ಕಳೆದ ೨೪ಗಂಟೆಗಳಲ್ಲಿ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಕೊರೋನಾ ಪ್ರಕರಣ ದಾಖಲು

ದೆಹಲಿ, ಏ. 12: ದೇಶದಾದ್ಯಂತ ಕೊರೊನಾವೈರಸ್ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇದ್ದು, ಕಳೆದ 24ಗಂಟೆಗಳಲ್ಲಿ 1,68,912 ಹೊಸ ಪ್ರಕರಣಗಳು ವರದಿಯಾಗಿದ್ದು 904 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 1,70,179ಕ್ಕೇರಿದ್ದು, ಸೋಂಕಿತರ ಸಂಖ್ಯೆ 1,35,27,717 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. 1,21,56,529ಮಂದಿ ಚೇತರಿಸಿಕೊಂಡಿದ್ದು, 12,01,009 ರಷ್ಟು ಸಕ್ರಿಯ ಪ್ರಕರಣಗಳಿವೆ.

ಇನ್ನೂ ಸುಪ್ರೀಂಕೋರ್ಟ್​ನ ಶೇಕಡಾ 50 ಸಿಬ್ಬಂದಿಗಳಿಗೆ ಕೊವಿಡ್ ದೃಢಪಟ್ಟಿದೆ. ಕೋರ್ಟ್ ಕಲಾಪಗಳು ಇನ್ನು ಮುಂದೆ ಮನೆಯಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ದೇಶದಾದ್ಯಂತ ಲಸಿಕೆ ನೀಡುವ ಅಭಿಯಾನ ಟೀಕಾ ಉತ್ಸವ (ಲಸಿಕೆ ಉತ್ಸವ) ಎರಡನೇ ದಿನವಾಗಿದೆ ಇದೆ. ಏಪ್ರಿಲ್ 11 ರಾತ್ರಿ 8ಗಂಟೆಯವರೆಗಿನ ಅಂಕಿ ಅಂಶಗಳ ಪ್ರಕಾರ 10.43 ಕೋಟಿ ಲಸಿಕೆ ನೀಡಲಾಗಿದೆ. ದೇಶದಾದ್ಯಂತ 9.14 ಕೋಟಿ ಮೊದಲ ಡೋಸ್ ಮತ್ತು 1.29 ಕೋಟಿ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

Exit mobile version