ರಾಷ್ಟ್ರಮಟ್ಟದ 2 ಪ್ರತಿಷ್ಠಿತ ಪ್ರಶಸ್ತಿ ಪಡೆದ ಮಂಗಳೂರು ವಿಮಾನ ನಿಲ್ದಾಣ: ಸರಕು ಸಾಗಣೆಯಲ್ಲಿಯೂ ಪ್ರಗತಿ

Mangalore: ಮಂಗಳೂರು (Mangalore) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಷ್ಟ್ರಮಟ್ಟದ ಎರಡು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದ್ದು, ಮುಂದಿನ ವರ್ಷ ನಡೆಯುವ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದೆ. ಇನ್ನು ವಿಮಾನ ನಿಲ್ದಾಣದ ಸರಕು ಸಾಗಣೆಯು ಸಾಕಷ್ಟು ಪ್ರಗತಿ ಸಾಧಿಸಿದೆ.

ಶುಕ್ರವಾರ ನಡೆದ ಫ್ಯೂಚರ್‌ ಆಫ್‌ ಫೈನಾನ್ಸ್‌ ಫ್ಯೂಚರ್‌ (Future of finance Future) ಶೃಂಗಸಭೆ ಮತ್ತು ಪ್ರಶಸ್ತಿಗಳು 202310ನೇ ಆವೃತ್ತಿಯಲ್ಲಿ ವರ್ಷದ ಫೈನಾನ್ಸ್‌ ಟ್ರಾನ್ಸ್ಫರ್ಮೇಶನ್‌ ಪ್ರಶಸ್ತಿಗೆ ವಿಮಾನ ನಿಲ್ದಾಣದ ಸೈಟ್‌ ಫೈನಾನ್ಸ್‌ ಕಂಟ್ರೋಲರ್‌ ಸಚಿನ್‌ ಕುಮಾರ್‌ ಗುಪ್ತಾ (Kumar Guptha) ಅವರು ವಿಜೇತರಾಗಿದ್ದಾರೆ.

ಸರಕು ಸಾಗಣೆಯಲ್ಲಿ ಪ್ರಗತಿ
ಸರಕು ಸಾಗಣೆಯಲ್ಲಿ ಈ ವಿಮಾನ ನಿಲ್ದಾಣದ ಇಂಟಿಗ್ರೇಟೆಡ್‌ ಕಾರ್ಗೋ ಟರ್ಮಿನಲ್‌ (Integrated Cargo Terminal) (ಐಸಿಟಿ) ಪ್ರಗತಿಯನ್ನು ದಾಖಲಿಸಿದ್ದು, ಪ್ರಸಕ್ತ ಸಾಲಿನಲ್ಲಿ 1676.21 ಟನ್‌ ದೇಶೀಯ ಸರಕುಗಳನ್ನು ನಿರ್ವಹಣೆ ಮಾಡಿದೆ.

ಒಟ್ಟು1560.23 ಟನ್‌ಗಳ ರಫ್ತು
ಸೆ.30ರವರೆಗೆ ನಿರ್ವಹಿಸಿದ ಒಟ್ಟು ಸರಕುಗಳಲ್ಲಿ 1560.23 ಟನ್‌ಗಳ ರಫ್ತು ಸರಕುಗಳನ್ನು ಟರ್ಮಿನಲ್‌ (Terminal) ಉದ್ಘಾಟನೆಯಾದಲ್ಲಿಂದ ನಿರ್ವಹಿಸಿದರೆ ಮತ್ತು ಉಳಿದವು ಆಮದು ಸರಕುಗಳಾಗಿವೆ. ಆಮದು ಆಗಿರುವ ಸರಕುಗಳಲ್ಲಿ ಬೆಲೆಬಾಳುವ ವಸ್ತುಗಳು, ಯಂತ್ರೋಪಕರಣಗಳ ಭಾಗಗಳು, ವೈದ್ಯಕೀಯ ಸರಬರಾಜುಗಳು, ವೈದ್ಯಕೀಯ ಉಪಕರಣಗಳು ಮುಖ್ಯವಾಗಿದೆ. ಇದರಲ್ಲಿ ಸಾಮಾನ್ಯ ಸರಕು, ಬೆಲೆಬಾಳುವ ವಸ್ತುಗಳು, ಸಮುದ್ರ ಉತ್ಪನ್ನಗಳು, ಅಲಂಕಾರಿಕ ಮೀನುಗಳು ನಿರ್ವಹಿಸಿದ ಪ್ರಮುಖ ಸರಕುಗಳಾಗಿದೆ.

ಅಂತಾರಾಷ್ಟ್ರೀಯ ಕಾರ್ಗೋ ಕಾರ್ಯಾಚರಣೆಗಳನ್ನು ಕೆಸಿಸಿಐನ (KCCI) ಬೇಡಿಕೆಯಂತೆ ಪ್ರಾರಂಭಿಸಲು ಪ್ರಯತ್ನಗಳು ನಡೆಯುತ್ತಿದ್ದು, ವಿಮಾನ ನಿಲ್ದಾಣವು ರಫ್ತು ನಿರ್ವಹಣೆಗಾಗಿ ಕಸ್ಟಮ್ಸ್‌ ಕ್ಲಿಯರೆನ್ಸ್‌ / ಕಸ್ಟೋಡಿಯನ್‌ಶಿಪ್‌ವನ್ನು ಮಾಡಲು ಸಿದ್ಧತೆ ಮಾಡಲಿದೆ. ಸ್ಥಳೀಯ ಸಾಗರ ಉತ್ಪನ್ನ ರಫ್ತುದಾರರು ತಮ್ಮ ಉತ್ಪನ್ನಗಳನ್ನು ಸಾಗರೋತ್ತರ ಗ್ರಾಹಕರಿಗೆ ರವಾನಿಸಲು ಐಸಿಟಿಯನ್ನು ಬಳಸುತ್ತಿದ್ದಾರೆ.

ಭವ್ಯಶ್ರೀ ಆರ್.ಜೆ

Exit mobile version