Meesho : ಉದ್ಯೋಗಿಗಳ ಮಾನಸಿಕ ಆರೋಗ್ಯಕ್ಕಾಗಿ 11 ದಿನಗಳ ರಜೆ ಘೋಷಿಸಿದ ಮೀಶೋ ಕಂಪನಿ!

New Delhi : ತನ್ನ ಉದ್ಯೋಗಿಗಳ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಲುವಾಗಿ, ಇ-ಕಾಮರ್ಸ್ ಕಂಪನಿ(E-Commerce) ಮೀಶೋ(Meesho) ಸತತ ಎರಡನೇ ವರ್ಷವೂ 11 ದಿನಗಳ “ರೀಸೆಟ್ ಮತ್ತು ರೀಚಾರ್ಜ್ ಬ್ರೇಕ್” ಅನ್ನು ಘೋಷಿಸಿದೆ.

ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಮೀಶೋ ಕಂಪನಿ, “ಉದ್ಯೋಗಿಗಳ ಮಾನಸಿಕ ಆರೋಗ್ಯಕ್ಕಾಗಿ ಅವರನ್ನು ಉದ್ಯೋಗದಿಂದ ಸಂಪೂರ್ಣವಾಗಿ ಅನ್ಪ್ಲಗ್ ಮಾಡಲು ಮತ್ತು ಬಿಡುವಿಲ್ಲದ ಹಬ್ಬದ ಮಾರಾಟದ ಅವಧಿಯ ನಂತರ ಅವರ ಮಾನಸಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡಲು ಈ ರಜೆಯನ್ನು ಘೋಷಿಸಿದ್ದೇವೆ” ಎಂದು ಹೇಳಿದೆ.

ಇದನ್ನೂ ಓದಿ : https://vijayatimes.com/chethan-allegation-over-siddaramaiah/

ಇದೇ ವೇಳೆ ಮೀಶೋ ಸಂಸ್ಥಾಪಕ ಮತ್ತು ಸಿಇಒ(CEO) ಸಂಜೀವ್ ಬರ್ನ್ವಾಲ್(Sanjeev Burnwal) ಅವರು ಟ್ವೀಟ್(Tweet) ಮಾಡಿ, “ಉತ್ತಮ ಮಾನಸಿಕ ಆರೋಗ್ಯಕ್ಕೆ ಕೆಲಸದ ಜೀವನದ ಸಮತೋಲನವು ಅತ್ಯಗತ್ಯ. ಅದಕ್ಕಾಗಿಯೇ ನಾವು ಸತತ ಎರಡನೇ ವರ್ಷವೂ 11 ದಿನಗಳ “ರೀಸೆಟ್ ಮತ್ತು ರೀಚಾರ್ಜ್ ಬ್ರೇಕ್” ಅನ್ನು ಘೋಷಿಸಿದ್ದೇವೆ.

ಮುಂಬರುವ ಹಬ್ಬದ ಋತುವಿನಲ್ಲಿ ಮತ್ತು ಕೆಲಸದ ಜೀವನದ ಸಮತೋಲನದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಂಡಿದ್ದೇವೆ” ಎಂದಿದ್ದಾರೆ. ಇನ್ನು ಮೀಶೋ ಈ ಹಿಂದೆ ಕ್ಷೇಮ ರಜೆ, 30 ವಾರಗಳ ಪೋಷಕರ ರಜೆಯನ್ನು ಘೋಷಿಸಿತ್ತು. ಇದೀಗ ಕಳೆದ ವರ್ಷಗಳಿಂದ 11 ದಿನಗಳ “ರೀಸೆಟ್ ಮತ್ತು ರೀಚಾರ್ಜ್ ಬ್ರೇಕ್” ರಜೆಯನ್ನು ಉದ್ಯೋಗಿಗಳ ಮಾನಸಿಕ ಆರೋಗ್ಯವನ್ನು ಸಮತೋಲಿನಲ್ಲಿಡಲು ನೀಡುತ್ತಿದೆ.

ಇದನ್ನೂ ಓದಿ : https://vijayatimes.com/success-record-of-arasu-film/

ಈಗಾಗಲೇ ಜಗತ್ತಿನ ಅನೇಕ ಕಂಪನಿಗಳು ಈ ಉಪಕ್ರಮವನ್ನು ಜಾರಿಗೊಳಿಸಿದ್ದು, ಉದ್ಯೋಗಿಗಳ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

Exit mobile version