Surat : ಸೂರತ್‌ನಲ್ಲಿ 3,400 ಕೋಟಿ ರೂ. ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

Narendra Modi

Surat : ಪ್ರಧಾನಿ ನರೇಂದ್ರ ಮೋದಿ, ಗುರುವಾರ ಗುಜರಾತ್‌ನ ಸೂರತ್‌ನಲ್ಲಿ(Narendra Modi visit Surat) 3,400 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಿದರು.

ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ(Narendra Modi visit Surat) ಭೇಟಿ ಗುಜರಾತ್ ರಾಜ್ಯದ ಜನರಿಗೆ ಸಂತಸ ತಂದಿದೆ.

ಗುಜರಾತ್ ಭೇಟಿ ನೀಡಿರುವ ಪ್ರಧಾನಿಯವರು, ರಾಜ್ಯದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಿದ್ದಾರೆ.

ಸೂರತ್‌ಗೆ ಆಗಮಿಸಿದ ಪ್ರಧಾನಿಯವರನ್ನು ಅಪಾರ ಸಂಖ್ಯೆಯಲ್ಲಿ ಜನರು ಸ್ವಾಗತಿಸಿದರು. ಗುಜರಾತಿನಲ್ಲಿ ಡಬಲ್ ಇಂಜಿನ್ ಸರ್ಕಾರ ರಚನೆಯಾದ ನಂತರ ಮನೆಗಳ ನಿರ್ಮಾಣವೂ ಚುರುಕುಗೊಂಡಿದ್ದು,

https://youtu.be/75iKaGSAb6w

ಸೂರತ್‌ನಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಆಯುಷ್ಮಾನ್ ಭಾರತ್ ಯೋಜನೆಯಡಿ, ದೇಶದಲ್ಲಿ ಇದುವರೆಗೆ ಸುಮಾರು 4 ಕೋಟಿ ಬಡ ರೋಗಿಗಳು ಉಚಿತ ಚಿಕಿತ್ಸೆ ಪಡೆದಿದ್ದಾರೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ಭಾರತದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ 4 ಕೋಟಿಗೂ ಹೆಚ್ಚು ಜನರು ಉಚಿತ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 32 ಲಕ್ಷ ಗುಜರಾತ್‌ನವರು ಮತ್ತು 1.25 ಲಕ್ಷ ಸೂರತ್‌ನವರು ಎಂದು ಪ್ರಧಾನಿ ಮೋದಿ ಉಲ್ಲೇಖಿಸಿ ಹೇಳಿದ್ದಾರೆ.

ಗುಜರಾತ್ ಪ್ರವಾಸಕ್ಕೆ ಮುನ್ನ, ಪ್ರಧಾನಿ ಮೋದಿ ಬುಧವಾರ ಅಹಮದಾಬಾದ್‌ನಲ್ಲಿ(Ahemedabad) ಡ್ರೋನ್ ಪ್ರದರ್ಶನದ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : https://vijayatimes.com/pankaja-munde-statement-goes-viral/

ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನೆಗೆ ಸಿದ್ಧವಾಗಲು ಅಹಮದಾಬಾದ್ ಸಂಪೂರ್ಣ ಸಜ್ಜಾಗಿತ್ತು.

ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ನವರಾತ್ರಿಯಲ್ಲಿ ನಡೆಯುತ್ತಿರುವ ಆಚರಣೆಗಳ ಸಂದರ್ಭದಲ್ಲಿ ಗುಜರಾತ್‌ನಲ್ಲಿ ಮೂಲಸೌಕರ್ಯ, ಕ್ರೀಡೆ ಮತ್ತು ಆಧ್ಯಾತ್ಮಿಕ ತಾಣಗಳಿಗೆ ಅಡಿಪಾಯ ಹಾಕುವುದು ನನ್ನ ಸೌಭಾಗ್ಯ.

ಸೂರತ್ ‘ಜನ ಭಾಗಿದರಿ’ ಮತ್ತು ಏಕತೆಗೆ ಉತ್ತಮ ಉದಾಹರಣೆಯಾಗಿದೆ. ಭಾರತದಾದ್ಯಂತ ಜನರು ವಾಸಿಸುತ್ತಿದ್ದಾರೆ. ಸೂರತ್ ಇದು ಮಿನಿ-ಇಂಡಿಯಾ.

ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡುತ್ತಿರುವ ಡೈನಾಮಿಕ್ ಸಿಟಿ ಸೂರತ್‌ನಲ್ಲಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ.

https://twitter.com/ANI/status/1575365797970513921?s=20&t=H7pzNcez87ruT16_WXhMoQ

ಸೂರತ್ ಒಗ್ಗಟ್ಟಿನ ಸಂಕೇತವಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮತ್ತು ಶುಕ್ರವಾರ ಅಹಮದಾಬಾದ್, ಗಾಂಧಿನಗರ, ಸೂರತ್, ಭಾವನಗರ ಮತ್ತು ಅಂಬಾಜಿಗೆ ಭೇಟಿ ನೀಡಲಿದ್ದು, ಅಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕರಿಗೆ ಅರ್ಪಿಸಲಿದ್ದಾರೆ.

Source: India Today

Exit mobile version