ಹಿಜಾಬ್ ನಿಷೇಧವನ್ನು ಕಾಂಗ್ರೆಸ್ ಸರಕಾರ ಕೈಬಿಡಲಿದೆಯೆಂಬ ವಿಶ್ವಾಸ ಇದೆ : ಶಾಸಕಿ ಕನೀಝ್ ಫಾತಿಮಾ

Bengaluru : ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಪಕ್ಷದಿಂದ ಗೆದ್ದಿರುವ ರಾಜ್ಯದ ಏಕೈಕ ಮುಸ್ಲಿಂ ಶಾಸಕಿ ಕನೀಝ್ ಫಾತಿಮಾ (Muslim MLA Kaneez Fatima) ರಾಜ್ಯದ ಶಿಕ್ಷಣ ಸಂಸ್ಥೆಗಳ ಮೇಲೆ ಹೇರಿರುವ ಹಿಜಾಬ್ ನಿಷೇಧವನ್ನು ಕಾಂಗ್ರೆಸ್ ಹಿಂತೆಗೆದುಕೊಳ್ಳುತ್ತದೆ ಎಂದು ನಂಬುತ್ತೇನೆ ಎಂದು ತಿಳಿಸಿದ್ದಾರೆ. ಫಾತಿಮಾ ಅವರು ಗುಲ್ಬರ್ಗಾ ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಿ ಬಿಜೆಪಿಯ (BJP) ಚಂದ್ರಕಾಂತ ಬಿ ಪಾಟೀಲ್ ಅವರನ್ನು 2,712 ಮತಗಳಿಂದ ಸೋಲಿಸಿದ್ದರು.

“ದೇವರು ಇಚ್ಛಿಸಿದರೆ, ನಾವು ಮುಂದಿನ ದಿನಗಳಲ್ಲಿ ಹಿಜಾಬ್ ನಿಷೇಧವನ್ನು ತೆಗೆದುಹಾಕುತ್ತೇವೆ, ಈ ನಿಷೇಧದಿಂದಾಗಿ ಶಾಲೆಯಿಂದ ಹೊರಹಾಕಲ್ಪಟ್ಟ ಹುಡುಗಿಯರನ್ನು ಮರಳಿ ಕರೆತರಲು ನಮಗೆ ಸಾಧ್ಯವಾಗಬಹುದು. ನಾವು ಎರಡು ಅಮೂಲ್ಯ ವರ್ಷಗಳನ್ನು ಕಳೆದುಕೊಂಡಿದ್ದೇವೆ” ಎಂದು ಫಾತಿಮಾ ಹೇಳಿದರು.

ಆದರೆ ಕಾಂಗ್ರೆಸ್ ಪಕ್ಷವು ಚುನಾವಣೆಯ ಸಂದರ್ಭದಲ್ಲಿ ಎಲ್ಲಿಯೂ ಹಿಜಾಬ್ ಬಗ್ಗೆ ಪ್ರಸ್ತಾಪಿಸಿಲ್ಲ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು. ಈ ಹಿಂದೆ ಕರ್ನಾಟಕ ರಾಜ್ಯದಲ್ಲಿಹಿಜಾಬ್ (Hijab) ವಿಷಯವು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು ಏಕೆಂದರೆ ಕರ್ನಾಟಕದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಮುಸ್ಲಿಂ ವಿದ್ಯಾರ್ಥಿನಿಯರು ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ : https://vijayatimes.com/high-command-decision/

ಸರ್ಕಾರಿ ಶಾಲೆಗಳಲ್ಲಿ ಪಿಯು ಪರೀಕ್ಷೆಗಳು ನಡೆಯುತ್ತಿರುವುದರಿಂದ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಅಥವಾ ಶಿರವಸ್ತ್ರ ಧರಿಸಲು ಅನುಮತಿ ಇಲ್ಲ ಇದರಿಂದಾಗಿ ಮತ್ತೊಂದು ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಮುಸ್ಲಿಂ ಹೆಣ್ಣುಮಕ್ಕಳು ಎಂಬ ಅರ್ಜಿಯನ್ನು ವಿಚಾರಣೆ ಮಾಡಬೇಕೆಂದು ಮನವಿಯಾಗಿತ್ತು.

ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಎಐಸಿಸಿ ಅಧ್ಯಕ್ಷ (AICC President) ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಕಾರಣ ಎಂದ ಫಾತಿಮಾ, ಖರ್ಗೆ ಪಕ್ಷದ ಅಧ್ಯಕ್ಷರಾದ ಬಳಿಕ ಪಕ್ಷಕ್ಕೆ ಸಾಕಷ್ಟು ಕೆಲಸ ಮಾಡಿದ್ದೇವೆ. ಅವರ ಭಾಷಣವು ಜನರ ಮೇಲೆ ಹೆಚ್ಚಿನ ಪ್ರಭಾವ ಬೀರಿತು, ಅದರ ಫಲಿತಾಂಶಗಳು ಈಗ ನಮ್ಮ ಮುಂದಿವೆ ಎಂದು ಅವರು ಹೇಳಿದರು.

2018ರಲ್ಲಿ ಫಾತಿಮಾ ಕೂಡ ಸ್ಪರ್ಧಿಸಿದ್ದರು :

2017ರಲ್ಲಿ ಫಾತಿಮಾ ಪತಿ ನಿಧನರಾದ ನಂತರ 2018ರಲ್ಲಿ ಸೆಪ್ಟೆಂಬರ್ ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು,ಈ ಹಿಂದೆ ಕಲಬುರಗಿಯಲ್ಲಿ ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದರು.

Exit mobile version