ಓಲಾ, ಊಬರ್ಗೆ ಸೆಡ್ಡು ಹೊಡೆಯಲು ಆರಂಭವಾಗಿದೆ ನಮ್ಮ ಆಟೋ ಚಾಲಕರದ್ದೇ ‘ನಮ್ಮ ಯಾತ್ರಿ’ ಆಪ್!

Bengaluru : ಗ್ರಾಹಕರ ಹಣ ಕೊಳ್ಳೆ ಹೊಡೆಯುತ್ತಿದ್ದ ಆರೋಪ ಎದುರಿಸುತ್ತಿದ್ದ ಓಲಾ, ಉಬರ್, ರ‍್ಯಾಪಿಡೋ ಆಪ್ ಗಳಿಗೆ ಸೆಡ್ಡು ಹೊಡೆಯಲು, ಸ್ವತಃ ಆಟೋ ಚಾಲಕರೇ ಸೇರಿ ಆರಂಭಿಸಿರುವ ‘ನಮ್ಮ ಯಾತ್ರಿ’ (Namma Yatri App Hits) ಆಪ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ಆಪ್ ಅಧಿಕೃತವಾಗಿ ಲಾಂಚ್ ಆಗುವುದಕ್ಕಿಂತಲೂ ಮೊದಲೇ, ಸಾವಿರಕ್ಕೂ ಹೆಚ್ಚು ಜನ ಇದನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಈಗಾಗಲೇ ನಮ್ಮ ಯಾತ್ರಿ ಆಪ್ ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ. ಓಲಾ, ಊಬರ್ ಆಪ್ ಗಳಲ್ಲಿದ್ದಂತೆ ಸ್ಥಿರ ದರದ ಬದಲಾಗಿ ಗ್ರಾಹಕರಿಗೆ ಅನುಕೂಲವಾಗುವಂತೆ ಅವಕಾಶ ನೀಡುವುದರಿಂದ ಈ ಆಪ್ ಗ್ರಾಹಕ ಸ್ನೇಹಿಯಾಗಲಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.


ಹೌದು, ಈ ಆಪ್ ಅನ್ನು ಆರಂಭಿಸಿದ್ದು, ಆಟೋ ಚಾಲಕರ (Namma Yatri App Hits) ಯೂನಿಯನ್.

ಸುಮಾರು ಆರು ತಿಂಗಳ ಹಿಂದೆ ಆರಂಭಿಸಿರುವ ನಮ್ಮ ಯಾತ್ರಿ ಆಪ್, ಹೊಸ ರೈಡಿಂಗ್ ಹಾಗೂ ಹೈಲಿಂಗ್ ಅಪ್ಲಿಕೇಷನ್ ಹೊಂದಿದ್ದು,

ಓಲಾ ಮತ್ತು ಉಬರ್‌ನ ಅಗ್ರಿಗೇಟರ್ ಅಪ್ಲಿಕೇಷನ್ ಬದಲಾಗಿ ಓಪನ್ ನೆಟ್‌ವರ್ಕ್ ಡಿಜಿಟಲ್ ಕಾಮರ್ಸ್‌ ನೊಂದಿಗೆ ಬೆಕ್ ಫೌಂಡೇಷನ್‌ನಿಂದ ಅಭಿವೃದ್ಧಿಪಡಿಸಿರುವ ಅಪ್ಲಿಕೇಷನ್ ಆಗಿದೆ.

ಇದನ್ನೂ ಓದಿ : https://vijayatimes.com/world-amazing-waterfalls/

ಈಗಾಗಲೇ, ಸುಮಾರು ಹತ್ತು ಸಾವಿರ ಪ್ರಯಾಣಿಕರು, ಹತ್ತು ಸಾವಿರ ಚಾಲಕರಿಂದ ಈ ಆಪ್ ಬಳಸಲ್ಪಡುತ್ತಿದೆ.

ಈ ಬಗ್ಗೆ ಮಾತನಾಡಿದ ಆಟೋ ಚಾಲಕರ ಸಂಘದ ಅಧ್ಯಕ್ಷ ಡಿ. ರುದ್ರಮೂರ್ತಿ, “ಓಲಾ, ಉಬರ್, ರ‍್ಯಾಪಿಡೋ ಆಪ್‌ಗಳಲ್ಲಿ ಆಟೋ ಬುಕ್ ಮಾಡುವುದರಿಂದ .

ಹೆಚ್ಚು ದರ ಪಾವತಿಸಬೇಕು ಎಂಬ ಕಾರಣಕ್ಕೆ ಈಗಾಗಲೇ ಸುಮಾರು ಹತ್ತು ಸಾವಿರ ಪ್ರಯಾಣಿಕರು ಮತ್ತು ಹತ್ತು ಸಾವಿರದಷ್ಟು ಚಾಲಕರು ನಮ್ಮ ಯಾತ್ರಿ ಆಪ್ ಬಳಕೆ ಮಾಡಲು ಪ್ರಾರಂಭಿಸಿದ್ದಾರೆ.

ಕೇವಲ ಗ್ರಾಹಕರಿಗಷ್ಟೇ ಅಲ್ಲದೇ, ಚಾಲಕರಿಗೂ ಊಬರ್, ಓಲಾ ಹಾಗೂ ರ‍್ಯಾಪಿಡೋ ಆಪ್(Rapido App) ಗಳಿಂದ ಲಾಭಕ್ಕಿಂತ ಹೆಚ್ಚಾಗಿ ನಷ್ಟವೇ ಉಂಟಾಗುತ್ತಿತ್ತು.

ಏಕೆಂದರೆ, ಓಲಾ, ಉಬರ್ ಗಳು ಪ್ರಯಾಣಿಕರಿಂದ ಹೆಚ್ಚು ದರ ವಸೂಲಿ ಮಾಡಿ, ಚಾಲಕರಿಗೆ ಅತಿ ಕಡಿಮೆ ನೀಡುತ್ತಿದ್ದವು.

ಇದರಿಂದ ಬೇಸತ್ತು ಆಟೋ ಚಾಲಕರು ಈಗ ‘ನಮ್ಮ ಯಾತ್ರಿ ಆಪ್’ ಕಡೆ ಮುಖ ಮಾಡಿದ್ದಾರೆ. ನಮ್ಮ ಯಾತ್ರಿ ಆಪ್ ನಲ್ಲಿ ಪ್ರಯಾಣ ದರವು ಸರಕಾರ ನಿಗದಿಪಡಿಸಿದಷ್ಟೇ ಇರುತ್ತವೆ.

ಕನಿಷ್ಠ ದರ (2 ಕಿ.ಮೀ.ಗೆ) 30 ರೂ. ಹಾಗೂ ನಂತರದಲ್ಲಿ ಪ್ರತಿ ಕಿಲೋಮೀಟರ್‌ಗೆ 15 ರೂ. ನಿಗದಿಪಡಿಸಲಾಗುತ್ತದೆ.

ಇದರ ಜೊತೆಗೆ, 1೦ ರೂಪಾಯಿ ಪಿಕ್‌ಅಪ್ ಶುಲ್ಕ ಪಡೆಯಲಾಗುತ್ತದೆ. ಇಷ್ಟನ್ನು ಹೊರತುಪಡಿಸಿ, ಬೇರೆ ಯಾವುದೇ ಹಿಡನ್ ದರಗಳು ಇದರಲ್ಲಿ ಇರುವುದಿಲ್ಲ ಎಂದು ರುದ್ರಮೂರ್ತಿಯವರು ಸ್ಪಷ್ಟಪಡಿಸಿದ್ದಾರೆ.

ಇನ್ನು, ಕೇವಲ ದರದ ವಿಷಯದಲ್ಲಷ್ಟೇ ಅಲ್ಲ ಬಳಕೆಯ ವಿಷಯದಲ್ಲೂ ಇದು ಚಾಲಕ ಸ್ನೇಹಿ ಆಪ್ ಆಗಿದೆ.

ಇದನ್ನೂ ಓದಿ : https://vijayatimes.com/siddaramaiah-about-bridge-collapse/

ಏಕೆಂದರೆ, ನಮ್ಮ ಯಾತ್ರಿಯಲ್ಲಿ ಖಾತೆ ತೆರೆಯುವುದು ಬಹಳ ಸುಲಭ, ಕೇವಲ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿ ಇದ್ದರೆ ಸಾಕು. ಇನ್ನು ಉಬರ್, ಓಲಾ, ರ‍್ಯಾಪಿಡೋದಂತೆ ವ್ಯಾಲೆಟ್ ವ್ಯವಸ್ಥೆಯೂ ಇದರಲ್ಲಿಲ್ಲ.

ಪ್ರಯಾಣದ ಬಳಿಕ ಚಾಲಕರಿಗೆ ಯುಪಿಐ ಐಡಿ ಅಥವಾ ಕ್ಯಾಶ್ ಮೂಲಕ ನೇರವಾಗಿ ಹಣ ಪಾವತಿಸಬೇಕು.

ಮಧ್ಯವರ್ತಿಗಳಿಲ್ಲದ ಕಾರಣ ನಮ್ಮ ಯಾತ್ರಿ ಆಪ್‌ನಲ್ಲಿ ಪ್ರಯಾಣ ದರ ನೇರವಾಗಿ ಚಾಲಕರಿಗೆ ದೊರೆಯುವ ಕಾರಣ, ಚಾಲಕರಿಗೆ ನಷ್ಟವಾಗುವ ಸಮಸ್ಯೆಯೇ ಇರುವುದಿಲ್ಲ.

ಆಯಾ ಪ್ರಯಾಣದ ಹಣ ಆ ಕ್ಷಣವೇ ಚಾಲಕರಿಗೆ ದೊರೆಯುತ್ತದೆ. ಹಾಗೆಯೇ, ಇದು ಓಪನ್ ನೆಟ್‌ವರ್ಕ್ ಸೇವೆಯಾಗಿದ್ದು, ಎಲ್ಲರಿಗೂ, ಎಲ್ಲಾ ಸಂದರ್ಭದಲ್ಲೂ ದೊರೆಯಲಿದೆ ಎನ್ನುವುದು ವಿಶೇಷ.


ಮೆಟ್ರೋ ನಿಲ್ದಾಣಗಳಲ್ಲಿ ಕೂಡ ನಮ್ಮ ಯಾತ್ರಿ ಆಪ್ ಸೇವೆಗೆ ಸಜ್ಜಾಗಿದ್ದು, ಮೆಟ್ರೋ ನಿಲ್ದಾಣದಿಂದ 2 ಕಿ.ಮೀ ದೂರದ ವ್ಯಾಪ್ತಿಯಲ್ಲಿ 4೦ ರೂ. ದರದಲ್ಲಿ ಕಾರ್ಯನಿರ್ವಹಿಸಲಿದೆ.

ಯಾವುದೇ ಮೆಟ್ರೋ ನಿಲ್ದಾಣಗಳಲ್ಲಿಯೂ ಕೂಡ ನಮ್ಮ ಯಾತ್ರಿ ಸೇವೆ ದೊರೆಯಲಿದೆ.

ನಮ್ಮ ಯಾತ್ರಿ ಆಪ್ ಕೇವಲ ಪ್ರಯಾಣಿಕರು ಹಾಗೂ ಚಾಲಕರಿಗಾಗಿ ಸಿದ್ಧಪಡಿಸಿದ ಒಂದು ವೇದಿಕೆಯಾದ್ದರಿಂದ, ಇದರಲ್ಲಿ ಯಾವುದೇ ರೀತಿಯ ಕಮಿಷನ್ ವ್ಯವಹಾರಗಳು ಇರುವುದಿಲ್ಲ.

ಇದನ್ನೂ ಓದಿ : https://vijayatimes.com/sulibele-likes-gandadgudi/

ಪ್ರಯಾಣಿಕರು ಹಾಗೂ ಚಾಲಕರನ್ನು ಒಂದೇ ವೇದಿಕೆಗೆ ತರುವುದೇ ಇದರ ಮುಖ್ಯ ಉದ್ದೇಶವಾಗಿದ್ದು, ನವೆಂಬರ್ 1 ರಿಂದ ಅಧಿಕೃತವಾಗಿ ಆರಂಭವಾಗಲಿದೆ.

Exit mobile version