ಮುಸ್ಲಿಂ-ಹಿಂದೂ ವಿವಾಹ: ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಾನ್ಯವಲ್ಲ- ಹೈಕೋರ್ಟ್

Bhopal (Madhyapradesh): ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಹಿಂದೂ-ಮುಸ್ಲಿಂ (Hindu-Muslim) ಸಮುದಾಯದವರು ಪರಸ್ಪರ ಒಪ್ಪಿತವಾಗಿ ಮದುವೆಯಾದರೂ ಕೂಡಾ, ಅಂತಹ ಮದುವೆ ಕಾನೂನಿನ ಅಡಿಯಲ್ಲಿ ಮಾನ್ಯವಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ (Madhyapradesh Highcourt) ಐತಿಹಾಸಿಕ ತೀರ್ಪು ನೀಡಿದೆ.

Highcourt

ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆ ದಂಪತಿ ತಮ್ಮ ಮದುವೆಗೆ ಕಾನೂನಿನ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ದಂಪತಿಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ (Gurpal Singh Ahluwalia) ಅವರ ಪೀಠವು, ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ವಿಗ್ರಹಾರಾಧಕ ಅಥವಾ ಅಗ್ನಿಯನ್ನು ಪೂಜಿಸುವ ಯುವತಿಯೊಂದಿಗೆ ಮುಸ್ಲಿಂ ಯುವಕನ ವಿವಾಹವು ಮಾನ್ಯವಾಗಿರುವುದಿಲ್ಲ. ಈ ದಂಪತಿಗಳು 1954ರ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ತಮ್ಮ ಅಂತರ್ ಧರ್ಮೀಯ ವಿವಾಹವನ್ನು ನೋಂದಾಯಿಸಿದರೂ ಸಹ ಇದು ಕಾನೂನಿನ ಪ್ರಕಾರ ಅಮಾನ್ಯ ಮದುವೆಯಾಗಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನಲೆ :
ಮುಸ್ಲಿಂ ಪುರುಷ ಹಾಗೂ ಹಿಂದೂ ಮಹಿಳೆ ಪ್ರೀತಿಸಿ, ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಮದುವೆಯಾಗಲು ಬಯಸಿದ್ದರು. ಇಬ್ಬರೂ ಕೂಡಾ ತಮ್ಮ ಧರ್ಮ ಬದಲಿಯಿಸಲು ಸಿದ್ದರಿರಲಿಲ್ಲ. ಮಹಿಳೆ ಹಿಂದೂವಾಗಿ ಹಾಗೂ ಪುರುಷ ಮುಸ್ಲಿಂನಾಗಿ ಮುಂದುವರಿಸಲಿದ್ದಾರೆ ಎಂದು ಅವರ ಪರ ವಕೀಲರು ಹೈಕೋರ್ಟ್ಗೆ ಸ್ಪಷ್ಟನೆ #IntercasteMarriege ನೀಡಿದ್ದರು. ಆದರೆ ಈ ವಾದನ್ನು ತಳ್ಳಿ ಹಾಕಿದ ಹೈಕೋರ್ಟ್, ಅವರ ಮದುವೆಯ ಧಾರ್ಮಿಕ ವಿಧಿ-ವಿಧಾನಗಳನ್ನು ಮಾಡದಿದ್ದಕ್ಕಾಗಿ ನಾವು ಪ್ರಶ್ನಿಸಲಾಗದಿದ್ದರೂ, ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಈ ವಿವಾಹವು ಮಾನ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

Exit mobile version