ಖೇಲ್ ರತ್ನ ಪ್ರಶಸ್ತಿಯ ಹೆಸರು ಬದಲಾವಣೆ ಹಿನ್ನಲೆ ಮೋದಿಗೆ ಪಠಾಣ್ ಟಾಂಗ್

ನವದೆಹಲಿ, ಆ. 06: ಭಾರತದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಧ್ಯಾನ್ ಚಂದ್ ಖೇಲ್ ರತ್ನ ಎಂದು ಮರು ನಾಮಕರಣ ಮಾಡಿದ ಕುರಿತು ಟ್ವೀಟ್ ಮಾಡಿದ ಕ್ರಿಕೆಟಿಗ ಇರ್ಫಾನ್‌ ಪಠಾಣ್ ಈ ನಡೆಯನ್ನು ನಾನು ಸ್ವಾಗತಿಸುತ್ತೇನೆ ಕ್ರೀಡಾ ಪಟುಗಳನ್ನು ಗರುತಿಸುವುದು ಮತ್ತು ಕ್ರೀಡಾ ಪಟುಗಳ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡುತ್ತಿರುವುದು ಸ್ವಾಗತಾರ್ಹ ಇದು ಧ್ಯಾನ್ ಚಂದ್ ಹೆಸರಿನಿಂದ ಪ್ರಾರಂಭವಾಗಿದೆ. ಭವಿಷ್ಯದಲ್ಲೂ ಕೂಡ ಕ್ರೀಡಾ ಪಟುಗಳ ಹೆಸರು ಕ್ರೀಡಾಂಗಣಕ್ಕೆ ಇಡುವಂತಾಗಲಿ ಎಂದು ಟ್ವೀಟ್  ಮುಖೇನ ಪರೋಕ್ಷವಾಗಿ ಕುಟಿಕಿದ್ದಾರೆ.

ಈ ಹಿಂದೆ ಗುಜರಾತ್ ನಲ್ಲಿ ನಿರ್ಮಾಣಗೊಂಡ ವಿಶ್ವದ ಅತೀದೊಡ್ಡ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಡಲಾಗತ್ತು. ಇನ್ನು 2018ರಲ್ಲಿ ಲಖನೌನ ಎಕನಾ ಇಂಟರನ್ಯಾಷನಲ್ ಸ್ಟೇಡಿಯಂ ಹೆಸರನ್ನು ಅಟಲ ಬಿಹಾರಿ ವಾಜಪೇಯಿ ಇಂಟರ್ ನ್ಯಾಷನಲ್ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಪಠಾಣ್ ಟ್ವೀಟ್ ಪರ ವಿರೋಧಕ್ಕೆ ಚರ್ಚೆಯಾಗಿದೆ.

Exit mobile version