ಫ್ರಾನ್ಸ್, ಯುಎಇಗೆ ಮೋದಿ ಭೇಟಿ ; ಉನ್ನತ ಸಿಇಒಗಳೊಂದಿಗೆ ಮಾತುಕತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಭೇಟಿ ನೀಡಲಿದ್ದು, ಈ ವೇಳೆ ಎರಡು ದೇಶಗಳಲ್ಲಿರುವ (Modi visits France UAE) ಉನ್ನತ ಕಂಪನಿಗಳ

ಸಿಇಒಗಳೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 13 ರಂದು ಪ್ಯಾರಿಸ್ನಲ್ಲಿ ಸಿಇಒಗಳು, ರಾಜಕೀಯ ನಾಯಕರು ಮತ್ತು ಪ್ರಭಾವಿಗಳೊಂದಿಗೆ

ಸಂವಾದ ನಡೆಸಲಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ (Modi visits France UAE) ಮ್ಯಾಕ್ರನ್

ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ದೂರಿ ಸ್ವಾಗತ ಕೋರಲು ಭಾರೀ ಸಿದ್ದತೆಗಳನ್ನೇ ಮಾಡಿಕೊಂಡಿದ್ದಾರೆ. ಇನ್ನು ಭಾರತಕ್ಕೆ ಹಿಂದಿರುಗುವ ಮಾರ್ಗದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ನ

ಮುನಿ ಮರ್ಡರ್‌ ಸೀಕ್ರೆಟ್ : ಜೈನ ಮುನಿ ಹಂತಕರಿಗೆದೆಯಾ ಉಗ್ರರ ನಂಟು? 6 ಲಕ್ಷ ಸಾಲವೇ ಸಾವಿಗೆ ಕಾರಣನಾ?

ಅಬುಧಾಬಿಗೆ ಒಂದು ದಿನದ ಭೇಟಿ ನೀಡಲಿದ್ದಾರೆ. ಯುಎಇ ಜೊತೆಗಿನ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಲು

ಪ್ರಧಾನಿ ಮೋದಿ ಅಬುಧಾಬಿಯಲ್ಲಿ ಭೇಟಿ ನೀಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ಅಮೇರಿಕಾದಿಂದ ಹಿಂದಿರುಗುವಾಗ, ಮಧ್ಯಪ್ರಾಚ್ಯದ ಈಜಿಪ್ಟ್ಗೆ ದ್ವಿಪಕ್ಷೀಯ ಮಾತುಕತೆಗಾಗಿ ಎರಡು ದಿನಗಳ ಭೇಟಿ ನೀಡಿದ್ದರು. ಸದ್ಯ ಭಾರತದ ಪ್ರವಾಸದಲ್ಲಿರುವ ಸೌದಿ

ಅರೇಬಿಯಾದ ಮಾಜಿ ನ್ಯಾಯ ಮಂತ್ರಿ ಮತ್ತು ಮುಸ್ಲಿಂ ವರ್ಲ್ಡ್ ಲೀಗ್ನ ಪ್ರಧಾನ ಕಾರ್ಯದರ್ಶಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ಕರೀಮ್ ಅಲ್-ಇಸ್ಸಾ ಅವರನ್ನು ಭೇಟಿಯಾಗಿದ್ದು, ಇಸ್ಲಾಮಿಕ್ ಪ್ರಪಂಚದ

ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ.

ಪ್ರಧಾನಿ ಮೋದಿ ಅವರ ಈ ಭೇಟಿ ಭಾರತ-ಫ್ರಾನ್ಸ್-ಯುಎಇ ತ್ರಿಪಕ್ಷೀಯ ಸಹಕಾರ ಉಪಕ್ರಮದ ಭಾಗವಾಗಿದೆ. ಭಾರತ, ಫ್ರಾನ್ಸ್ ಮತ್ತು ಯುಎಇ ಜೂನ್ 7, 2023 ರಂದು ಒಮಾನ್ ಕೊಲ್ಲಿಯಲ್ಲಿ ಮೊದಲ

ಬಾರಿಗೆ ತ್ರಿಪಕ್ಷೀಯ ನೌಕಾ ವ್ಯಾಯಾಮದಲ್ಲಿ INS ತರ್ಕಾಶ್, ಹೆಲಿಕಾಪ್ಟರ್ಗಳೊಂದಿಗೆ ಫ್ರೆಂಚ್ ಹಡಗು ಸರ್ಕೌಫ್, ರಫೇಲ್ ಫೈಟರ್ಗಳು ಮತ್ತು ಯುಎಇ ನೌಕಾಪಡೆಯ ಕಡಲ ಗಸ್ತು ವಿಮಾನಗಳು ಭಾಗವಹಿಸಿದ್ದವು.

ಸಮುದ್ರ ಪರಿಸರದಲ್ಲಿ ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಬೆದರಿಕೆಗಳಿಂದ ಹಿಂದೂ ಮಹಾಸಾಗರವನ್ನು ಸುರಕ್ಷಿತವಾಗಿರಿಸಲು ಈ ಉಪಕ್ರಮ ಮಹತ್ವದ್ದಾಗಿದೆ. ಭಾರತ, ಫ್ರಾನ್ಸ್ ಮತ್ತು ಯುಎಇ

ದೇಶಗಳ ನಡುವೆ ಮಿಲಿಟರಿ ಮತ್ತು ರಾಜಕೀಯ ಸೇರಿದಂತೆ ಅನೇಕ ಒಪ್ಪಂದಗಳ ಕುರಿತು ಈ ಭೇಟಿಯ ವೇಳೆ ಚರ್ಚೆಯಾಗಲಿದೆ. ಮೂಲಸೌಕರ್ಯ ಅಭಿವೃದ್ದಿ, ರಕ್ಷಣಾ ಸಹಕಾರ ಸೇರಿದಂತೆ ಅಗತ್ಯ

ನೆರವುಗಳನ್ನು ಮೂರು ದೇಶಗಳು ವಿನಿಮಯ ಮಾಡಿಕೊಳ್ಳಲಿವೆ.

Exit mobile version