ಮಲೆ ಮಹದೇಶ್ವರನ ಸನ್ನಿಧಿಗೆ ಹರಿದುಬಂತು ಕೋಟಿಗಟ್ಟಲೆ ಆದಾಯ: 2 ಕೋಟಿ 33 ಲಕ್ಷಕ್ಕೂ ಅಧಿಕ ರೂ. ಸಂಗ್ರಹ

ಚಾಮರಾಜನಗರ, ಜು. 23: ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 2 ಕೋಟಿ 33 ಲಕ್ಷ 57 ಸಾವಿರ 288 ರೂಪಾಯಿಗಳ ಸಂಗ್ರಹವಾಗಿದೆ ಎಂದು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ ತಿಳಿಸಿದೆ.

ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಸಂಗ್ರಹವಾಗಿರುವ ಕಾಣಿಕೆಯನ್ನು ಏಣಿಕೆ ಕಾರ್ಯವು ಬಿಗಿ ಬಂದೂ ಬಸ್ತ್ ನೊಂದಿಗೆ ನಡೆಯಿತು. ಕಳೆದ ಏಪ್ರಿಲ್ ತಿಂಗಳಲ್ಲಿ ಹುಂಡಿ ಏಣಿಕೆ ಕಾರ್ಯ ನಡೆಯಬೇಕಿತ್ತು ಆದರೆ ಕೋರೊನಾ ಲಾಕ್ ಡೌನ್ ನಿಂದಾಗಿ ಹುಂಡಿ ಏಣಿಕೆ ಕಾರ್ಯ ಮುಂದೂಡಿಕೆ ಮಾಡಲಾಗಿತ್ತು.

ಪ್ರಸ್ತುತ ಲಾಕ್ ಡೌನ್ ಸಂಪೂರ್ಣ ಸಡಿಲಿಕೆ ಆಗಿರುವ ಹಿನ್ನಲೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ಭಕ್ತರು ಆಗಮಿಸುತ್ತಿದ್ದು, ಹುಂಡಿಯಲ್ಲಿ ಭಕ್ತರು ನೀಡಿದ ಕಾಣಿಕೆಯನ್ನು ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸ್ ಬಂದೂಬಸ್ತ್ ನೊಂದಿಗೆ ಏಣಿಕೆ ಮಾಡಲಾಯಿತು. ಇದರಲ್ಲಿ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 2 ಕೋಟಿ 33 ಲಕ್ಷ 57 ಸಾವಿರ 288 ರೂಪಾಯಿ ಸಂಗ್ರಹವಾಗಿದ್ದರೆ, 155 ಗ್ರಾಂ ಚಿನ್ನ, 3 ಕೆಜಿ 258 ಗ್ರಾಂ ಬೆಳ್ಳಿ ಆಭರಣ ಸಂಗ್ರಹವಾಗಿದೆ.

Exit mobile version