ಮೈಸೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಶೀಘ್ರವೇ ಬರಲಿದೆ ಹೆಲಿ ಟೂರಿಸಂ: ಸಚಿವ ಯೋಗೇಶ್ವರ್

ಮೈಸೂರು, ಮಾ. 02: ಪ್ರವಾಸಿಗರ ಸ್ವರ್ಗ ಎಂದೇ ಬಿಂಬತವಾಗಿರುವ ಸಾಂಸ್ಕೃತಿಕ ನಗರಿ ಮೈಸೂರು, ಇನ್ನೇನು ಕೆಲವೇ ದಿನಗಳಲ್ಲಿ ಇನ್ನಷ್ಟು ಆಕರ್ಷಣೀಯ ತಾಣವಾಗಿ ರೂಪುಗೊಳ್ಳಲಿದ್ದು, ಆ ಮೂಲಕ ಮೈಸೂರಿನ ಪ್ರವಾಸೋದ್ಯಮಕ್ಕೆ ಮತ್ತೊಂದು ಮೆರಗು ಸಿಗಲಿದೆ.

ಹೌದು, ಹತ್ತಾರು ಪ್ರವಾಸಿ ತಾಣಗಳು ಸೇರಿದಂತೆ ಸುಂದರ ಪ್ರಕೃತಿಯ ಸೊಬಗನ್ನು ಹೊಂದಿರುವ ಮೈಸೂರಲ್ಲಿ ಶೀಘ್ರವೇ ಹೆಲಿ ಟೂರಿಸಂ ಆರಂಭಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿದ್ದಾರೆ.

ಮೈಸೂರಿಗೆ ಭೇಟಿ ನೀಡಿದ ವೇಳೆ ಮಾಧ್ಯಮಗಳ ಜತೆ ಮಾತಾಡಿ ಅವರು, ಮೈಸೂರು ಸೇರಿ ರಾಜ್ಯದ ನಾಲ್ಕು ಪ್ರವಾಸಿ ತಾಣಗಳಲ್ಲಿ ಹೆಲಿ ಟೂರಿಸಂ ಆರಂಭಿಸುತ್ತೇವೆ. ಈ ಬಗ್ಗೆ ಅಧಿಕಾರಿಗಳ ಸಭೆ ಮಾಡಲಿದ್ದು, ಮೈಸೂರಿನ ಹೋಟೆಲ್ಗಳನ್ನು ವಾಣಿಜ್ಯ ವ್ಯಾಪ್ತಿಯಿಂದ ಕೈಗಾರಿಕಾ ವ್ಯಾಪ್ತಿಗೆ ತರಲಾಗುವುದು ಅಂತ ತಿಳಿಸಿದರು.

ಅಲ್ಲದೇ, ಮೈಸೂರು ಪ್ರವಾಸೋದ್ಯಮಕ್ಕೆ ಬೇಕಾಗಿರೋ ಎಲ್ಲಾ ರೀತಿಯ ಉತ್ತೇಜನ ನೀಡೋದಾಗಿ ಸಿಪಿವೈ ಭರವಸೆ ಕೊಟ್ರು. ಇತ್ತೀಚಿನ ದಿನಗಳಲ್ಲಿ ಮೈಸೂರಿಗೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗ್ತಿರೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಸಿಪಿವೈ ಇದಕ್ಕೆ ಕಾರಣ ಅಂತರರಾಜ್ಯ ರಸ್ತೆ ತೆರಿಗೆ ಹೆಚ್ಚಳವೇ ನೇರ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಒಂದೇ ದೇಶ ಒಂದು ತೆರಿಗೆಯಂತೆ ಒಂದೇ ತೆರಿಗೆ ಪದ್ದತಿ ಜಾರಿಗೆ ಚಿಂತನೆ ನಡೆದಿದೆ. ಕೇರಳ ಮಾದರಿಯಲ್ಲಿ ರಸ್ತೆ ತೆರಿಗೆ ಜಾರಿಗೆ ಚಿಂತಿಸಲಾಗಿದ್ದು, ಈ ಬಾರಿ ಸಿಎಂ ಬಿಎಸ್ವೈ ಮಂಡಿಸಲಿರುವ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಮೈಸೂರು ಪ್ರವಾಸೋದ್ಯಮಕ್ಕೆ ವಿಶೇಷ ಅನುದಾನ ಸಿಗುವ ನಿರೀಕ್ಷೆ ಇದೆ ಎಂದರು.

ಇನ್ನೂ ಸಚಿವರಾದ ಬಳಿಕ ಇದೇ ಮೊದಲ ಭಾರಿಗೆ ಮೈಸೂರಿಗೆ ಭೇಟಿಕೊಟ್ಟ ಯೋಗೇಶ್ವರ್ ಚಾಮುಂಡಿಬೆಟ್ಟಕ್ಕೆ ತೆರಳಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದರು.

Exit mobile version