ಇಂದಿನಿಂದ ಮಾಸ್ಕ್ ಕಡ್ಡಾಯ ; ಮಾಸ್ಕ್ ಧರಿಸದೆ ಇದ್ದಲ್ಲಿ 250 ರೂ. ದಂಡ!

mask

ರಾಜ್ಯದಲ್ಲಿ ಕೋವಿಡ್(Covid-19) ಮುನ್ಸೂಚನೆ ದೊರೆತ್ತಿದ್ದು, ಈ ಬಗ್ಗೆ ರಾಜ್ಯದ ಆರೋಗ್ಯ ಇಲಾಖೆ(State Health Department) ಮಹತ್ವದ ನಿಲುವು ತೆಗೆದುಕೊಂಡಿದೆ.

ಹೌದು, ರಾಜ್ಯದಲ್ಲಿ ಕೋವಿಡ್ ಹರಡುವಿಕೆ ತಪ್ಪಿಸಲು ಆರೋಗ್ಯ ಸಚಿವರಾದ(Health Minister) ಡಾ. ಕೆ ಸುಧಾಕರ್(Dr. K Sudhakar) ಮತ್ತು ರಾಜ್ಯ ಸರ್ಕಾರ ಕೋವಿಡ್ ವಿರುದ್ಧ ಗಟ್ಟಿಯಾಗಿ ಹೋರಾಡಲು ಮುಂಜಾಗ್ರತಾ ಕ್ರಮಗಳಾದ ಮಾಸ್ಕ್ ಧಾರಣೆ(FaceMask), ಸಾಮಾಜಿಕ ಅಂತರ(Social Distancing) ಕಾಯ್ದುಕೊಳ್ಳುವುದನ್ನು ಮುನ್ನೆಲೆಗೆ ತಂದಿದೆ. ಈ ನಿಯಮವನ್ನು ಈಗ ಮತ್ತೊಮ್ಮೆ ಜಾರಿ ಮಾಡಿರುವ ರಾಜ್ಯ ಸರ್ಕಾರ, ರಾಜ್ಯದ ಜನರಿಗೆ ಶಿಸ್ತುಬದ್ಧವಾಗಿ ಪಾಲನೆ ಮಾಡುವಂತೆ ಮನವಿ ಮಾಡಿದೆ.

ಕೋವಿಡ್ ನಾಲ್ಕನೇ ಅಲೆಯ ತೀವ್ರತೆಯನ್ನು ಗಮನಿಸಿ, ಮೇ1 ರಿಂದ ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಿದೆ. ಈ ಮೂಲಕ ಜನರಿಗೆ ಎಚ್ಚರಿಕೆ ನೀಡಿರುವ ರಾಜ್ಯ ಆರೋಗ್ಯ ಇಲಾಖೆ, ಜನಸಾಮಾನ್ಯರು ಕೋವಿಡ್ ನಿಯಮವನ್ನು ತಪ್ಪದೇ ಪಾಲಿಸುವುದು ಒಳಿತು. ಹೀಗಾಗಿಯೇ ಮೇ 1 ರಿಂದ ಮಾಸ್ಕ್ ನಿಯಮ ಕಡ್ಡಾಯವಾಗಿದೆ ಮತ್ತು ಈ ನಿಯಮವನ್ನು ಉಲ್ಲಂಘಿಸಿದರೆ 250 ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆಯ ಸೂಚನೆ ನೀಡಿದೆ.

ಮೇ1ರ ಮೊದಲ ವಾರ ಜನರಿಗೆ ಮಾಸ್ಕ್ ಧರಿಸಲು ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಲಿದ್ದಾರೆ. ಆದ್ರೆ, ಜನರು ಮಾಸ್ಕ್ ಆದೇಶವನ್ನು ಪಾಲಿಸದೇ ಇದ್ದರೆ ಮೊದಲ ವಾರ ದಂಡ ವಿಧಿಸದೇ, ಎಚ್ಚರಿಕೆ ನೀಡಿ ವೀಕ್ಷಣೆಯಲ್ಲಿ ತೊಡಗಲಿದ್ದಾರೆ. ಮುಂದಿನ ವಾರದಿಂದ ಯಾವುದೇ ರಿಯಾಯಿತಿ ನೀಡದೇ ದಂಡ ವಿಧಿಸಲಾಗುವುದು ಎಂದು ಖಡಕ್ ಸೂಚನೆ ನೀಡಿದೆ. ಈ ಮುಖೇನ ರಾಜ್ಯದ ಜನರು ಕೋವಿಡ್ ನಿಯಮವನ್ನು ಪಾಲಿಸುವುದು ಅಗತ್ಯವಾಗಿದೆ!

Exit mobile version