ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿ ಮಹಿಳೆಗೆ ವಂಚನೆ

ಬೆಂಗಳೂರು, ನ. 28:  ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿ ಮದುವೆಯಾಗುತ್ತೇನೆ ಎಂದು ನಂಬಿಸಿ ಮಹಿಳೆಯರ ಬಳಿ ಲಕ್ಷ ಲಕ್ಷ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಸ್ವೈನ್ರಾಜ್ ಕಿಶೋರ್ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿ ಮದುವೆಯಾಗಿ ಹಣ ಪಡೆದು ಮೋಸ ಮಾಡುವವರ ಸಂಖ್ಯೆ ಅಧಿಕವಾಗುತ್ತಲೇ ಇದೆ. ಈಗಾಗಲೇ ಹೀಗೆ ಮೋಸ ಮಾಡುತ್ತಿದ್ದ ಹಲವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೂ ಮ್ಯಾಟ್ರಿಮೋನಿಯ ಹೆಸರಿನಲ್ಲಿ ಮೋಸ ಮಾಡುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.

ಮ್ಯಾಟ್ರಿಮೋನಿ, ಶಾದಿ.ಕಾಂನಲ್ಲಿ ಮಹಿಳೆಯರಿಗೆ ಪರಿಚಯವಾಗುತ್ತಿದ್ದ ಈತ ಬಳಿಕ ಮದುವೆಯಾಗುತ್ತೇನೆ ಎಂದು ನಂಬಿಸುತ್ತಿದ್ದ. ನಂತರ ತಾನು ಕನ್ಸ್​ಟ್ರಕ್ಷನ್​ ವ್ಯವಹಾರದಲ್ಲಿ ತೊಡಗಿದ್ದು, ತುರ್ತಾಗಿ ಹಣದ ಅವಶ್ಯಕತೆ ಇದೆ ಎನ್ನುತ್ತಿದ್ದ ಈಗ ತನ್ನ ಸ್ಕಾಟ್ಲೆಂಡ್​ ಅಕೌಂಟ್​ಗೆ ಹಣ ಕಳಿಸುವಂತೆ ಬೇಡಿಕೆ ಇಡುತ್ತಿದ್ದ. ನಂತರ ಅಕೌಂಟ್ ಬ್ಲಾಕ್ ಆಗಿದೆಯೆಂದು ಮತ್ತೊಂದು ಅಕೌಂಟ್ ಗೆ ಹಣ ಪಡೆದು ವಂಚಿಸುತ್ತಿದ್ದ
ಈತ ಇತ್ತೀಚೆಗೆ ವೈಟ್ ಫೀಲ್ಡ್ ಮೂಲದ ಯುವತಿಗೆ ಮದುವೆಯಾಗುವುದಾಗಿ ಹೇಳಿ ಸುಮಾರು 24 ಲಕ್ಷ ಹಣ ಪಡೆದು ವಂಚಿಸಿದ್ದ. ಈ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ವೈಟ್ ಫೀಲ್ಡ್ ಸಿಇಎನ್ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ಇವನ ಕತೆಯಾದರೆ ಇನ್ನೂ ಹಲವಾರು ಮಂದಿ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಆದರೆ ಇದು ಬೆಳಕಿಗೆ ಬರುವುದಿಲ್ಲ. ಅನೇಕರು ಮರ್ಯಾದೆಗೆ ಅಂಜಿ ಸುಮ್ಮನಿರುತ್ತಾರೆ. ಹೆಣ್ಣುಮಕ್ಕಳು ಮದುವೆಗಾಗಿ ಇಲ್ಲಿ ತಮ್ಮ ಹೆಸರು ನೋಂದಾಯಿಸಿದರೆ ಕೆಲವು ಗಂಡಸರು ಮದುವೆಯಾದವರೂ ಕೂಡ ಇದರಲ್ಲಿ ನೋಂದಣಿ ಮಾಡಿಕೊಂಡು ಹೆಣ್ಣು ಮಕ್ಕಳನ್ನು ವಂಚಿಸುತ್ತಾರೆ. ಹೆಣ್ಣು ಮಕ್ಕಳ ಜೊತೆ ಮದುವೆಯಾಗುತ್ತೇನೆಂದು ಹೇಳಿ ಸತಾಯಿಸುತ್ತಾ ಸಮಯ ಹಾಳು ಮಾಡಿಕೊಳ್ಳುವುದರ ಜೊತೆ ಮೊಬೈಲ್‌ಗೆ ರೀಚಾರ್ಜ್ ಮಾಡಿಸಿಕೊಳ್ಳುತ್ತಾರೆ.

Exit mobile version