ತಾಯಿಯ 100ನೇ ವರ್ಷದ ಜನ್ಮದಿನಕ್ಕೆ ಭಾವನಾತ್ಮಕ ಪತ್ರ ಬರೆದ ಪ್ರಧಾನಿ ಮೋದಿ!

ಪ್ರಧಾನಿ(PrimeMinister) ನರೇಂದ್ರ ಮೋದಿ(Narendra Modi) ಅವರು ಇಂದು ತಾಯಿ ಹೀರಾಬೆನ್ ಮೋದಿ(Hiraben Modi) ಅವರ 100ನೇ ವರ್ಷದ ಜನ್ಮದಿನಕ್ಕೆ ಭಾವನಾತ್ಮಕ ಪತ್ರ ಬರೆಯುವ ಮೂಲಕ ತಾಯಿಗೆ ಶುಭಾಷಯ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿಯೊಂದಿಗೆ ಕಳೆದ ಅಮೂಲ್ಯ ಜೀವನದ ಕ್ಷಣಗಳನ್ನು ನೆನೆದು ಭಾವನಾತ್ಮಕವಾಗಿ ಪತ್ರ ಬರೆದಿದ್ದಾರೆ.

Primeminister

“ಅಮ್ಮ ಎಂಬುದು ಕೇವಲ ಪದವಲ್ಲ ಆದರೆ ಇದು ಭಾವನೆಗಳನ್ನು ತುಂಬುತ್ತದೆ”. ಇಂದು ಜೂನ್ 18 ನನ್ನ ತಾಯಿ ಹೀರಾಬೆನ್ ಮೋದಿ ಅವರು ತಮ್ಮ 100 ನೇ ವರ್ಷಕ್ಕೆ ಕಾಲಿಟ್ಟ ದಿನ. ಈ ವಿಶೇಷ ದಿನದಂದು ನಾನು ಸಂತೋಷ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಕೆಲವು ಆಲೋಚನೆಗಳನ್ನು ಬರೆದಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್‌(Tweet) ಮೂಲಕ ತಿಳಿಸಿದ್ದಾರೆ.

ತಮ್ಮ ಬರಹದಲ್ಲಿ ಪ್ರಧಾನಿಯವರು ತಮ್ಮ ತಾಯಿ ಹೀರಾಬೆನ್ ಅವರನ್ನು, ನಮ್ಮ ತಾಯಿ ಸರಳ ಮಹಿಳೆ, ಅಸಾಮಾನ್ಯ ಮಹಿಳೆ ಎಂದು ಬಣ್ಣಿಸಿದ್ದಾರೆ. ನಮ್ಮ ತಾಯಿ ಚಿಕ್ಕವರಿದ್ದಾಗ ಅವರ ತಾಯಿಯನ್ನು ಕಳೆದುಕೊಂಡರು ಮತ್ತು ಜೀವನದಲ್ಲಿ ಅನೇಕ ಕಷ್ಟಗಳನ್ನು ಸಹಿಸಿಕೊಂಡರು, ಹಾಗಾಗಿಯೇ ಇಂದು ಹೆಚ್ಚು ದೃಢವಾಗಿ ಹೊರಹೊಮ್ಮಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ತಮ್ಮ ಬಾಲ್ಯದ ಕೆಲವು ವಿಶೇಷ ಕ್ಷಣಗಳನ್ನು ತಮ್ಮ ತಾಯಿಯೊಂದಿಗೆ ಕಳೆದಿದ್ದಾರೆ. ತಮ್ಮ ತಾಯಿ ಮಾಡಿದ ಹಲವಾರು ತ್ಯಾಗಗಳನ್ನು ಅವರು ನೆನಪಿಸಿಕೊಂಡರು ಮತ್ತು ಅವರ ಮನಸ್ಸು, ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸವನ್ನು ರೂಪಿಸಿದ ವಿವಿಧ ಗುಣಗಳನ್ನು ವ್ಯಕ್ತಪಡಿಸಿದರು. ಗುಜರಾತ್ನ ವಡಾನರದಲ್ಲಿರುವ ಮಣ್ಣಿನ ಗೋಡೆಗಳು ಮತ್ತು ಛಾವಣಿಗೆ ಮಣ್ಣಿನ ಹೆಂಚುಗಳನ್ನು ಹೊಂದಿರುವ ಪುಟ್ಟ ಮನೆಯನ್ನು ನೆನಪಿಸಿಕೊಂಡರು, ಅಲ್ಲಿ ಅವರು ತಮ್ಮ ಪೋಷಕರು ಮತ್ತು ಒಡಹುಟ್ಟಿದವರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು.
 "ತಾಯಿ ಮನೆಯ ಎಲ್ಲಾ ಕೆಲಸಗಳನ್ನು ತಾನೇ ಮಾಡುತ್ತಿದ್ದರು, ಅದು ಮಾತ್ರವಲ್ಲದೆ ಮನೆಯ ಅಲ್ಪ ಆದಾಯಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದರು. ಅವರು ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದರು ಮತ್ತು ಮನೆಯ ಖರ್ಚುಗಳನ್ನು ಪೂರೈಸಲು ಸಹಾಯ ಮಾಡಲು ಚರಖಾವನ್ನು ತಿರುಗಿಸಲು ಸಮಯವನ್ನು ತೆಗೆದುಕೊಳ್ಳುತ್ತಿದ್ದರು. ಮಳೆಗಾಲದಲ್ಲಿ ನಮ್ಮ ಮೇಲ್ಛಾವಣಿ ಸೋರುತ್ತಿತ್ತು ಮತ್ತು ಮನೆಗೆ ನೀರು ಬರುತ್ತಿತ್ತು. ಮಳೆನೀರನ್ನು ಸಂಗ್ರಹಿಸಲು ತಾಯಿ ಬಕೆಟ್ ಮತ್ತು ಪಾತ್ರೆಗಳನ್ನು ಸೋರಿಕೆಯ ಕೆಳಗೆ ಇಡುತ್ತಿದ್ದರು. 

ಈ ಪ್ರತಿಕೂಲ ಪರಿಸ್ಥಿತಿಯಲ್ಲೂ ತಾಯಿ ಸ್ಥೈರ್ಯದ ಪ್ರತೀಕವಾಗಿದ್ದರು ಎಂದು ಪ್ರಧಾನಿ ಮೋದಿ ಅವರು ತಾಯಿ ಜನ್ಮದಿನದಂದು ನೆನಪಿಸಿಕೊಂಡರು. ತಾಯಿಯ 100ನೇ ಜನ್ಮದಿನಕ್ಕೆ ಶುಭಕೋರಲು ಹಾಗೂ ಗುಜರಾತ್(Gujarat) ಪ್ರವಾಸ ಕೈಗೊಳ್ಳಲು ಇಂದು ಮುಂಜಾನೆ ಪ್ರಧಾನಿ ಮೋದಿ ಅವರು ತಮ್ಮ ತಾಯಿಯನ್ನು ಗಾಂಧಿನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು.

100ನೇ ಹುಟ್ಟುಹಬ್ಬವನ್ನು ಅವರೊಂದಿಗೆ ಆಚರಿಸಿಕೊಂಡರು ಮತ್ತು ಈ ವಿಶೇಷ ಸಂದರ್ಭದಲ್ಲಿ ಅವರ ಆಶೀರ್ವಾದವನ್ನು ಸಹ ಪಡೆದುಕೊಂಡಿದ್ದಾರೆ.
Exit mobile version