2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಆಡಲ್ಲ : ಅಭಿಮಾನಿಗಳಿಗೆ ಶಾಕ್ ಕೊಟ್ಟ ಲಿಯೋನೆಲ್ ಮೆಸ್ಸಿ..!

Beijing : ಫುಟ್ಬಾಲಿಗರಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾಗಿರುವ ಅರ್ಜೇಂಟೀನಾದ (Messi not play Worldcup) ನಾಯಕ ಲಿಯೋನೆಲ್ ಮೆಸ್ಸಿ ಅವರ ಲಕ್ಷಾಂತರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಹೌದು ಫುಟ್ಬಾಲ್ ಮಾಂತ್ರಿಕ ಮೆಸ್ಸಿ 2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ (FIFA World Cup) ತಾವು ಆಡುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಚೀನಾದ (China) ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಸ್ಸಿ, ಕತಾರ್‌ನಲ್ಲಿ (Qatar) ಆಡಿದ ವಿಶ್ವಕಪ್ ನನ್ನ ಕೊನೆಯ ವಿಶ್ವಕಪ್‌ ಆಗಿದೆ ಮುಂದಿನ ವಿಶ್ವಕಪ್‌ ನಾನು ಆಡುವುದಿಲ್ಲ ಎಂಬ ಹೇಳಿಕೆ ಕೊಟ್ಟಿದ್ದಾರೆ.

35 ವರ್ಷದ ಲಿಯೋನೆಲ್ ಮೆಸ್ಸಿ ಕತಾರ್‌ನಲ್ಲಿ ಕಳೆದ ಬಾರಿ ತಮ್ಮ ಚೊಚ್ಚಲ ಫಿಫಾ ವಿಶ್ವಕಪ್ (Messi not play Worldcup) ಎತ್ತಿ ಹಿಡಿದಿದ್ದರು.

ಆ ಬಳಿಕ ಅವರು ಮುಂದಿನ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಯಾವುದೇ ರೀತಿಯ ನಿರ್ಧಾರ ಪ್ರಕಟಿಸಿರಲಿಲ್ಲ ಆದರೆ ಸಹ ಆಟಗಾರರು,ಕೋಚ್‌ಗಳು ಮತ್ತು ಲಕ್ಷಾಂತರ ಅಭಿಮಾನಿಗಳು

ಮೆಸ್ಸಿ 2026ರ ಫಿಫಾ ವಿಶ್ವಕಪ್‌ನಲ್ಲೂ ಆಡಬಹುದು ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದರು.ಆದರೆ ಎಲ್ಲರ ನಿರೀಕ್ಷೆ ಈಗ ಹುಸಿಯಾಗಿದೆ.

ಸ್ವತಃ ಲಿಯೋನೆಲ್ ಮೆಸ್ಸಿಯೇ ಸದ್ಯ ಈ ಎಲ್ಲಾ ಗೊಂದಲಗಳಿಗೆ ಉತ್ತರ ನೀಡಿದ್ದಾರೆ.ಮೆಸ್ಸಿ ಫ್ರಾನ್ಸ್‌ನ ಪ್ಯಾರಿಸ್‌ ಸೈಂಟ್ ಜರ್ಮೈನ್‌ (PSG) ತಂಡವನ್ನು ಇತ್ತೀಚೆಗಷ್ಟೇ ತೊರೆದಿದ್ದಾರೆ ಅಮೆರಿಕದ ಮಿಯಾಮಿ ತಂಡದ ಪರ ಮುಂದೆ ಆಡಲಿದ್ದಾರೆ.

ಇದನ್ನೂ ಓದಿ : ನೀಟ್ ಯುಜಿ ಫಲಿತಾಂಶ ಬಿಡುಗಡೆ :ಫಲಿತಾಂಶ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಲಿಂಕ್..

ಅಂದಹಾಗೆ ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಪರ ಆಡಲು ಲಿಯೋನೆಲ್ ಮೆಸ್ಸಿ ಈ ಹಿಂದೆ ಸುಮಾರು 348 ಕೋಟಿ ರೂ. ಪಡೆದಿದ್ದರು ಎಂದು ವರದಿಯಾಗಿತ್ತು.

ಹೀಗಾಗಿ ಈ ಬಾರಿ ಕೂಡ ಬೃಹತ್ ಮೊತ್ತದ ಒಪ್ಪಂದ ಅಮೆರಿಕನ್ ಕ್ಲಬ್ ಪರ ಆಡಲು ನಡೆದಿರುವ ಸಾಧ್ಯತೆ ಹೆಚ್ಚಿದೆ.

ಲಿಯೊನೆಲ್‌ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡ 2022ರ ಫಿಫಾ ವಿಶ್ವಕಪ್ ಫುಟ್ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಅರ್ಜೆಂಟೀನಾ ನಾಯಕ ಲಿಯೊನೆಲ್‌ ಮೆಸ್ಸಿ ಕಳೆದ ವರ್ಷ

ನವೆಂಬರ್-ಡಿಸೆಂಬರ್ ಅವಧಿಯಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಅವರು ಈ ಟೂರ್ನಿಯಲ್ಲಿ 7 ಗೋಲು ಗಳಿಸಿ ಮಿಂಚಿದ್ದಲ್ಲದೆ,

3 ಗೋಲು ಗಳಿಸಲು ತಮ್ಮ ಸಹ ಆಟಗಾರರಿಗೆ ನೆರವು ನೀಡಿದ್ದರು. ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಇದರ ಫಲವಾಗಿ ಮುಡಿಗೇರಿಸಿಕೊಂಡಿದ್ದರು.

ರಶ್ಮಿತಾ ಅನೀಶ್

Exit mobile version