ಘೋಷಣೆ ಕೂಗಿದ ವಿದ್ಯಾರ್ಥಿನಿ`ಮುಸ್ಕಾನ್’ಗೆ ಭರ್ಜರಿ ಗಿಫ್ಟ್ ಕೊಟ್ಟ ಶಾಸಕ!

hijab

ರಾಜ್ಯದಲ್ಲಿ ಹಿಜಾಬ್ ಪ್ರಕರಣ ದೊಡ್ಡ ಸಂಚಲನವನ್ನೇ ಸೃಷ್ಟಿಮಾಡಿದ್ದು, ಇದೀಗ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಹೈಕೋರ್ಟ್ ನಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ವಾದ- ವಿವಾದಗಳು ಕೂಡ ನಡೆದಿದೆ. ಸದ್ಯ ಈ ಪ್ರಕರಣ ಕುರಿತು ಈಗಾಗಲೇ ಹೈಕೋರ್ಟ್ ಸೋಮವಾರಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದ್ದು, ಸೋಮವಾರ ಯಾವ ತಿರುವನ್ನು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಒಂದು ಪ್ರಕರಣ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದರು ಅಶ್ಚರ್ಯವಿಲ್ಲ ಎಂದು ಹೇಳಬಹುದು.

ರಾಜ್ಯದಲ್ಲಿ ನಾನಾ ಕಾಲೇಜಿನಲ್ಲಿ ಹಿಜಾಬ್-ಕೇಸರಿ ಸಂಘರ್ಷಣೆಗಳು ಯಾರೂ ಊಹಿಸದ ಮಟ್ಟಿಗೆ ನಡೆಯಿತು. ಈ ನಡುವೆ ಮಂಡ್ಯ ಜಿಲ್ಲೆಯ ಪಿ.ಇ.ಎಸ್ ಪ್ರಥಮ ದರ್ಜೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಮುಸ್ಕಾನ್, ಕಾಲೇಜಿನಲ್ಲಿ ನಡೆದ ಕೇಸರಿ ಹಿಜಾಬ್ ವಾದ- ವಿವಾದದಲ್ಲಿ ಕೇಸರಿ ಧರಿಸಿದಂತ ಯುವಕರು ತಾನು ಬರುತ್ತಿದ್ದ ಗಾಡಿಯನ್ನು ಅಡ್ಡ ಹಾಕಿದ್ದಾರೆ. ಕಾಲೇಜಿನ ಒಳಗೆ ಹಿಜಾಬ್ ಧರಿಸಿ ಹೋಗುವಂತಿಲ್ಲ ಎಂದು ಹೇಳಿದ್ದಾರೆ. ಇದ್ಯಾವುದಕ್ಕೂ ಬಗ್ಗದ ಮುಸ್ಕಾನ್, ಕಾಲೇಜಿನೊಳಗೆ ಪ್ರವೇಶಿಸಿದ ಬೆನ್ನಲೇ ಯುವಕರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಅದಕ್ಕೆ ಕೋಪಗೊಂಡ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಘೋಷಣೆಯನ್ನು ಜೋರಾಗಿ 3 ಬಾರಿ ಕೂಗಿದ್ದಾಳೆ.

ಇದೊಂದು ದೊಡ್ಡ ಸುದ್ದಿಯಾದ ಬಳಿಕ, ಇಂದು ಮಂಡ್ಯ ಜಿಲ್ಲೆಗೆ ಮುಂಬೈನ ಬಾಂದ್ರಾ ಪೂರ್ವ ಕ್ಷೇತ್ರದ ಶಾಸಕ ಜಿಶಾನ್ ಸಿದ್ದಿಕ್ ಮುಸ್ಕಾನ್ ಮನೆಗೆ ಭೇಟಿ ನೀಡಿದ್ದಾರೆ. ಮುಸ್ಕಾನ್ ಮನೆಗೆ ಭೇಟಿ ನೀಡಿ ಮಾತನಾಡಿದ ಜಿಶಾಕ್ ಸಿದ್ದಿಕ್, ಮುಸ್ಕಾನ್ ಅಷ್ಟು ಹುಡುಗರ ನಡುವೆ ಘೋಷಣೆ ಕೂಗಿದ್ದು, ನಮ್ಮಲ್ಲೆರಿಗೂ ಹೆಮ್ಮೆಯ ಸಂಗತಿಯಾಗಿದೆ. ಮಂಡ್ಯದಿಂದ ಇಂಡಿಯಾವರೆಗೂ ಮುಸ್ಕಾನ್ ಬಗ್ಗೆ ಗರ್ವ ಪಡುತ್ತಿದೆ. ಹಿಜಾಬ್ ಧರಿಸುವುದು ಮುಸ್ಲಿಂ ಹೆಣ್ಣು ಮಕ್ಕಳ ಹಕ್ಕು.

ಮುಸ್ಲಿಂ ಹೆಣ್ಣು ಮಕ್ಕಳ ಹಕ್ಕಿನ ಪರವಾಗಿ ಧ್ವನಿಯಾದ ಮುಸ್ಕಾನ್ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಮುಸ್ಕಾನ್ಗೆ ಬಾರಿ ಬೆಲೆಬಾಳುವಂತ ಐ ಫೋನ್ ಮತ್ತು ಆಪಲ್ ವ್ಯಾಚ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಈ ಉಡುಗೊರೆ ನೀಡಿರುವ ಕುರಿತು ಬಾರಿ ವಿರೋಧಗಳು ಕೂಡ ಕೇಳಿಬಂದಿದ್ದು, ಇದು ಯಾವ ತಾರಕಕ್ಕೆ ಹೋಗಲಿದೆ ಎಂಬುದು ತಿಳಿಯುತ್ತಿಲ್ಲ ಎನ್ನಬಹುದು.

Exit mobile version