Mysore: ಬೆಳಗಾವಿ (Belgaum) ಜನರಿಗೆ ಸಿಹಿಸುದ್ದಿ ಮೈಸೂರು ಹಾಗೂ ಧಾರವಾಡ ನಡುವಿನ ರೈಲನ್ನು ಬೆಳಗಾವಿಯವರೆಗೂ ವಿಸ್ತರಿಸಲಾಗಿದ್ದು, ಈ ರೈಲು ಬದಲಾವಣೆ ಹಾಗೂ ಹೊಸ ಮಾರ್ಗದ ಸೇವೆಯನ್ನು ಇದೇ ತಿಂಗಳ 26 ರಿಂದಲೇ ಜಾರಿಗೆ ತರಲಾಗುತ್ತಿದೆ.

ಮೈಸೂರಿಂದ (Mysore) ಹೊರಟ ರೈಲು ಬೆಳಗಾವಿಗೆ ಬೆಳಗ್ಗೆ 10-45 ಕ್ಕೆ ತಲುಪಲಿದೆ. ಇನ್ನು ಬೆಳಗಾವಿಯಿಂದ ಬೆಳಗ್ಗೆ 7-10 ಕ್ಕೆ ಹೊರಡುವ ರೈಲು ರಾತ್ರಿ 8 ಗಂಟೆಗೆ ಬಂದು ತಲುಪಲಿದೆ.
ಮೈಸೂರು-ಧಾರವಾಡ #Dharawad -ಮೈಸೂರು ರೈಲು ಇನ್ಮುಂದೆ ಮೈಸೂರು-ಬೆಳಗಾವಿ-ಮೈಸೂರು ಎಕ್ಸ್ಪ್ರೆಸ್ (Mysore Express) ರೈಲಾಗಿ ವಿಸ್ತರಿಸಲಾಗಿದ್ದು, ಈ ಬಗ್ಗೆ ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ.
ಮೈಸೂರಿನಿಂದ ರಾತ್ರಿ 10-30 ಕ್ಕೆ ಹೊರಡುವ 17301 ರೈಲು, ಬೆಳಗಾವಿಗೆ ಬೆಳಗ್ಗೆ 10-45 ಕ್ಕೆ ತಲುಪಲಿದೆ. ಇನ್ನು ಬೆಳಗಾವಿಯಿಂದ ಹೊರಡುವ 17302 ರೈಲು ರಾತ್ರಿ 8 ಗಂಟೆಗೆ ಮೈಸೂರು ತಲುಪಲಿದೆ.

ಟ್ರೈನ್ ನಂಬರ್ (Train Number) 17301 ಸೆಪ್ಟೆಂಬರ್ 26 ರಿಂದ ಮೈಸೂರು-ಬೆಳಗಾಂ ಎಕ್ಸ್ಪ್ರೆಸ್ (Belgaum Express) ಆಗಿ ಮೈಸೂರಿನಿಂದ ಹೊರಟು ಬೆಳಗಾವಿಯವರೆಗೂ ಓಡಲಿದೆ. ಇನ್ನು ಅದೇ ದಿನ ಟ್ರೈನ್ ನಂಬರ್ 17302, ಧಾರವಾಡದಿಂದ ಹೊರಡುವ ಬದಲು, ಬೆಳಗಾವಿಯಿಂದ ಹೊರಡಲಿದ್ದು, ಬೆಳಗಾವಿ-ಮೈಸೂರು ಎಕ್ಸ್ಪ್ರೆಸ್ ಆಗಲಿದೆ.
ಬೆಳಗಾವಿಯಲ್ಲೇ 17301 ರೈಲಿನ ಪ್ರಾಥಮಿಕ ನಿರ್ವಹಣೆ ಕೂಡಾ ಆಗಲಿದ್ದು, ನಿಲ್ದಾಣಗಳು ಹಾಗೂ ಸೆಪ್ಟೆಂಬರ್ (September) 30 ರವರೆಗಿನ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ.
ಈ ಕುರಿತು ಸಂಸದ ಪ್ರತಾಪ್ ಸಿಂಹ @PratapSimha ಟ್ವೀಟ್ ಮಾಡಿದ್ದು, ಸೆಪ್ಟೆಂಬರ್ 26 ರಿಂದಲೇ ಜಾರಿಗೆ ಬರುವಂತೆ ಮೈಸೂರು ಧಾರವಾಡದವರೆಗೆ ಅಷ್ಟೇ ಇದ್ದ ರೈಲು ಸೇವೆಯನ್ನು ಬೆಳಗಾವಿಯವರೆಗೂ ವಿಸ್ತರಿಸಲಾಗಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದವನ್ನು ತಿಳಿಸಿದರು.
ಭವ್ಯಶ್ರೀ ಆರ್.ಜೆ