ಮೋದಿ ಐಷಾರಾಮಿ ವಿಮಾನ ಖರೀದಿಗೆ ರಾಹುಲ್‌ ನುಡಿಕಿಡಿ

ಹೊಸದಿಲ್ಲಿ: ಪ್ರಧಾನ ಮಂತ್ರಿ ಮೋದಿ ಪ್ರವಾಸಕ್ಕೆ  ೮೪೦೦ ಕೋಟಿ ಮೊತ್ತದ ಐಷಾರಾಮಿ ಬೋಯಿಂಗ್‌ ವಿಮಾನ ಖರೀದಿಸಿರೋದನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಇಂಥಾ ವಿಷಮ ಸ್ಥಿತಿಯಲ್ಲಿ ಇಂಥಾ ವಿಮಾನ ಖರೀದಿ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಬೋಯಿಂಗ್ 777 ವಿಮಾನಗಳು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುವ ಏರ್ ಇಂಡಿಯಾ ವಿಮಾನಗಳ ಪಡೆಗೆ  ಸೇರ್ಪಡೆಯಾಗಲಿದೆ. ಕ್ಷಿಪಣಿ ನಿರೋಧಕ ವ್ಯವಸ್ಥೆಯ ಜೊತೆಗೆ  ಕ್ಷಿಪಣಿಗಳ ಮಾರ್ಗವನ್ನು ತಪ್ಪಿಸುವ ಚಾಣಾಕ್ಷತೆ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಈ ಬೋಯಿಂಗ್ ಹೊಸ ವಿಮಾನದಲ್ಲಿ ಅಳವಡಿಸಲಾಗಿದೆ. ಅಮೆರಿಕಾದ ಅಧ್ಯಕ್ಷರ ವಿಶೇಷ ವಿಮಾನದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು  ಹೊಂದಿದೆ.

ಪ್ರಧಾನಿ ಜೊತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮತ್ತು ನರೇಂದ್ರ ಮೋದಿಯವರ ವಿದೇಶ ಪ್ರವಾಸಕ್ಕೆ ಮತ್ತು ಇತರ ವಿಶೇಷ ಸಂಚಾರಕ್ಕೆ ಮಾತ್ರ ಈ ವಿಮಾನದ ಬಳಕೆ ಮಾಡಲಾಗುವುದು. ಸಭಾ ಕೊಠಡಿಗಳು, ಸಂವಹನಕ್ಕಾಗಿ ಆಧುನಿಕ ವ್ಯವಸ್ಥೆ, ಪ್ರಧಾನಿ ಮತ್ತು ರಾಷ್ಟ್ರಗಳಿಗೆ  ಪ್ರತ್ಯೇಕ ಕಾರ್ಯಾಲಯ ಈ ಹೊಸ ಬೋಯಿಂಗ್777 ವಿಮಾನದಲ್ಲಿದೆ. ಅಮೆರಿಕದ ಡಲ್ಲಾಸ್ ನಲ್ಲಿ ವಿಮಾನ ನಿರ್ಮಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವಿಮಾನದ ಬೆಲೆ ೮೪೦೦ ಕೋಟಿ ಅನ್ನೋದು ಎಲ್ಲರ ಹುಬ್ಬೇರಿಸಿದೆ.

Exit mobile version