ಮೋದಿ ಯುಎಸ್ ಭೇಟಿ ; ಮೇಕ್ ಇನ್ ಇಂಡಿಯಾ ಯೋಜನೆಗೆ ಭಾರೀ ಉತ್ತೇಜನ

Washington: ಪ್ರಧಾನಿ ನರೇಂದ್ರ ಮೋದಿ (Modi Make in India) ಅವರ ಅಮೇರಿಕಾದ ಭೇಟಿಯ ವೇಳೆ ಅನೇಕ ಮಹತ್ವದ ಒಪ್ಪಂದಗಳಿಗೆ ಎರಡು ದೇಶಗಳು ಸಹಿ ಹಾಕಿದ್ದು,

ಭಾರತದ ಮೇಕ್ ಇನ್ ಇಂಡಿಯಾ ಈ ಮೂಲಕ ಯೋಜನೆಗೆ ಭಾರೀ ಉತ್ತೇಜನ ಸಿಕ್ಕಿದಂತಾಗಿದೆ.

ಅಮೆರಿಕದ ಜನರಲ್ ಎಲೆಕ್ಟ್ರಿಕ್ಸ್ನ ಏರೋಸ್ಪೇಸ್ ಆರ್ಮ್ ಕಂಪನಿಯೂ ಫೈಟರ್ ಜೆಟ್ (Fighter Jet) ಎಂಜಿನ್ಗಳನ್ನು ಭಾರತದಲ್ಲಿ ತಯಾರಿಸಲು ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್

ಲಿಮಿಟೆಡ್ ತಂತ್ರಜ್ಞಾನ ವರ್ಗಾವಣೆ ಮತ್ತು ಸಹಕಾರ ಒದಗಿಸುವುದಕ್ಕೆ ಕೈಜೋಡಿಸುವ ಒಪ್ಪಂದಕ್ಕೆ ಸಹಿಹಾಕಿದೆ. ಅದರಿಂದಾಗಿ ಗಗನ ಕುಸುಮವೇ ಹಾಕಿದ್ದ ಫೈಟರ್ ಜೆಟ್ ಎಂಜಿನ್ ತಯಾರಿಕೆಯ

ಇದನ್ನು ಓದಿ: ಮೋದಿ ಯುಎಸ್ ಭೇಟಿ ; ಮೇಕ್ ಇನ್ ಇಂಡಿಯಾ ಯೋಜನೆಗೆ ಭಾರೀ ಉತ್ತೇಜನ

ತಂತ್ರಜ್ಞಾನ ಭಾರತಕ್ಕೆ ಲಭ್ಯವಾಗಲಿದೆ. ಪ್ರಧಾನಿ ಮೋದಿಯವರು ವಾಷಿಂಗ್ಟನ್ನಲ್ಲಿ ಜನರಲ್ ಎಲೆಕ್ಟ್ರಿಕ್ಸ್ ಅಧ್ಯಕ್ಷ ಹೆಚ್. ಲಾರೆನ್ಸ್ ಕಲ್ಫ್ (H.Lawrence Kalf) ಜೂನಿಯರ್ ಅವರನ್ನು ಭೇಟಿ ಮಾಡಿ,

ಚರ್ಚೆ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ಒಪ್ಪಂದ (Modi Make in India) ಸಹಿ ಹೊರಬಿದ್ದಿದೆ.

ಜನರಲ್ ಎಲೆಕ್ಟ್ರಿಕ್ಸ್ನ ಏರೋಸ್ಪೇಸ್ (Aerospace) ಆರ್ಮ್ ಕಂಪನಿಯೂ ಏರೋಸ್ಪೇಸ್ನ F414 ಎಂಜಿನ್ಗಳನ್ನ ಭಾರತದಲ್ಲಿ ಜಂಟಿಯಾಗಿ ಉತ್ಪಾದಿಸುವ ಅಂಶ ಒಪ್ಪಂದದಲ್ಲಿದೆ. ಇದೊಂದು ಐತಿಹಾಸಿಕ ಒಪ್ಪಂದವಾಗಿದ್ದು,

ಇದರಿಂದ ಮಿಲಿಟರಿ ನೌಕಾಪಡೆ ಮತ್ತು ವಾಯುಪಡೆಯ ಅಗತ್ಯತೆಗಳನ್ನು ಪೂರೈಸಲು ಗುಣಮಟ್ಟದ ಎಂಜಿನ್ಗಳನ್ನು ಉತ್ಪಾದಿಸಲು ಸಹಕಾರಿಯಾಗುತ್ತದೆ ಎನ್ನಲಾಗಿದೆ. ಜನರಲ್ ಎಲೆಕ್ಟ್ರಿಕ್ಸ್ನ

ಏರೋಸ್ಪೇಸ್ ಆರ್ಮ್ ಕಂಪನಿಯೂ ಇಲ್ಲಿಯವರೆಗೆ 1,600 ಕ್ಕಿಂತ ಹೆಚ್ಚು ಎಫ್414 ಎಂಜಿನ್ಗಳನ್ನು ವಿತರಿಸಿದೆ. ಜಾಗತಿಕವಾಗಿ ಈ ಎಂಜಿನ್ಗೆ ಭಾರೀ ಬೇಡಿಕೆ ಇದೆ.

ಬೆಂಗಳೂರಿನಲ್ಲಿ ಅಮೇರಿಕಾ ರಾಯಭಾರಿ ಕಚೇರಿ : ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯಿಂದ ಕನ್ನಡಿಗರಿಗೂ ಶುಭ ಸುದ್ದಿ ಸಿಗುವ ಸುಳಿವು ಸಿಕ್ಕಿದೆ. ಅಮೇರಿಕಾ ಕರ್ನಾಟಕದ

ಬೆಂಗಳೂರು ಹಾಗೂ ಗುಜರಾತಿನ ಅಹಮದಾಬಾದ್ನಲ್ಲಿ ತನ್ನ ರಾಯಭಾರ ಕಚೇರಿ ತೆರೆಯಲು ಚಿಂತನೆ ನಡೆಸುವುದಾಗಿ ಹೇಳಿದೆ. ಸದ್ಯ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಹಾಗೂ ಹೈದರಾಬಾದ್ನಲ್ಲಿ

ಅಮೆರಿಕದ ರಾಯಭಾರ ಕಚೇರಿಗಳಿವೆ. ಇನ್ನು ಭಾರತ ಅಮೇರಿಕಾ ನ್ಯೂಯಾರ್ಕ್(New York) , ವಾಷಿಂಗ್ಟನ್, ಸ್ಯಾನ್ ಫ್ರಾನ್ಸಿಸ್ಕೋ, ಚಿಕಾಗೋ, ಹೂಸ್ಟನ್ ಹಾಗೂ ಅಟ್ಲಾಂಟಾದಲ್ಲಿ 5 ರಾಯಭಾರ

ಕಚೇರಿಗಳನ್ನು ಹೊಂದಿದೆ. ಕರ್ನಾಟಕದ ನಾಗರಿಕರು ಅಮೆರಿಕ ವೀಸಾ ಪಡೆಯಲು ಚೆನ್ನೈ ಅಥವಾ ಹೈದರಾಬಾದ್ (Hyderabad) ಹೋಗುವುದು ಅನಿವಾರ್ಯವಾಗಿತ್ತು.

Exit mobile version