ಭಾರತದಲ್ಲಿ ಶೇ. 50% ರಷ್ಟು ಪ್ರವಾಸೋಧ್ಯಮಕ್ಕೆ ಮೊಘಲರೇ ಕಾರಣ : ಮೊಹಬೂಬಾ ಮುಫ್ತಿ!

Mehabooba

ಭಾರತದಲ್ಲಿ ಇಂದು ಪ್ರವಾಸೋಧ್ಯಮ(Tourism) ಅಭಿವೃದ್ದಿ(Devolapment) ಹೊಂದಲು ಮೊಘಲರೇ(Mughals)ಕಾರಣ. ಅವರು ನಿರ್ಮಿಸಿದ ಸ್ಮಾರಕಗಳು ಜಗತ್ತಿನ ಗಮನ ಸೆಳೆಯುತ್ತಿವೆ.

ಭಾರತದಲ್ಲಿ ಶೇಕಡಾ 50ರಷ್ಟು ಪ್ರವಾಸೋಧ್ಯಮಕ್ಕೆ ಮೊಘಲರೇ ಕಾರಣ ಎಂದು ಜಮ್ಮು ಕಾಶ್ಮೀರದ(Jammu & Kashmir) ಮಾಜಿ ಮುಖ್ಯಮಂತ್ರಿ ಮೊಹಬೂಬಾ ಮುಫ್ತಿ(Mehabooba Mufthi) ಹೇಳಿದ್ದಾರೆ. ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಮೊಲಘಲರ ಕಾಲದಲ್ಲಿ ಹಿಂದೂ ದೇವಾಲಯಗಳನ್ನು ನಾಶ ಮಾಡಲಾಗಿದೆ. ಅದರಲ್ಲೂ ಔರಂಗಜೇಬನ ಕಾಲದಲ್ಲಿ ಲಕ್ಷಾಂತರ ಹಿಂದೂ ದೇವಾಲಯಗಳನ್ನು ನಾಶ ಮಾಡಲಾಗಿದೆ ಎಂಬ ಚರ್ಚೆ ಕುರಿತು ಪ್ರತಿಕ್ರಿಯಿಸಿದ ಅವರು,

ಭಾರತಕ್ಕೆ ಮೊಘಲರ ಕೊಡುಗೆ ಅಪಾರವಾದದು. ಮೊಘಲರ ಕಾರಣದಿಂದಲೇ ಇಂದು ಭಾರತದಲ್ಲಿ ಪ್ರವಾಸೋಧ್ಯಮ ಅಭಿವೃದ್ದಿ ಕಂಡಿದೆ. ಆದರೆ ಕೋಮುವಾದಿ ಬಿಜೆಪಿ ಅದನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ. ಹೀಗಾಗಿಯೇ ಬಿಜೆಪಿ ಮಸೀದಿಗಳ ಹಿಂದೆ ಬಿದ್ದಿದೆ. ನಾವು ಎಲ್ಲಿ ಪೂಜಿಸುತ್ತಿದ್ದೆವೋ, ಅಲ್ಲಿಯೇ ನಮ್ಮ ದೇವರಿದ್ದಾನೆ ಎಂದು ವಾದಿಸುತ್ತಾರೆ. ಇದೀಗ ಜ್ಞಾನವಾಪಿ ಮಸೀದಿಯ ಹಿಂದೆ ಬಿದ್ದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಇದೇ ಸಂದರ್ಭದಲ್ಲಿ ವಿವೇಕ ಅಗ್ನಿಹೋತ್ರಿ(Vivek Agnihotri) ಅವರ “ದಿ ಕಾಶ್ಮೀರ್ ಫೈಲ್ಸ್”(The Kashmir Files) ಚಿತ್ರವನ್ನು ಟೀಕಿಸಿದ ಅವರು, ಈ ಚಿತ್ರ ಬಿಡುಗಡೆಯಾದ ನಂತರ ದೇಶದಲ್ಲಿ ಹಿಂದೂ- ಮುಸ್ಲಿಮರ ನಡುವೆ ದ್ವೇಷ ಹೆಚ್ಚಾಗಿದೆ. ಕಾಶ್ಮೀರ ಪಂಡಿತರನ್ನು ಗುರಿಯಾಗಿಸಿಕೊಂಡು ಈ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ನೈಜ ಸಮಸ್ಯೆಯಿಂದ ಜನರನ್ನು ದೂರವಿರಿಸಲು ಈ ರೀತಿಯ ವಿವಾದಗಳನ್ನು ಸೃಷ್ಟಿಸಲಾಗುತ್ತದೆ.

ಇದು ಬಿಜೆಪಿಯ ಕುತಂತ್ರದ ರಾಜಕೀಯ. ಇಂದು ದೇಶದಲ್ಲಿ ಬಿಜೆಪಿ ಈ ರೀತಿಯ ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ಪ್ರಚಾರ ನಡೆಸಿ, ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Exit mobile version