Lucknow : ಉತ್ತರ ಪ್ರದೇಶದ (UP) ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ (Samajwadi Party) ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಇಂದು ಮುಂಜಾನೆ ನಿಧನರಾದರು (Mulayam Singh Yadav is no more).

ಇದಕ್ಕೂ ಮುನ್ನ ಮುಲಾಯಂ ಸಿಂಗ್ ಯಾದವ್ ಅವರ ಆರೋಗ್ಯ ಹದಗೆಟ್ಟು ಅನೇಕ ದಿನಗಳಿಂದ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು (Mulayam Singh Yadav is no more).
“ನನ್ನ ಗೌರವಾನ್ವಿತ ತಂದೆ ಮತ್ತು ಪ್ರತಿಯೊಬ್ಬರ ನಾಯಕ ಇನ್ನಿಲ್ಲ” ಎಂದು ಅಖಿಲೇಶ್ ಯಾದವ್(Akhilesh Yadav) ಸಮಾಜವಾದಿ ಪಕ್ಷದ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : https://vijayatimes.com/pm-to-launch-14-5k-crore-projects/
82 ವರ್ಷ ವಯಸ್ಸಿನ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಉಸಿರಾಟದ ತೊಂದರೆ ಎದುರಿಸುತ್ತಿದ್ದರು, ಜೊತೆಗೆ ಮೂತ್ರದ ಸೋಂಕಿನಿಂದಲೂ ಬಳಲುತ್ತಿದ್ದರು.
ಗುರುಗ್ರಾಮದ(Gurugram) ಮೇದಾಂತ ಆಸ್ಪತ್ರೆಯಲ್ಲಿ ಆಂತರಿಕ ಔಷಧ ತಜ್ಞರ ಮೇಲ್ವಿಚಾರಣೆಯಲ್ಲಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅಕ್ಟೋಬರ್ 2ರಂದು ಅವರ ಆರೋಗ್ಯವು ಹದಗೆಟ್ಟ ನಂತರ, ಅವರನ್ನು ICUಗೆ ಸ್ಥಳಾಂತರಿಸಲಾಯಿತು.
ಅಕ್ಟೋಬರ್ 9 ರಂದು, ಮೇದಾಂತ ಆಸ್ಪತ್ರೆಯು ಆರೋಗ್ಯ ಬುಲೆಟಿನ್ ಬಿಡುಗಡೆ ಮಾಡಿ “ಮುಲಾಯಂ ಸಿಂಗ್ ಯಾದವ್ ಅವರ ಸ್ಥಿತಿ ಸಾಕಷ್ಟು ಗಂಭೀರವಾಗಿದೆ ಮತ್ತು ಅವರು ಜೀವರಕ್ಷಕ ಔಷಧಿಗಳ ಮೇಲೆದ್ದಾರೆ” ಎಂದು ಹೇಳಿದ್ದರು.
ಇದನ್ನೂ ಓದಿ : https://vijayatimes.com/congress-govt-destroyed-assam/
ಇಂದು (ಸೋಮವಾರ) ಬೆಳಗ್ಗೆ 8:15ರ ಸುಮಾರಿಗೆ ಮುಲಾಯಂ ಸಿಂಗ್ ಯಾದವ್ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
- ಮಹೇಶ್.ಪಿ.ಎಚ್