‘ಲವ್ ಜಿಹಾದ್ ಬಗ್ಗೆ ಮಾತನಾಡಿ, ರಸ್ತೆ, ಚರಂಡಿ ಬಗ್ಗೆ ಅಲ್ಲ’ : ನಳಿನ್ ಕುಮಾರ್ ಕಟೀಲ್

Mangaluru : ‘ಲವ್ ಜಿಹಾದ್ ಬಗ್ಗೆ ಮಾತನಾಡಿ, ರಸ್ತೆ, ಚರಂಡಿ ಬಗ್ಗೆ ಅಲ್ಲ’ ಅಂತ ಕರ್ನಾಟಕ ಬಿಜೆಪಿ(Karnataka BJP) ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(NalinKumar Love Jihad statement) ಅವರು ಮಂಗಳೂರಿನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ನೀಡಿದ ಹೇಳಿಕೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.

‘ಬೂತ್ ವಿಜಯ ಅಭಿಯಾನ’ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ(BJP state president) ನಳೀನ್‌ ಕುಮಾರ್ ಕಟೀಲ್, ಚರಂಡಿ, ರಸ್ತೆಗಳ ಬಗ್ಗೆ ಮಾತನಾಡುವ ಬದಲು ‘ಲವ್ ಜಿಹಾದ್’ ವಿಷಯಗಳತ್ತ ಗಮನಹರಿಸುವಂತೆ ಹೇಳಿದರು.

ಇದನ್ನೂ ನೋಡಿ : https://twitter.com/INCKarnataka/status/1610252024909824006?s=20&t=qMFGZdTtJVK_hi55b9lhgw

ಮಂಗಳೂರಿನ ಬೂತ್ ವಿಜಯ ಅಭಿಯಾನದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,

ಲವ್ ಜಿಹಾದ್ ವಿಷಯದ ವಿರುದ್ಧ ಹೋರಾಡಬೇಕೇ ಹೊರತು ರಸ್ತೆ ಮತ್ತು ಚರಂಡಿ ಸಮಸ್ಯೆಗಳ ಬಗ್ಗೆ ಅಲ್ಲ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.

ನಳೀನ್‌ ಕುಮಾರ್‌ ಕಟೀಲ್‌ ಅವರ ಈ ಒಂದು ಭಾಷಣದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media) ಹರಿದಾಡುತ್ತಿದ್ದು,

ಅದರಲ್ಲಿ ಅವರು ಈ ರೀತಿ ಹೇಳುತ್ತಿರುವುದು ಕಂಡುಬಂದಿದೆ. ನಾನು ನಿಮ್ಮನ್ನು ಕೇಳುತ್ತೇನೆ, ರಸ್ತೆಗಳು ಮತ್ತು ಚರಂಡಿಯಂತಹ ಸಣ್ಣ ಸಮಸ್ಯೆಗಳ ಬಗ್ಗೆ ಮಾತನಾಡಬೇಡಿ.

ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ ನೀವು ಲವ್ ಜಿಹಾದ್ ಅನ್ನು ನಿಲ್ಲಿಸಲು ಬಯಸಿದರೆ, ನಮಗೆ ಭಾರತೀಯ ಜನತಾ ಪಕ್ಷದ(Bharatiya Janata Party) ಅಗತ್ಯವಿದೆ.

ಲವ್ ಜಿಹಾದ್ ತೊಡೆದುಹಾಕಲು ನಮಗೆ ಭಾರತೀಯ ಜನತಾ ಪಕ್ಷದ ಅಗತ್ಯವಿದೆ ಎಂದು ಹೇಳಿದ್ದಾರೆ. ನಳೀನ್‌ ಕುಮಾರ್‌ ಅವರ ಹೇಳಿಕೆ ವೀಡಿಯೋ ಹರಿದಾಡುತ್ತಿದ್ದಂತೆ,

ಟ್ವಿಟ್ಟರ್(Twitter) ಬಳಕೆದಾರರು ರಸ್ತೆಗಳು ಮತ್ತು ಸಂಪರ್ಕಗಳು ಸಣ್ಣ ಸಮಸ್ಯೆಗಳಲ್ಲ ಖಂಡಿತ! ಎಂದು ಹೇಳಿದರೆ, ಪ್ರತಿಪಕ್ಷ ಕಾಂಗ್ರೆಸ್‌(Congress) ಈ ಹೇಳಿಕೆಗಳನ್ನು ಅಪಹಾಸ್ಯ ಮಾಡಿದೆ.

ಕರ್ನಾಟಕ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ʼಅತ್ಯಂತ ಕೆಟ್ಟ ಸಂದೇಶ’ ನೀಡಿದ್ದಾರೆ.

ಇದನ್ನೂ ಓದಿ : https://vijayatimes.com/actor-kishores-post-goes-viral/

ಇದು ತುಂಬಾ ಕೆಟ್ಟ ಸಂದೇಶ. ಅಭಿವೃದ್ಧಿಗೆ ಆದ್ಯತೆ ನೀಡುವ ಬದಲು ದ್ವೇಷ ಹರಡಿ ದೇಶ ಒಡೆಯಲು ಯತ್ನಿಸುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ನಾವು ಅಭಿವೃದ್ಧಿ, ಉದ್ಯೋಗ ಸೃಷ್ಟಿ,

ಹಸಿವು, ಬೆಲೆ ಏರಿಕೆಯತ್ತ ಗಮನಹರಿಸುತ್ತಿರುವಾಗ ಅವರು ಜನರನ್ನು ಭಾವನೆಗಳ ಮೇಲೆ ಆಟವಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್(DK Sivakumar) ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಈ ವರ್ಷ ಏಪ್ರಿಲ್-ಮೇ ತಿಂಗಳ ಆಸುಪಾಸಿನಲ್ಲಿ ವಿಧಾನಸಭಾ ಚುನಾವಣೆ(Assembly election) ನಡೆಯಲಿದ್ದು, ಚುನಾವಣಾ ಪೈಪೋಟಿಗೆ ಬಿಜೆಪಿ-ಕಾಂಗ್ರೆಸ್-ಜೆಡಿಎಸ್‌(JDS) ಹಣಾಹಣಿ ನಡೆಸುತ್ತಿದೆ.

ಈ ನಡುವೆಯೇ ರಾಜ್ಯದಲ್ಲಿ ರೌಡಿಗಳ ಅಟ್ಟಹಾಸ, ಕೋಮು ಘರ್ಷಣೆಗಳ ನಿದರ್ಶನಗಳು ಹೆಚ್ಚುತ್ತಿವೆ! ಈ ಘಟನೆಗಳು ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ-ಕಾಂಗ್ರೆಸ್‌ ನಡುವೆ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ.

Exit mobile version