ನಮ್ಮ ಭಾಷೆಯ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿಸುವ ಅವಶ್ಯಕತೆಯಿಲ್ಲ, ಮಾಡಿಸುವುದಿಲ್ಲ : ನಾನಿ!

actor

‘ಅಂತೆ ಸುಂದರನಿಕಿ’(Ante Sundaraniki) ಚಿತ್ರದ ಟೀಸರ್(Teaser) ಬಿಡುಗಡೆ ಸಮಾರಂಭದಲ್ಲಿ ತೆಲುಗು(Telugu) ಚಿತ್ರರಂಗದ ಸ್ಟಾರ್ ನಟ(Actor) ನಾನಿ(Nani) ಮಾತನಾಡಿದ್ದು.

ತಮ್ಮ ಹೊಸ ಚಿತ್ರ ‘ಅಂತೆ ಸುಂದರಿನಿ’ ಸಿನಿಮಾವನ್ನು ಕನ್ನಡ ಭಾಷೆಗೆ(Kannada Language) ಡಬ್ ಮಾಡಿಸುವುದಿಲ್ಲ ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟಿರುವುದು ಕನ್ನಡಿಗರನ್ನು ಕೆರಳಿಸಿದೆ!

ಅಷ್ಟಕ್ಕೂ ನಾನಿ ತಮ್ಮ ಸಿನಿಮಾವನ್ನು ಯಾಕೆ ಕನ್ನಡ ಭಾಷೆಗೆ ಅನುವಾದಿಸುತ್ತಿಲ್ಲ ಎಂಬ ಕಾರಣವನ್ನು ಪ್ರಶ್ನಿಸಿದಾಗ ಅದಕ್ಕೆ ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ. ನಾನಿ ಕೊಟ್ಟ ಹೇಳಿಕೆಯ ಬೆನ್ನಲ್ಲೇ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ನಟ ನಾನಿ ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚಿಸಿದ್ದಾರೆ. ಯಾಕೆ ಕನ್ನಡದಲ್ಲಿ ಡಬ್ ಮಾಡಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ಮುಂದಿನ ಚಿತ್ರ ‘ಅಂತೆ ಸುಂದರಾನಿಕಿ’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭವಾಗಿದೆ,

ಸಿನಿಮಾ ಎಲ್ಲಾ ಭಾಷೆಯಲ್ಲೂ ಬಿಡುಗಡೆ ಮಾಡುವುದರ ಬಗ್ಗೆ ಈಗಾಗಲೇ ಮಾತನಾಡಿದ್ದೇವೆ, ಕನ್ನಡ ಪ್ರೇಕ್ಷಕರಿಗೆ ತೆಲುಗು ಭಾಷೆ ಚೆನ್ನಾಗಿಯೇ ತಿಳಿದಿರುವುದರಿಂದ ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡುವುದಿಲ್ಲ, ತೆಲುಗು ಭಾಷೆಯಲ್ಲೇ ಇದ್ದರೇ ಅದು ಪರಿಪೂರ್ಣವಾಗಿ ಅರ್ಥವಾಗುತ್ತದೆ. ಈ ಕಾರಣದಿಂದ ತೆಲುಗು ಭಾಷೆಯಲ್ಲೇ ಸಿನಿಮಾ ನೋಡಲಿ ಎಂದು ಹೇಳಿದ್ದಾರೆ. ತೆಲುಗು ಭಾಷೆಯಲ್ಲೇ ಸಿನಿಮಾ ನೋಡಿದರೇ ಅದನ್ನು ಆನಂದಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ನಾವು ನಟರು ಯಾವಾಗಲೂ ನಮ್ಮ ಧ್ವನಿಯೊಂದಿಗೆ ಚಿತ್ರಕ್ಕೆ ಅರ್ಥ ಕೊಟ್ಟಿರುತ್ತೇವೆ! 

ಹೀಗಾಗಿ ಹೆಚ್ಚಿನ ಪ್ರೇಕ್ಷಕರಿಗೆ ತೆಲುಗು ಭಾಷೆಯಲ್ಲೇ ತೋರಿಸಲು ಇಷ್ಟಪಡುತ್ತೇವೆ. ಆದ್ರೆ ಭಾಷೆ ನಿರ್ದಿಷ್ಟ ಸಮಸ್ಯೆಗಳಿಂದಾಗಿ, ನಾವು ಚಲನಚಿತ್ರಗಳನ್ನು ಡಬ್ಬಿಂಗ್ ಮತ್ತು ಇತರ ಭಾಷೆಗಳಲ್ಲಿ ಬಿಡುಗಡೆ ಮಾಡುತ್ತೇವೆ. ಕನ್ನಡ ಭಾಷೆಯಲ್ಲಿ ಮಾತ್ರ, ನಮಗೆ ಅಂತಹ ಸಮಸ್ಯೆಗಳಿಲ್ಲ ಏಕೆಂದರೆ ಅವರು ತೆಲುಗು ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ತೆಲುಗು ಚಲನಚಿತ್ರಗಳನ್ನು ಹೆಚ್ಚು ವೀಕ್ಷಿಸುತ್ತಾರೆ. ಇದು ಕನ್ನಡದಲ್ಲಿ ಚಿತ್ರವನ್ನು ಬಿಡುಗಡೆ ಮಾಡದಿರಲು ಕಾರಣ ಎಂದು ನಾನಿ ತಮ್ಮ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದಾರೆ. ಇದೊಂದು ಹೇಳಿಕೆಯನ್ನು ಕನ್ನಡಿಗರು ತೀವ್ರವಾಗಿ ಖಂಡಿಸಿದ್ದಾರೆ.

ನಿಮ್ಮ ಸಿನಿಮಾ ಯಾರು ನೋಡುತ್ತಾರೆ, ಕನ್ನಡದಲ್ಲಿ ಡಬ್ ಮಾಡಿಸಿದರು ಇಲ್ಲಿ ಬಿಡುಗಡೆ ಮಾಡಬಾರದು ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ. ಸಾಕಷ್ಟು ಕನ್ನಡಿಗರು ನಾನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಎಲ್ಲಾ ಕನ್ನಡ ಪ್ರೇಕ್ಷಕರಿಗೆ ತೆಲುಗು ಅರ್ಥವಾಗುವುದಿಲ್ಲ ಮತ್ತು ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಿದರೆ ನೋಡುತ್ತೀವಿ, ಇಲ್ಲವಾದರೆ ನೋಡುವುದಿಲ್ಲ ಎಂದು ನಾನಿ ವಿರುದ್ಧ ಕಿಡಿಕಾರಿದ್ದಾರೆ!

Exit mobile version