ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಚಿಲುಮೆ ಸಂಸ್ಥೆಗೆ ಗುತ್ತಿಗೆ ನೀಡಿತ್ತು : ನಳಿನ್‌ ಕುಮಾರ್‌ ಕಟೀಲ್

Bengaluru : ಕಾಂಗ್ರೆಸ್(Nalin Allegation Over Congress) ಅಧಿಕಾರದಲ್ಲಿದ್ದಾಗ ಇದೇ ಸಂಸ್ಥೆಗೆ ಗುತ್ತಿಗೆ ನೀಡಿತ್ತು. ಈಗ ಅದೇ ಸಂಸ್ಥೆಯ ವಿರುದ್ಧ ದೂರು ನೀಡಿದ್ದಾರೆ.

ನಕಲಿ ಮತದಾರರ ಹೆಸರು ಬಿಟ್ಟು ಹೋಗಿರುವುದರಿಂದ ಕಾಂಗ್ರೆಸ್ಸಿಗರಿಗೆ ತಾವು ಗೆಲ್ಲುವುದು ಸಾಧ್ಯವಿಲ್ಲ ಎಂದು ಅನಿಸುತ್ತಿದೆ.

ಅದಕ್ಕಾಗಿ ಬಿಜೆಪಿ(BJP) ಮೇಲೆ ಆರೋಪ ಹಾಕುತ್ತಿದ್ದಾರೆ. ಕಾಂಗ್ರೆಸ್ಸಿಗರ ಆರೋಪಕ್ಕೂ ನಮ್ಮ ಸರಕಾರ, ಪಕ್ಷಕ್ಕೆ ಸಂಬಂಧವಿಲ್ಲ.

ಜನರಲ್ಲಿ ಭಾಜಪಾ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವ ಕಾಂಗ್ರೆಸ್ಸಿನ ಹತಾಶ ಪ್ರಯತ್ನ ಇದು‌ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌(Nalin Kumar Kateel) ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ಅವರು, ನಮ್ಮ ಪಕ್ಷದ ರಾಜ್ಯ ಸರಕಾರ ಪಾರದರ್ಶಕವಾಗಿರುವುದರಿಂದ ದೂರು ಬಂದ ಹಿನ್ನಲೆಯಲ್ಲಿ ಚಿಲುಮೆಗೆ ನೀಡಿರುವ ಅನುಮತಿಯನ್ನು ಬಿಬಿಎಂಪಿ(BBMP) ರದ್ದುಪಡಿಸಿದೆ.

ಆದರೆ ಸೋಲಿನ ಭೀತಿಯಿಂದ ಸಿದ್ದರಾಮಯ್ಯನವರು(Siddaramaiah) ಅನಗತ್ಯ ರಾಜಕೀಯ ಮಾಡುತ್ತಿದ್ದಾರೆ.

https://youtu.be/ZWQ_rEdzKjQ ಈ ಅಂಡರ್ ಪಾಸ್ ಕಳಪೆ ಕಾಮಗಾರಿಯನ್ನು ನೀವೇ ನೋಡಿ!

ಅವರದ್ದೇ ಆಡಳಿತದ ಅವಧಿಯಲ್ಲಿ ಚಿಲುಮೆ ಸಂಸ್ಥೆ ಮೂಲಕ ಮತದಾರರ ಮಾಹಿತಿ ದುರ್ಬಳಕೆ ಬಗ್ಗೆನೂ ತನಿಖೆ ನಡೆಯಲಿದೆ.

ನಕಲಿ ಮತದಾರರ ಹೆಸರು ಬಿಟ್ಟು ಹೋಗಿರುವುದರಿಂದ ಕಾಂಗ್ರೆಸ್ಸಿಗರಿಗೆ ತಾವು ಗೆಲ್ಲುವುದು ಸಾಧ್ಯವಿಲ್ಲ ಎಂದು ಗೊತ್ತಾಗಿದೆ. ಅದಕ್ಕಾಗಿ ಬಿಜೆಪಿ(BJP) ಮೇಲೆ ಆರೋಪ ಹಾಕುತ್ತಿದ್ದಾರೆ.

ಇದನ್ನೂ ಓದಿ : https://vijayatimes.com/couples-invite-indian-army/

ಕಾಂಗ್ರೆಸ್ಸಿಗರ ಆರೋಪಕ್ಕೂ ನಮ್ಮ ಸರಕಾರ, ಪಕ್ಷಕ್ಕೆ ಸಂಬಂಧವಿಲ್ಲ. ಜನರಲ್ಲಿ ಭಾಜಪಾ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವ  ಡಿ.ಕೆ.ಶಿವಕುಮಾರ(DK Shivkumar) ಅವರ ಹತಾಶ ಪ್ರಯತ್ನವಿದು ಎಂದಿದ್ದಾರೆ.

ನಮ್ಮ ಪಕ್ಷದ ರಾಜ್ಯ ಸರಕಾರ ಪಾರದರ್ಶಕವಾಗಿರುವುದರಿಂದ ದೂರು ಬಂದ ಹಿನ್ನಲೆಯಲ್ಲಿ ಚಿಲುಮೆಗೆ ನೀಡಿರುವ ಅನುಮತಿಯನ್ನು ಬಿಬಿಎಂಪಿ ರದ್ದುಪಡಿಸಿದೆ.

ಆದರೆ ಸೋಲಿನ ಭೀತಿಯಿಂದ ಕಾಂಗ್ರೆಸ್ ಅನಗತ್ಯ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಚಿಲುಮೆ ಸಂಸ್ಥೆ ಮೂಲಕ ಮತದಾರರ ಮಾಹಿತಿ ದುರ್ಬಳಕೆ ಬಗ್ಗೆನೂ ತನಿಖೆ ನಡೆಯಲಿದೆ.

ಮತದಾರರ ನೋಂದಣಿ ಕುರಿತು ಜಾಗೃತಿ ಮೂಡಿಸಲು ಪಡೆದುಕೊಂಡ ಅನುಮತಿಯನ್ನು ಚಿಲುಮೆ ಸಂಸ್ಥೆ ದುರ್ಬಳಕೆ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿರುವುದರಿಂದ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Exit mobile version