ಯುದ್ಧ ಮುಗಿಯುವವರೆಗೂ ಶಸ್ತ್ರಾಸ್ತ್ರ ಕೆಳಗಿಳಿಸಬೇಡಿ – ಪ್ರಧಾನಿ

ನವದೆಹಲಿ  22: ಯುದ್ಧ ಮುಗಿಯುವವರೆಗೂ ಶಸ್ತ್ರಾಸ್ತ್ರ ಕೆಳಗಿಳಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

  ದೇಶದಲ್ಲಿ ಇದುವರೆಗೆ 100 ಕೋಟಿ ಕೊರೊನಾ ಲಸಿಕೆಯನ್ನು ನೀಡಿರುವ ಹಿನ್ನಲೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ,  ದೇಶದ ಜನತೆ ಎಚ್ಚರಿಕೆಯಿಂದಿರಬೇಕು, ನಾವು ಧರಿಸಿರುವ ಕವಚ ಎಷ್ಟೇ ಉತ್ತಮವಾಗಿದ್ದರೂ, ಅದುನಿಕವಾಗಿದ್ದರೂ, ಯುದ್ಧ ಮುಗಿಯುವವರೆಗೆ ಶಸ್ತ್ರಾಸ್ತ್ರ ಕೆಳಗಿಳಿಸಬಾರದು. ಹೇಗೆ ಪ್ರತಿನಿತ ಚಪ್ಪಲಿಯನ್ನು ಧರಿಸಿಯೇ ಮನೆಯಿಂದ ಹೊರಡುತ್ತೀವೋ ಹಾಗೆಯೇ ಮಾಸ್ಕ್ ಧರಿಸಿ ಮನೆಯಿಂದ ಹೊರಡಿ, ಲಸಿಕೆ ಸಿಗದವರು ಲಸಿಕೆ ಪಡೆಯಲು ಪ್ರಯತ್ನಿಸಿ ಲಸಿಕೆ ಸಿಕ್ಕವರು ಬೇರೆಯವರಿಗೆ ಪ್ರೇರಣೆಯನ್ನು ನೀಡಿ ಎಂದು ಹೇಳಿದರು.

ನಮ್ಮ ದೇಶವು ಒಂದು ಕಡೆ ಕರ್ತವ್ಯದ ಪಾಲನೆ ಮಾಡುತ್ತಿದೆ, ಮತ್ತೊಂದು ಕಡೆ ಸಫಲತೆ ಸಿಕ್ಕಿದೆ, 21 ಅಕ್ಟೋಬರ್ ರಂದು ಭಾರತವು 100 ಕೋಟಿ ಲಸಿಕೆಯನ್ನು ನೀಡಿ ಅಸಾಧಾರಣವಾದುದ್ದನ್ನು ಸಾಧಿಸಿ ತೋರಿಸಿದೆ. 130 ಕೋಟಿ ಜನರ ಕರ್ತವ್ಯ ಶಕ್ತಿ ಇದರಲ್ಲಿ ಅಡಕವಾಗಿದೆ ಎಂದು ಹೇಳಿದರು.

100 ಕೋಟಿ ಕೊರೊನಾ ಲಸಿಕೆ ದೇಶದ ಸಾಮರ್ಥ್ಯದ ಪ್ರತಿಬಿಂಬವಾಗಿದೆ, ಇತಿಹಾಸದ ಹೊಸ ಅಧ್ಯಾಯದ ರಚನೆಯಾಗಿದೆ, ಕಷ್ಟವಾದುದನ್ನು ಸಾಧಿಸಿ ತೋರಿಸಲಾಗಿದೆ ಇದರಿಂದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ ಎಂದು ನುಡಿದರು

ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು

Exit mobile version