ಗುಚ್ಚಿ ಮಶ್ರೂಮ್ ತಿಂದವನೇ ಬಲ್ಲ ಇದರ ರುಚಿ: ಇದರ ಬೆಲೆ ಚಿನ್ನವನ್ನೇ ಮೀರಿಸುತ್ತೆ ಗೊತ್ತಾ?

Health : ‘ಗುಚ್ಚಿಅಣಬೆ’ (morel mushroom) ಅತ್ಯಂತ ಅಪರೂಪದ ಅಷ್ಟೇ ಬೆಲೆ ಬಾಳೋ ಅಣಬೆ. ಇದರ ವೈಜ್ಞಾನಿಕ ಹೆಸರು ‘ಮಾರ್ಕುಲಾ ಎಸ್ಕುಲೆಂಟಾ’( Morchella esculenta ). ಈ ಮಶ್ರೂಮ್ ಅನ್ನು ‘ಸ್ಪಾಂಜ್ ಮಶ್ರೂಮ್’ ಅಂತಲೂ ಕರೆಯುತ್ತಾರೆ. ಇದರ ರುಚಿಗೆ ಸಾಟಿಯೇ ಇಲ್ಲ ಬಿಡಿ. ಈ ಅಣಬೆ ಎಲ್ಲೆಂದರಲ್ಲಿ ಬೆಳೆಯಲ್ಲ. ಅಲ್ಲದೆ ಇದು ಅತ್ಯಂತ (more expensive mushroom) ಅಪರೂಪಕ್ಕೆ ಕಾಣ ಸಿಗೋ ತರಕಾರಿ. ಇದನ್ನು ಕಂಡುಹಿಡಿಯಲು ತೀಕ್ಷ್ಣವಾದ ದೃಷ್ಟಿ ಮತ್ತು ಸಾಕಷ್ಟು ಶ್ರಮ ಬೇಕಾಗುತ್ತದೆ.

ಈ ಗುಚ್ಚಿ ಅಣ್ಣಬೆ ಯಾವಾಗ ಮತ್ತು ಎಲ್ಲಿ ಬೆಳೆಯುತ್ತೆ ಗೊತ್ತಾ?

ಗುಚ್ಚಿ ಅಣಬೆ ಮಾರ್ಚ್‌ನಿಂದ ಜುಲೈ ವರೆಗಿನ ಅವಧಿಯಲ್ಲಿ ಬೆಳೆಯುತ್ತೆ. ಇದು ಪರ್ವತ ಪ್ರದೇಶಗಳಲ್ಲಿ (mountain range) ಮಾತ್ರ ಕಂಡುಬರುತ್ತವೆ.

ಇದು ಪರ್ವತಗಳ ಮೇಲೆ ಹಿಮ ಕರಗಿದಾಗ ಮಾತ್ರ ಬೆಳೆಯುತ್ತದೆ ಮತ್ತು ಮಿಂಚಿನ ಹೊಡೆತದಿಂದ ಉತ್ಪತ್ತಿಯಾಗುತ್ತೆ. ಈ ಅಣಬೆಗೆ ಅದ್ಭುತ ರುಚಿ ಇದೆ.

ಹಾಗಾಗಿಯೇ ಪ್ರಮುಖ ಕಂಪನಿಗಳು ಮತ್ತು ಹೋಟೆಲ್‌ಗಳು ಈ ದುಬಾರಿ ಮತ್ತು ಅಪರೂಪದ ತರಕಾರಿಯನ್ನು ಇಷ್ಟೊಂದು ದುಬಾರಿ ವೆಚ್ಚದಲ್ಲಿ ಖರೀದಿಸುತ್ತವೆ.

ಗುಚ್ಚಿ ಅಣಬೆಗಳಿಂದಾಗುವ ಉಪಯೋಗಗಳೇನು ?

  1. ಹೃದ್ರೋಗಗಳ ಅಪಾಯವನ್ನು ತಡೆಯಬಹುದು.
  2. ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತೆ.
  3. ಮೂಳೆಗಳನ್ನು ಬಲಗೊಳಿಸುತ್ತೆ
  4. ಮಧುಮೇಹವನ್ನು (diabetes) ನಿರ್ವಹಿಸಲು ಸಹಾಯ ಮಾಡುತ್ತೆ.
  5. ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುತ್ತೆ.
  6. ಬಾಯಿಯ ಆರೋಗ್ಯಕ್ಕೆ ಒಳ್ಳೆಯದು.
  7. ಮೂತ್ರಪಿಂಡಗಳ ಆರೋಗ್ಯ ರಕ್ಷಣೆ ಮಾಡುತ್ತೆ.

ಇದನ್ನೂ ಓದಿ : https://vijayatimes.com/imd-issues-yellow-alert/

ಗುಚ್ಚಿ ಅಣಬೆ ಪೊಟ್ಯಾಸಿಯಮ್ (Potassium), ವಿಟಮಿನ್‌ಗಳು (Vitamin) ಮತ್ತು ತಾಮ್ರದಲ್ಲಿ ಸಮೃದ್ಧವಾಗಿದೆ. ಅಲ್ಲದೆ ಇದರಲ್ಲಿ ವಿಟಮಿನ್‌ಗಳ B ಹಾಗೂ ವಿಟಮಿನ್ Dಯಿಂದ ಸಮೃದ್ಧವಾಗಿದೆ.

ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು (Antioxidant) ವಿಪುಲವಾಗಿವೆ. ಇದು ದೇಹಕ್ಕೆ ಹಾನಿ ಮಾಡುವ ಪ್ರತಿಕ್ರಿಯಾತ್ಮಕ ಆಮ್ಲಜನಕ ಜಾತಿಗಳನ್ನು ತೆಗೆದುಹಾಕುವ

ಮೂಲಕ ಹೃದಯ ಕಾಯಿಲೆಗಳು ಮತ್ತು ಮಧುಮೇಹ ಸೇರಿದಂತೆ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ .

ಇನ್ನು ಇದನ್ನು ವಿಶ್ವದ ಅತ್ಯಂತ ದುಬಾರಿ ಕಾಡು ಅಣಬೆ ಅಂತಾನೇ ಕರಿತಾರೆ. ಈ ಅಣಬೆ ಮಾರುಕಟ್ಟೆಗಳಲ್ಲಿ (more expensive mushroom) ಪ್ರತಿ ಕೆಜಿಗೆ ₹30,000 ವರೆಗೆ ಮಾರಾಟವಾಗುತ್ತದೆ.

ಏಕೆಂದರೆ ಅವು ಎತ್ತರದ ಪರ್ವತ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಇನ್ನೂ ಇದನ್ನು ಬಿಸಿಲಿನಲ್ಲಿ ಒಣಗಿಸಿ ಬೇಕಾದಾಗ ತಿಂತಾರೆ.


ಗುಚ್ಚಿ ಅಣಬೆಯಿಂದ ಏನೇನ್‌ ಆಹಾರ ತಯಾರಿಸಬಹುದು?

  1. ಗುಚ್ಚಿ ಮಶ್ರೂಮ್ ಪಲಾವ್
  2. ಗುಚ್ಚಿ-ಕೀ ಸಬ್ಜಿ
  3. ಗುಚ್ಚಿ ಮಸಾಲಾ ಕರಿ
  4. ಗುಚ್ಚಿ ಮಶ್ರೂಮ್ ಸೂಪ್
  5. ಗುಚ್ಚಿ ಮಶ್ರೂಮ್ ಫ್ರೈ
  6. ಪನ್ನೀರ್ ಗುಚ್ಚಿ ಸಬ್ಜಿ

ಇದೇ ಅಣಬೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರು (Prime Minister Narendra Modi) ನಿರಂತರ ಇದರ ಸೇವನೆ ಮಾಡುತ್ತಾರಂತೆ.

ಇನ್ನು ಈ ಗುಚ್ಚಿ ಅಣಬೆಯನ್ನು ಕನ್ನಡದಲ್ಲಿ (ಗುಚ್ಚಿ ಅಣಬೆ) , ತಮಿಳುನಲ್ಲಿ ( ಕುಚ್ಚಿ ಕಾಲನ್) , ತೆಲುಗು ದಲ್ಲಿ (ಗುಚ್ಚಿ ಪುಟ್ಟಗೋಡುಗು) , ಹಿಂದಿಯಲ್ಲಿ ( ಗುಚ್ಚಿ ಕುಕುರ್ಮುತ್ತ) ಎಂದು ಕರೆಯುತ್ತಾರೆ.

Exit mobile version