ಈವರೆಗೆ 3,200ಕ್ಕೂ ಹೆಚ್ಚು ಮಂದಿ ಕಾಬೂಲ್ ನಿಂದ ಅಮೆರಿಕಾಕ್ಕೆ ಸ್ಥಳಾಂತರ

ವಾಷಿಂಗ್ಟನ್‌, ಆ. 18: ಅಫ್ಗಾನಿಸ್ತಾನದ ಕಾಬೂಲ್ ನಿಂದ ಈವರೆಗೆ 3,200ಕ್ಕೂ ಹೆಚ್ಚು ಜನರನ್ನು ಅಮೆರಿಕವು ಸ್ಥಳಾಂತರಿಸಿದೆ ಎಂದು ಶ್ವೇತ ಭವನ ಹೇಳಿದೆ.

ಅಮೆರಿಕದ ಖಾಯಂ ನಿವಾಸಿಗಳು, ಅವರ ಕುಟುಂಬದವರು ಸೇರಿದಂತೆ ಒಟ್ಟು 1,100 ಮಂದಿಯನ್ನು ಮಂಗಳವಾರ 13 ವಿಮಾನಗಳ ಮೂಲಕ ಸ್ಥಳಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಯನ್ನು ಕರೆದೊಯ್ಯಲಾಗುವುದು ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.

ನಮ್ಮ ಅಧಿಕಾರಿಗಳು ಸೇರಿದಂತೆ ಅಫ್ಗಾನಿಸ್ತಾನದಿಂದ ಈವರೆಗೆ 3,200 ಮಂದಿಯನ್ನು ಕರೆತರಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ 2,000 ಅಫ್ಗನ್‌ ವಿಶೇಷ ವಲಸಿಗರನ್ನು ಅಮೆರಿಕಕ್ಕೆ ಸ್ಥಳಾಂತರಿಸಿದ್ದೇವೆ ಎಂದು ಅವರು ತಿಳಿಸಿದರು.

Exit mobile version