2 ನೇ ದಿನಕ್ಕೆ ಮುಂದುವರೆದ ಮೇಕೆದಾಟು ಪಾದಯಾತ್ರೆ

mekedatu

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಇನ್ನೂ ಅನೇಕ ಕಾಂಗ್ರೇಸ್‌ ಮುಖಂಡರು ಪಾಲ್ಗೊಂಡಿದ್ದಾರೆ.

ಬೆಂಗಳೂರು: ಫೆಬ್ರವರಿ 27 ಭಾನುವಾರದಂದು ಚಾಲನೆ ಪಡೆದುಕೊಂಡ ಮೇಕೆದಾಟು ಪಾದಯಾತ್ರೆ ಇಂದು ಕೂಡ ಮುಂದುವರೆದಿದೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಇನ್ನೂ ಅನೇಕ ಕಾಂಗ್ರೇಸ್‌ ಮುಖಂಡರು ಪಾಲ್ಗೊಂಡಿದ್ದಾರೆ.

ಇಂದಿನ ಪಾದಯಾತ್ರೆ ಬಿಡದಿಯಿಂದ ಪ್ರಾರಂಭಗೊಂಡು ಕೆಂಗೇರಿಯವರೆಗೆ ನಡೆಯಲಿದೆ.ಮಂಗಳವಾರ ಕೆಂಗೇರಿಯಿಂದ ಪ್ರಾರಂಭಗೊಂಡು BTM layout ನ ಅದ್ವೈತ್ ಪೆಟ್ರೋಲ್ ಬಂಕ್ ವರೆಗೂ ನಡೆಯಲಿದೆ.ಬುಧವಾರ ಅದ್ವೈತ್ ಪೆಟ್ರೋಲ್ ಬಂಕ್ ನಿಂಧ ಆರಂಭವಾಗಿ ಅರಮನೆ ಮೈದಾನದವರೆಗೆ ಮುಂದುವರೆಯಲಿದೆ.ಗುರುವಾರದಂದು ನ್ಯಾ‍ಷನಲ್‌ ಕಾಲೇಜು ಆಟದ ಮೈದಾನದಲ್ಲಿ ಕೊನೆಗೊಳ್ಳಲಿದೆ.

ಈ ಮೇಕೆದಾಟು ಪಾದಯಾತ್ರೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ರವರು ನಾವು ಇಲ್ಲಿಯವರೆಗೆ ಹಲವಾರು  ಕಾರ್ಯಕ್ರಮಗಳನ್ನು ಮಾಡಿದ್ದೆವು , ಆದರೆ ಇಂದಿನ ಈ ಪಾದಯಾತ್ರೆ ಕಾಂಗ್ರೇಸ್‌ ಪಕ್ಷ ನೇತ್ರತ್ವ ವಹಿಸಿಕೊಂಡಿದ್ದರೂ ಎಲ್ಲಾ ಪಕ್ಷದವರೂ ಭಾಗವಹಿಸಿದ್ದಾರೆ.ಯಾಕೆಂದರೆ ಇಂದಿನ ಹೋರಾಟ ನೀರಿಗಾಗಿ,ಈ ನೀರು ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದಿದ್ದಾರೆ.

_ Rashmitha Kotian

Exit mobile version