ಜಿಯೋ ಮೇಲೆ 30 ಸಾವಿರ ಕೋಡಿ ಹೂಡಲು ಮುಂದಾದ ಗೂಗಲ್‌?

ಮುಂಬಯಿ: ರಿಲಯನ್ಸ್‌ ಒಡೆತನದ ಜಿಯೊ ಮೇಲೆ ಅಂತರಾಷ್ಟ್ರೀಯ ಕಂಪನಿಗಳು ಸಾಕಷ್ಟು ಹೂಡಿಕೆ ನಡೆಸುತ್ತಲೇ ಬಂದಿದೆ. ಇದೀಗ ಈನ ಪಟ್ಟಿಗೆ ಟೆಕ್‌ ದೈತ್ಯಬ ಗೂಗಲ್‌ ಸೇರಿವ ಸಂಭವ ಕೂಡಾ ಇದ್ದು 30 ಸಾವಿರ ಕೋಟಿ ರೂ ಹೂಡಿಕೆ ನಡೆಸಬಹುದು ಎಂದು ಬ್ಲೂಂಬರ್ಗ್‌ ವರದಿ ಮಾಡಿದೆ.

ಕಳೆದ ವಾರವಷ್ಟೇ  ಫೇಸ್‌ಬುಕ್‌ ಜಿಯೋ ಮೇಲೆ ಹೂಡಿಕೆ ನಡೆಸುವ ಕುರಿತು ಮಾತುಕತೆ ನಡೆಸಿತ್ತು. ಅಲ್ಲದೇ ಈಗಾಗಲೇ ಕ್ವಾಲ್ಕಾಮ್‌, ಮುಬಡಾಲ ಇನ್ವೆಸ್ಟ್‌ಮೆಂಟ್‌, ಸಿಲ್ವರ್‌ ಲೇಕ್‌ ಪಾರ್ಟ್‌ನರ್ಸ್‌ ಇತರೇ ಹಲವಾರು ಸಂಸ್ಥೆಗಳು ಜೀಯೋ ಮೇಲೆ 15 ಬಿಲಿಯನ್‌ ಡಾಲರ್‌ (1.13 ಲಕ್ಷ ಕೋಟಿ) ಹೂಡಿಕೆ ನಡೆಸಿವೆ.


ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಗೂಗಲ್‌ ಮುಖ್ಯಸ್ಥ
ಸುಂದರ್‌ ಪಿಚೈ, ಜಿಯೋದಲ್ಲಿ ಗೂಗಲ್‌ ಹೂಡಿಕೆ ಕುರಿತು ಯಾವುದೇ ಮಾಹಿತಿ ಹೊರ ಹಾಕಿಲ್ಲವಾದರೂ ಬ್ಲೂಂಬರ್ಗ್‌ ಈ ಹೂಡಿಕೆ ಕುರಿತು ವರದಿ ನೀಡಿದೆ.

Exit mobile version