ಕಳೆದ ಒಂದು ವರ್ಷದ ಅವಧಿಯಲ್ಲಿ ಪ್ರಧಾನಿಯವರ ಜನಪ್ರಿಯತೆಯಲ್ಲಿ ಇಳಿಕೆ

ನವದೆಹಲಿ ಆ 18 : ಭಾರತದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಜನಪ್ರಿಯತೆಯಲ್ಲಿ ಸಾಕಷ್ಟು ಇಳಿಮುಖ ಕಂಡಿದ್ದಾರೆ. ಇಂಡಿಯಾ ಟುಡೆ ಸಮೀಕ್ಷಯೆ ಪ್ರಕಾರ ಕಳೆದ ಒಂದು ವರ್ಷದ ಅವಧಿಯಲ್ಲಿ ಇವರ ಜನಪ್ರಿಯತೆ 66% ಯಿಂದ 24%ಗೆ ಇಳಿದಿದೆ. ಇವರ ಜನಪ್ರಿಯತೆ ಕುಸಿಯಲು ಪ್ರಮುಖ ಕಾರಣವೆಂದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಅವರು ಮತ್ತು ಕೆಂದ್ರ ಸರ್ಕಾರ ಕೋವಿಡ್ ನಿರ್ವಹಣೆ ಎಡವಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ. 27 ರಷ್ಟು ಜನರು ಚುನಾವಣಾ ರ್ಯಾಲಿಗಳು ಸೇರಿದಂತೆ ದೊಡ್ಡ ಮಟ್ಟದ ರಾಜಕೀಯ ಕೂಟಗಳು ಭಾರತದಲ್ಲಿ ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ಕಾರಣವೆಂದು ಅಭಿಪ್ರಾಯಪಟ್ಟಿದ್ದಾರೆ. ಸುಮಾರು ಶೇ.26 ರಷ್ಟು ಜನರು ಕೋವಿಡ್ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳದೆ  ನಿರ್ಲಕ್ಷಿಸುವುದರಿಂದಲೇ ಸೋಂಕು ದೇಶದಲ್ಲಿ ಅಧಿಕವಾಗಿದೆ ಎಂದ ಆರೋಪಿಸಿದ್ದಾರೆ. ಇದು ಕೂಡ ಇವರ ಜನಪ್ರಿಯತೆಯ ಮೇಲೆ ಹೊಡೆತ ಬಿದ್ದಿದೆ ಇನ್ನು ಶೇ. 71 ರಷ್ಟು ಜನ, ದೇಶದಲ್ಲಿ ಕೋವಿಡ್​ 19 ಸೋಂಕಿಗೆ ತುತ್ತಾದವರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಸಂಖ್ಯೆಗಿಂತ ಅಧಿಕವಾಗಿದೆ. ಆದರೆ, ಸರ್ಕಾರ ವಾಸ್ತವವಾದ ಸಂಖ್ಯೆಯನ್ನು ಈವರೆಗೆ ಬಹಿರಂಗಪಡಿಸಿಲ್ಲ ಎಂದು ಆರೋಪಿಸಿದ್ದರೆ, ಶೇ. 44 ರಷ್ಟು ಜನ ಕೊರೋನಾ ಸೋಂಕು ವಿರ್ವಹಣೆಯಲ್ಲಿ ಕೇಂದ್ರ ಸರ್ಕಾರದಷ್ಟೇ ರಾಜ್ಯ ಸರ್ಕಾರಗಳ ಪಾಲು ಅಧಿಕವಾಗಿದ್ದು, ಅವರೂ ಸಹ ಉತ್ತಮವಾಗಿ ಕೆಲಸ ನಿರ್ವಹಿಸಬಹುದಿತ್ತು ಎಂದು ಅಭಿಪ್ರಾಯ ವ್ಯೆಕ್ತ ಪಡಿಸಿದ್ದಾರೆ.

Exit mobile version