ಉಚಿತ ಕೊಡುಗೆಗಳನ್ನು ಪಡೆದವರು ಹಿಂತಿರುಗಿ ಸಮಾಜಕ್ಕೆ ಏನನ್ನಾದರೂ ಕೊಡಬೇಕು – ನಾರಾಯಣ ಮೂರ್ತಿ

Bengaluru : ಸರ್ಕಾರಗಳು ನೀಡುವ ಉಚಿತ ಸಬ್ಸಿಡಿಗಳು ಬಡವರಿಗೆ ಉಪಕಾರವಾಗುತ್ತದೆ ಎಂಬುದು ನನಗೆ ಗೊತ್ತು. ಆದರೆ ಸರ್ಕಾರದಿಂದ(Government) ಉಚಿತ ಕೊಡುಗೆಗಳನ್ನು ಪಡೆದ ಜನರಲ್ಲಿ ಜವಾಬ್ದಾರಿಗಳಿರುತ್ತವೆ. ಅವರು ಹಿಂತಿರುಗಿ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ತಮ್ಮ ಭವಿಷ್ಯದ ಪೀಳಿಗೆಯ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಸಬೇಕು ಎಂದು ಇನ್ಫೋಸಿಸ್(INFOSYS) ಸಹ-ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ(N.R.Naryan Murthy) ಹೇಳಿದ್ದಾರೆ.

ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ (Tech Summit) ಮಾತನಾಡಿದ ಅವರು, ಸರ್ಕಾರದಿಂದ ಉಚಿತ ಸೇವೆಗಳನ್ನು ಪಡೆದ ನಂತರ ಜನರು ಸಮಾಜಕ್ಕೆ ಮರಳಿ ಏನನ್ನಾದರೂ ನೀಡುವಂತೆ ಕರೆ ನೀಡಿದರು. ದೇಶದಲ್ಲಿ ಹೆಚ್ಚುತ್ತಿರುವ ಉಚಿತ ಸೌಲಭ್ಯಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಸಬ್ಸಿಡಿಗಳನ್ನು ಒದಗಿಸಿದಾಗ, ಅವರು ಏನಾದರೂ ಮಾಡಲು ಸಿದ್ದರಿರುತ್ತಾರೆ. ಉದಾಹರಣೆಗೆ, ನಾನು ನಿಮಗೆ ಉಚಿತ ವಿದ್ಯುತ್ (Electricity) ನೀಡುತ್ತೇನೆ, ಆದರೆ ಪ್ರಾಥಮಿಕ ಶಾಲೆಗಳು ಮತ್ತು ಮಧ್ಯಮ ಶಾಲೆಗಳಲ್ಲಿ ಶೇಕಡಾವಾರು ಹಾಜರಾತಿಯು ಶೇಕಡಾ 20 ರಷ್ಟು ಏರಿಕೆಯಾಗಬೇಕು.

ಅಂದರೆ ನೀವು ನಿಮ್ಮ ಮಕ್ಕಳನ್ನು ಪ್ರತಿದಿನ ಶಾಲೆಗೆ ಕಳುಹಿಸಬೇಕು. ಆಗ ಮಾತ್ರ ನಾವು ಅದನ್ನು ನಿಮಗೆ ನೀಡುತ್ತೇವೆ ಎಂದು ಸರ್ಕಾರಗಳು ಹೇಳಬೇಕು. ಉಚಿತ ಸೌಲಭ್ಯಗಳನ್ನು ಒದಗಿಸುವುದಕ್ಕೆ ನಾನು ವಿರೋಧಿಸುವುದಿಲ್ಲ. ನಾನು ಏಕೆಂದರೆ ನಾನು ಒಂದು ಕಾಲದಲ್ಲಿ ಬಡತನದ ಹಿನ್ನೆಲೆಯಿಂದ ಬಂದಿದ್ದೇನೆ. ಆದರೆ ಆ ಉಚಿತ ಸಬ್ಸಿಡಿಗಳನ್ನು ಪಡೆದ ಜನರಿಂದ ಸ್ವಲ್ಪ ದೊಡ್ಡ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಾವು ಏನನ್ನಾದರೂ ನಿರೀಕ್ಷಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದರು.

ಇದೇ ವೇಳೆ ಚೀನಾ(China) ಕುರಿತು ಮಾತನಾಡಿದ ಅವರು, ನಮ್ಮಂತೆಯೇ ಎಲ್ಲಾ ಸಮಸ್ಯೆಗಳನ್ನು ಹೊಂದಿರುವ ಚೀನಾ, ಭಾರತದಜಿಡಿಪಿಗಿಂತ(JDP) ಐದಾರು ಪಟ್ಟು ಮುಂದಿದೆ. ಆದ್ದರಿಂದ ನಾನು ನಮ್ಮ ರಾಜಕೀಯ ನಾಯಕರನ್ನು ವಿನಮ್ರವಾಗಿ ವಿನಂತಿಸುತ್ತೇನೆ. ಚೀನಾವನ್ನು ಬಹಳ ಎಚ್ಚರಿಕೆಯಿಂದ ಅಧ್ಯಯನ ಮಾಡಿ, ನಂತರ ನಾವು ಚೀನಾದಿಂದ ಕಲಿಯಬಹುದಾದ ಮತ್ತು ಇಲ್ಲಿ ಕಾರ್ಯಗತಗೊಳಿಸಬಹುದಾದ ಒಳ್ಳೆಯ ವಿಷಯಗಳು ಯಾವುವು ಎಂಬುದನ್ನು ನೋಡಿ, ಇದರಿಂದ ಭಾರತವು ಚೀನಾದಂತೆಯೇ ಅದೇ ವೇಗದಲ್ಲಿ ಮುಂದುವರಿಯುತ್ತದೆ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

Exit mobile version