ಮಾನಸಿಕ ಆರೋಗ್ಯಕ್ಕೆ ನೆರವಾಗುವ ಮಾಂತ್ರಿಕ ಶಕ್ತಿ ಸಂಗೀತಕ್ಕಿದೆ ; ಇಲ್ಲಿದೆ ಓದಿ ಅಚ್ಚರಿ ಸಂಗತಿ

Music

Karnataka : ಪ್ರತಿ ನಿತ್ಯದ ಜೀವನ ಜಂಜಾಟದ ನಡುವೆ ಬದುಕು(Life) ನಡೆಸುವಾಗ, ಸ್ಪಲ್ಪ ಸಮಯ ಸಂಗೀತ(Music) ಆಲಿಸಿದರೆ ಮನಸ್ಸು ಉಲ್ಲಸಿತವಾಗುತ್ತದೆ. ಪ್ರತಿಯೊಬ್ಬರೂ ಕೆಲವೊಮ್ಮೆ ಒಂದಲ್ಲಾ ಒಂದು ಕಾರಣಕ್ಕೆ ಆತಂಕವನ್ನು ಅನುಭವಿಸುತ್ತಾರೆ.

ಇದನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದರೂ, ಆತಂಕದ ಅಸ್ವಸ್ಥತೆಗಳಿಂದ ಬಳಲುತ್ತಿರುವ ಜನರಿಗೆ ಈ ರೋಗ ಲಕ್ಷಣಗಳು ಪದೇ ಪದೇ ಮರುಕಳಿಸುತ್ತವೆ, ಮತ್ತು ಅದರ ತೀವ್ರತೆಯು ಅಧಿಕವಾಗಿರುತ್ತದೆ. ಸಂಗೀತವು ಎಂಡಾರ್ಫಿನ್‌ಗಳನ್ನು ಪ್ರೇರೇಪಿಸುತ್ತದೆ, ಇದನ್ನು ಸಂತೋಷದ ಹಾರ್ಮೋನುಗಳು ಎಂದೂ ಕರೆಯುತ್ತಾರೆ.

ಇದು ನರಮಂಡಲವನ್ನು ಶಾಂತಗೊಳಿಸಿ, ಆತಂಕದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸಂಗೀತವು ನಮ್ಮ ಭಾವನೆಗಳ ಮೇಲೆ ತಕ್ಷಣದ ಮತ್ತು ಬಲವಾದ ಪ್ರಭಾವವನ್ನು ಬೀರುವುದರಿಂದ, ಅದು ವ್ಯಕ್ತಿಯನ್ನು ಶಾಂತಗೊಳಿಸಲು ಮತ್ತು ಭಾವನಾತ್ಮಕ ಕಾರ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.


ಸಂಗೀತವು ಇಡೀ ದಿನದ ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಗೀತವು ಸುಲಭವಾಗಿ ನಿದ್ರಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಸಂಗೀತವನ್ನು ಕೇಳುವುದರಿಂದ ಒತ್ತಡವನ್ನು ಉಂಟು ಮಾಡುವ ಹಾರ್ಮೋನ್(Harmone) ಕಾರ್ಟಿಸೋಲ್ ಮಟ್ಟ ಕಡಿಮೆಯಾಗುತ್ತದೆ ಎಂದು ಸಂಶೋಧನೆ ತೋರಿಸಿದೆ.

ಮಾತನಾಡುವ ಚಿಕಿತ್ಸೆಯಂತಹ ಸಾಂಪ್ರದಾಯಿಕ ಚಿಕಿತ್ಸೆಗಳ ಜೊತೆಯಲ್ಲಿ ಸಂಗೀತವನ್ನು ಬಳಸಿದಾಗ, ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಖಿನ್ನತೆ ದೂರಮಾಡಲು ಸಂಗೀತ ಚಿಕಿತ್ಸೆಯು ಪರಿಣಾಮಕಾರಿಯಾಗಿದೆ ಎಂದು ಸಂಶೋಧನೆ ತೋರಿಸುತ್ತದೆ.


ಮಾನಸಿಕ ಅಸ್ವಸ್ಥತೆಯೊಂದಿಗೆ ಹೋರಾಡುವ ಅನೇಕರಿಗೆ, ಸಂಗೀತ ಚಿಕಿತ್ಸೆಯು ದೀರ್ಘಕಾಲದವರೆಗೆ ಸಾಂತ್ವನವನ್ನು ನೀಡುತ್ತದೆ. ಕುಟುಂಬದ ಸದಸ್ಯರು ಅಥವಾ ಸ್ನೇಹಿತರು ಆತಂಕ, ಹತಾಶೆ ಅಥವಾ ಕಡಿಮೆ ಆತ್ಮವಿಶ್ವಾಸವನ್ನು ಅನುಭವಿಸುತ್ತಿದ್ದರೆ, ಸಂಗೀತ ಚಿಕಿತ್ಸೆಯ ಮೊರೆ ಹೋಗುವುದರಿಂದ ಅವರಿಗೆ ಸಹಾಯವಾಗುತ್ತದೆ.

ಸಂಗೀತವು ಜನರಿಗೆ ಹೆಚ್ಚು ಆತ್ಮವಿಶ್ವಾಸ, ಹೆಚ್ಚು ವಿಶ್ರಾಂತಿ ಮತ್ತು ಹೆಚ್ಚು ಭಾವನಾತ್ಮಕವಾಗಿ ಸದೃಢವಾಗಲು ಸಹಾಯ ಮಾಡುತ್ತದೆ. ಇಷ್ಟೇ ಅಲ್ಲದೇ ಆಘಾತಕಾರಿ ಘಟನೆಗಳಿಗೆ ಒಳಗಾದವರಿಗೆ, ಸಂಗೀತದಿಂದ ಬಹಳಷ್ಟು ಪ್ರಯೋಜನಗಳಿವೆ. ಖಿನ್ನತೆ ಮತ್ತು ಒತ್ತಡವನ್ನು ನಿರ್ವಹಿಸುವಲ್ಲಿ ಜನರಿಗೆ ಸಹಾಯ ಮಾಡುತ್ತದೆ.

Exit mobile version