ಅನ್ಯ ಧರ್ಮೀಯರು ಪ್ರೀತಿಸಿದ್ರೆ ಅದು ಲವ್ಜಿಹಾದ್ ಆಗಲ್ಲ: ಮುಂಬೈ ಹೈಕೋರ್ಟ್

Mumbai: ಪುರುಷ ಮತ್ತು ಮಹಿಳೆ ಬೇರೆ ಬೇರೆ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೆ, ಆ ಸಂಬಂಧವನ್ನು ಲವ್ ಜಿಹಾದ್(Lovejihad) ಎಂದು ಕರೆಯಲು ಸಾದ್ಯವಿಲ್ಲ ಎಂದು ಬಾಂಬೆ(Bombay) ಹೈಕೋರ್ಟ್ ನ ಔರಂಗಾಬಾದ (mumbaihc stay on lovejihad) ಪೀಠವು ತಿಳಿಸಿದೆ.


ಔರಂಗಾಬಾದ್(Aurangabad) ಪೀಠ ಮುಸ್ಲಿಂ ಮಹಿಳೆ ಮತ್ತು ಆಕೆಯ ಕುಟುಂಬಕ್ಕೆ ಬಂಧನ ಪೂರ್ವ ಜಾಮೀನು ಮಂಜೂರು ಮಾಡಿದೆ. ಅನ್ಯಧರ್ಮಿಯ ಮದುವೆಗಳಿಗೆ ಲವ್ ಜಿಹಾದ್ ಎಂದು ಹೆಸರಿಸುವುದು ಸರಿಯಲ್ಲ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ವಿಭಾ ಕಂಕನವಾಡಿ ಮತ್ತು ಅಭಯ ವಾಘವಾಸೆ ಅವರ ವಿಭಾಗೀಯ ಪೀಠ ಫೆಬ್ರುವರಿ 26 ರಂದು ನೀಡಿದ ಆದೇಶದಲ್ಲಿ ಔರಂಗಾಬಾದ್ ಸ್ಥಳೀಯ ನ್ಯಾಯಾಲಯದಿಂದ ಪರಿಹಾರ ನಿರಾಕರಿಸಿದ ಆರೋಪಿಗಳಿಗೆ ನಿರೀಕ್ಷಣ ಜಾಮೀನು ನೀಡಿದೆ.

ವಾದಿ ಪರ ವಕೀಲರು ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ವಿರೋಧಿಸಿ, ಇದು ‘ಲವ್ ಜಿಹಾದ್’(Lovejihad) ಪ್ರಕರಣ ಎಂದು ವಾದಿಸಿದರು.

ಆದರೆ ಲವ್ ಜಿಹಾದ್ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, ಮಹಿಳೆ ಜೊತೆ ತನಗೆ ಸಂಬಂಧವಿರುವುದನ್ನು ಒಪ್ಪಿಕೊಂಡ ಅರ್ಜಿದಾರ ಹಾಗೂ ಈ ಸಂಬಂಧ ಮುರಿಯಲು ಹಲವು ಅವಕಾಶಗಳಿದ್ದರೂ,

ಹಾಗೆ ಮಾಡಿರಲಿಲ್ಲ ಎಂಬ ಎಫ್ಐಆರ್ನಲ್ಲಿರುವ ಮಾಹಿತಿಯನ್ನು ನ್ಯಾಯಾಲಯ ದೃಢಪಡಿಸಿದೆ.


ಬೇರೆ ಬೇರೆ ಧರ್ಮಕ್ಕೆ ಸೇರಿದ ಮಹಿಳೆ ಹಾಗೂ ಪುರುಷರು ಪರಸ್ಪರ ಪ್ರೀತಿಸಿದ್ರೆ ಅಲ್ಲಿ ಧರ್ಮದ ವಿಚಾರ ಬರುವುದಿಲ್ಲ.

ಇದು ಪರಸ್ಪರ ಶುದ್ಧ ಪ್ರೀತಿಯ ಪ್ರಕರಣವಾಗಿರಬಹುದು ಎಂದು ನ್ಯಾಯಾಲಯ ಹೇಳಿದೆ.


ಈ ಪ್ರಕರಣಕ್ಕೆ ಲವ್ ಜಿಹಾದ್ ಎಂದು ಬಣ್ಣ ನೀಡುವ ಪ್ರಯತ್ನಗಳು ನಡೆಯುತ್ತಿವೆ.ಆದರೆ ಪ್ರೀತಿಯನ್ನು ಒಪ್ಪಿಕೊಂಡಾಗ ಒಬ್ಬ ವ್ಯಕ್ತಿಯನ್ನು ಇನ್ನೊಂದು ಧರ್ಮಕ್ಕೆ ಮತಾಂತರವಾಗಲು ಓಲೈಸುವ ಸಾಧ್ಯತೆಗಳು ಕಡಿಮೆ ಎಂದು ನ್ಯಾಯಾಲಯ ಹೇಳಿದೆ.


ಇತ್ತೀಚೆಗೆ ಅನ್ಯ ಧರ್ಮೀಯರ ಪ್ರೀತಿ ಪ್ರಕರಣಕ್ಕೆ ಲವ್ ಜಿಹಾದ್ ಬಣ್ಣ ಕೊಟ್ಟು ಸಮಾಜದ ಸ್ವಾಸ್ಥö್ಯ ಹಾಳು ಮಾಡುವ ಪ್ರಕರಣಗಳು ಹೆಚ್ಚುತ್ತಿವೆ.

ಅಲ್ಲದೆ ಕೆಲವು ರಾಜಕೀಯ ಪಕ್ಷಗಳು ದೇಶದ ಅಭಿವೃದ್ಧಿಗಿಂತಲೂ ಲವ್ಜಿಹಾದ್ ಅನ್ನೋ ವಿಚಾರಕ್ಕೆ ಹೆಚ್ಚಿನ ಹೊತ್ತು ಕೊಟ್ಟು ಅದನ್ನೇ ಚುನಾವಣಾ ಅಜೆಂಡಾ (Agenda) ಮಾಡಿಕೊಂಡಿದ್ದಾರೆ.

ತಮ್ಮ ಅಜೆಂಡಾ ಸಾಧಿಸುವ ಸಲುವಾಗಿ ಲವ್ಜಿಹಾದ್ ಅನ್ನೋ ವಿಚಾರವನ್ನು ಸದಾ ಜೀವಂತವಾಗಿಡಲು (mumbaihc stay on lovejihad) ಬಯಸಿ ಸಹಜ ಪ್ರೀತಿಗೂ ಲವ್ಜಿಹಾದ್ ಬಣ್ಣ ಕಟ್ಟುತ್ತಿದ್ದಾರೆ.

ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇದು ಸಂವಿಧಾನಕ್ಕೆ ಹಾಗೂ ಕಾನೂನಿಗೆ ವಿರುದ್ಧವಾದ ನಡೆಯೂ ಹೌದು.


ಕೆಲವು ಪೊಲೀಸ್ ಅಧಿಕಾರಿಗಳೂ ಕೂಡ ಪೂರ್ವಾಗ್ರಹಕ್ಕೆ ತುತ್ತಾಗಿ ಅನ್ಯ ಧರ್ಮಿಯರ ಪ್ರೀತಿ ಪ್ರಕರಣನ್ನು ಸಹಜವಾಗಿ ಪರಿಗಣಿಸದೆ ಅದನ್ನು ಲವ್ ಜಿಹಾದ್ ಪ್ರಕರಣವಾಗಿ ಬಿಂಬಿಸಲು ಯತ್ನಿಸುತ್ತಿರುವುದು.

ಪ್ರೇಮಿಗಳಿಗೆ ರಕ್ಷಣೆ ನೀಡುವ ಬದಲು ಕಿರುಕುಳ ಕೊಡುವುದು. ಪ್ರೀತಿಯನ್ನು ಮುರಿಯುವಂತೆ ಒತ್ತಡ ಹಾಕುವುದು ಇಂಥಾ ಪ್ರಯತ್ನಗಳಲ್ಲಿ ತೊಡಗುತ್ತಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ.

ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಮುಂಬೈ ಹೈಕೋರ್ಟ್ನ ತೀರ್ಪು ಅನ್ಯ ಧರ್ಮದ ಪ್ರೇಮಿಗಳ ಸಹಜ ಪ್ರೇಮಕ್ಕೆ ಜಯ ಸಿಕ್ಕಂತಾಗಿದೆ. ರಕ್ಷಣೆ ದೊರೆತಿದೆ.

Exit mobile version