್ನು ನಿಭಾಯಿಸಿದ್ದೀನಿ ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ.

Exit mobile version