ಭಾರತದ ಗಡಿ ಕಾಯಲಿರುವ 31 MQ-9B ಗಾರ್ಡಿಯನ್ ಡ್ರೋಣ್‌ಗಳು! 

America: ಅಮೆರಿಕಾದ (America) MQ-98 ಸೀ ಗಾರ್ಡಿಯನ್ ಡ್ರೋನ್‌ಗಳ (MQ-9B Sea Guardian Drone) ಭಾರತದ ಗಡಿಯನ್ನು ಕಾಯಲಿವೆ. ಡಿಫೆನ್ಸ್ ಸೆಕ್ಯುರಿಟಿ ಕೋಆಪರೇಶನ್ ಏಜೆನ್ಸಿಯು (Defense Security Cooperation Agency) ಅಗತ್ಯವಿರುವ ಅಮೆರಿಕಾ ಹಾಗೂ ಭಾರತದ ನಡುವಿನ ಒಪ್ಪಂದಕ್ಕೆ (Deal Between The US and India) ಗ್ರೀನ್ ಸಿಗ್ನಲ್ ಸಿಕ್ಕಿದಂತಾಗಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಅಮೆರಿಕ ಪ್ರವಾಸದ ವೇಳೆ ಭಾರತ 31 MQ-9B ಸ್ಕೈ ಗಾರ್ಡಿಯನ್ ಡ್ರೋನ್‌ಗಳನ್ನು ಖರೀದಿಸುವ ಪ್ರಸ್ತಾಪ ಇಟ್ಟಿದ್ದರು.31 ಡ್ರೋನ್‌ಗಳ ಖರೀದಿಗಾಗಿ ಭಾರತ 4 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ವೆಚ್ಚ ಮಾಡಲಿದೆ. 

ಇದು ಒಂದು ಸರ್ಕಾರದಿಂದ ಮತ್ತೊಂದು ಸರ್ಕಾರದ ನಡುವೆ ನಡೆಯುತ್ತಿರುವ ರಕ್ಷಣಾ ಒಪ್ಪಂದವಾಗಿದೆ. ಸರ್ಕಾರದಿಂದ ಸರ್ಕಾರದ ನಡುವೆ ಶಸ್ತ್ರಾಸ್ತ್ರ ಮಾರಾಟ ಒಪ್ಪಂದ ಯಶಸ್ವಿಯಾಗಿ ನಡೆದಿದ್ದು, ಭಾರತ ಹಾಗೂ ಅಮೆರಿಕ ಸರ್ಕಾರಗಳ ನಡುವಣ ಬಾಂಧವ್ಯ ವೃದ್ದಿಯ ದ್ಯೋತಕವಾಗಿದೆ. ಭಾರತಕ್ಕೆ ಎಂಕ್ಯು – 9ಬಿ ಗಾರ್ಡಿಯನ್ ಡ್ರೋನ್‌ಗಳನ್ನ ಮಾರಾಟ ಮಾಡುವಂತೆ 2023ರಲ್ಲಿ ಪ್ರಧಾನಿ ಮೋದಿ (Modi) ಅವರು ಅಮೆರಿಕ ಪ್ರವಾಸ ಮಾಡಿದ್ದಾಗ ಮನವಿ ಮಾಡಿದ್ದರು. ಈ ಮನವಿಗೆ ಜೋ ಬೈಡನ್ (Joe Biden) ಸರ್ಕಾರ ಸಕಾರಾತ್ಮವಾಗಿ ಸ್ಪಂದಿಸಿದ್ದು ಡ್ರೋನ್‌ಗಳ ಮಾರಾಟಕ್ಕೆ ಸಮ್ಮತಿ ಸೂಚಿಸಿದೆ.ಭಾರತ – ಅಮೆರಿಕ ದೇಶಗಳ ನಡುವೆ ರಕ್ಷಣಾ ಸಹಕಾರ ಬಾಂಧವ್ಯ ವೃದ್ದಿ ಸೇರಿದಂತೆ ಉಭಯ ರಾಷ್ಟ್ರಗಳ ಸಮಗ್ರ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಈ ಒಪ್ಪಂದವು ಸಹಕಾರಿಯಾಗಿದೆ.

ಈ ಡ್ರೋನ್‌ಗಳಿಂದ ಭಾರತಕ್ಕೇನು ಲಾಭವಿದೆ?
ಗಾರ್ಡಿಯನ್ ಡ್ರೋನ್ ಗಳು (Guardian Drone) ಭಾರತದ ಜಲ ಗಡಿ ಹಾಗೂ ಭೂ ಗಡಿಯಲ್ಲಿ ಸರ್ವೇಕ್ಷಣೆ ನಡೆಸಲು ಹಾಗೂ ಕಣ್ಗಾವಲಿಗೆ ನೆರವಾಗಲಿದೆ. ಭವಿಷ್ಯದ ಎಂಥದ್ದೇ ಅಪಾಯ ಸಾಧ್ಯತೆಗಳನ್ನು ಸಮರ್ಥವಾಗಿ ಎದುರಿಸಲು ನೆರವಾಗಲಿದೆ. ಮಾನವ ರಹಿತವಾದ ಈ ಡ್ರೋನ್‌ಗಳು ಸಮುದ್ರ ಹಾಗೂ ಭೂ ಭಾಗದ ಮೇಲೆ ಗಂಟೆಗಟ್ಟಲೆ ಸರ್ವೇಕ್ಷಣೆ ನಡೆಸಲಿವೆ. ಭಾರತದ ಸೈನ್ಯದ ಆಧುನೀಕರಣಕ್ಕೂ ಈ ಡ್ರೋನ್‌ಗಳು ನೆರವಾಗಲಿವೆ.ಇದು ಪ್ರಸ್ತುತ ಮತ್ತು ಭವಿಷ್ಯದ ವಿಪತ್ತನ್ನು ಎದುರಿಸಲು ಭಾರತ ಸೇನಾಪಡೆಗೆ ಸಹಾಯಮಾಡುತ್ತದೆ.

ಪ್ರಧಾನಿ ಮೋದಿ ಭೇಟಿ ವೇಳೆ ಒಪ್ಪಂದಕ್ಕೆ ಅಂತಿಮ ಮುದ್ರೆ ಒತ್ತಿದ ಅಮೇರಿಕಾ ಸರ್ಕಾರ
ಈ ರಕ್ಷಣಾ ಒಪ್ಪಂದವು ಸುಮಾರು ಆರು ವರ್ಷಗಳ ಕಾಲ ನಡೆಯಿತು. ಕಳೆದ ಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಯುಎಸ್ ಭೇಟಿಯ ವೇಳೆ ಈ ಒಪ್ಪಂದಕ್ಕೆ ಅಂತಿಮ ಮುದ್ರೆ ಒತ್ತಿದ್ದರು. ಸರ್ಕಾರದಿಂದ ಸರ್ಕಾರಕ್ಕೆ ಒಪ್ಪಂದ ಬದಲಾಗಿ, ಬಳಿಕ  3.99 ಬಿಲಿಯನ್ ಡಾಲರ್‌ಗೆ (Billion Dollar) ಡೀಲ್ ನಡೆಯಿತು. ಹೀಗಾಗಿ ಇನ್ನು ಮುಂದೆ ಅಮೆರಿಕಾದಿಂದ ರಪ್ತಾಗಿ ಬರುವ 31 ಡ್ರೋನ್‌ಗಳನ್ನು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಬಳಸುತ್ತವೆ.

ಪಾಕಿಸ್ತಾನ – ಚೀನಾ (Pakistan-China) ಭೂ ಗಡಿ ಮಾತ್ರವಲ್ಲ, ವಿಶಾಲ ಹಿಂದೂ ಮಹಾ ಸಾಗರ, ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲೂ ಸರ್ವೇಕ್ಷಣೆ ನಡೆಸಲು ಈ ಡ್ರೋನ್‌ಗಳು ನೆರವಾಗಲಿವೆ. ಶಸ್ತ್ರ ಸಜ್ಜಿತವಾದ ಈ ಡ್ರೋನ್‌ಗಳ ಮೂಲಕ ದಾಳಿ ಕೂಡಾ ನಡೆಸಬಹುದಾಗಿದೆ.

ಡ್ರೋಣ್ ಒಪ್ಪಂದದ ವಿಚಾರದಲ್ಲಿ ಸುಳ್ಳು ಸುದ್ದಿ ವೈರಲ್
ಭಾರತದ ವಿರುದ್ಧ ಮಸಲತ್ತು ಮಾಡುವ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಭಾರತ ಸಂಚು ನಡೆಸಿತ್ತು ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಒಪ್ಪಂದ ಮುರಿದು ಬೀಳಬಹುದು ಅನ್ನೋ ವದಂತಿ ಈ ಹಿಂದೆ ಹರಡಿತ್ತು. ಹೀಗಾಗಿ ಭಾರತದ ಜೊತೆಗಿನ ಈ ಒಪ್ಪಂದವನ್ನು ಅಮೆರಿಕಾ ತಡೆ ಹಿಡಿದಿದೆ ಅಂತ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಅಮೆರಿಕದ ನಿರ್ಧಾರದಿಂದ ಈ ವರದಿಗಳೆಲ್ಲವೂ ಸುಳ್ಳು ಎಂದು ಸಾಬೀತಾಗಿದೆ.

ಅಕ್ಷತಾ ಹೆಗ್ಡೆ

Exit mobile version