ಕಾಂಬೋಡಿಯಾ, ಡಿ. 04: ಪಾಕಿಸ್ತಾನದ ಮೃಗಾಲಯದಲ್ಲಿ ಏಕಾಂಗಿಯಾಗಿ ಜೀವನ ಸವೆಸಿದ್ದ ಆನೆ ಕಾವನ್ ಇದೀಗ ಕಾಂಬೋಡಿಯಾದ ಅಭಯಾರಣ್ಯದಲ್ಲಿ ಹೊಸ ಜೀವನವನ್ನು ಆರಂಭಿಸಿದೆ. ಬರೋಬ್ಬರಿ 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮತ್ತೊಂದು ಆನೆಯ ಜೊತೆ ಕಾಲ ಕಳೆದಿದೆ.
36 ವರ್ಷದ ಆನೆ ಇಸ್ಲಾಮಾಬಾದ್ನ ಮೃಗಾಲಯದಲ್ಲಿದ್ದ ಏಕೈಕ ಏಷಿಯನ್ ಆನೆಯಾಗಿತ್ತು. ಇದರ ಏಕಾಂಗಿತನ ನೋಡಿ ಮರುಗಿದ ಅಮೆರಿಕಾದ ಗಾಯಕಿ ಚೆರ್ ಸಾಮಾಜಿಕ ಮಾಧ್ಯಮ ಹಾಗೂ ಪ್ರಾಣಿ ಪ್ರೀಯರ ನೆರವಿನಿಂದ ಅಭಿಯಾನವನ್ನು ನಡೆಸಿ ಆನೆಯನ್ನು ಕಾಂಬೋಡಿಯಾ ಅಭಯಾರಣ್ಯಕ್ಕೆ ವರ್ಗಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು.
ಕುಲೆನ್ ಪ್ರಾಮ್ ಟೆಪ್ ವನ್ಯಜೀವಿ ಅಭಯಾರಣ್ಯದಲ್ಲಿರುವ ಕಾವನ್ ತನ್ನ ಸೊಂಡಿಲಿನಿಂದ ಮತ್ತೊಂದು ಆನೆಯ ಸೊಂಡಿಲನ್ನ ಸ್ಪರ್ಶಿಸಿದ್ದು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.