ರಾಷ್ಟ್ರೀಯ ಮಹಿಳಾ ಆಯೋಗದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

New Delhi: ನವದೆಹಲಿಯಲ್ಲಿ (New Delhi) ಕೇಂದ್ರ ಕಚೇರಿ ಹೊಂದಿರುವ ರಾಷ್ಟ್ರೀಯ ಮಹಿಳಾ ಆಯೋಗವು 12 ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಆನ್ಲೈನ್ ಮೂಲಕವೂ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಷ್ಟ್ರೀಯ ಮಹಿಳಾ ನೇಮಕಾತಿ ಆಯೋಗ : 2023
ಸಂಸ್ಥೆಯ ಹೆಸರು : ರಾಷ್ಟ್ರೀಯ ಮಹಿಳಾ ಆಯೋಗ
ಉದ್ಯೋಗ ಸ್ಥಳ: ನವದೆಹಲಿ

ಹುದ್ದೆಗಳ ವಿವರ :
ಹಿರಿಯ ಸಂಶೋಧನಾ ಅಧಿಕಾರಿ- 1
ಕಾನೂನು ಅಧಿಕಾರಿ- 1
ಸಹಾಯಕ ಕಾನೂನು ಅಧಿಕಾರಿ- 1
ಖಾಸಗಿ ಕಾರ್ಯದರ್ಶಿ- 7
ಕಿರಿಯ ಹಿಂದಿ ಅನುವಾದಕ- 1
ಆಪ್ತ ಸಹಾಯಕ- 1
ಒಟ್ಟು ಹುದ್ದೆಗಳ ಸಂಖ್ಯೆ : 12
ವೇತನ : 35,400 – 2,08,700/-

ಅರ್ಹತೆಯ ವಿವರಗಳು :
ಹಿರಿಯ ಸಂಶೋಧನಾ ಅಧಿಕಾರಿ ಹುದ್ದೆಗೆ – ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ (PHD) ಪದವಿ ಪೂರ್ಣಗೊಳಿಸಿರಬೇಕು. ಕಾನೂನು ಅಧಿಕಾರಿ ಹುದ್ದೆಗೆ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ಪದವಿ, LLB ಪದವಿ ಪೂರ್ಣಗೊಳಿಸಿರಬೇಕು. ಇನ್ನು ಸಹಾಯಕ ಕಾನೂನು ಅಧಿಕಾರಿ, ಖಾಸಗಿ ಕಾರ್ಯದರ್ಶಿ, ಆಪ್ತ ಸಹಾಯಕ, ಕಿರಿಯ ಹಿಂದಿ ಅನುವಾದಕ ಹುದ್ದೆಗಳಿಗೆ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ವಯಸ್ಸಿನ ಮಿತಿ: ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷಗಳು.

ಅರ್ಜಿ ಶುಲ್ಕ: ಅರ್ಜಿ ಶುಲ್ಕವಿಲ್ಲ.
ಆಯ್ಕೆ ಪ್ರಕ್ರಿಯೆ: ಸಂದರ್ಶನ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ಲೈನ್ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ದಾಖಲೆಗಳೊಂದಿಗೆ ಡೆಪ್ಯುಟಿ ಸೆಕ್ರೆಟರಿ (Deputy Secretary), ರಾಷ್ಟ್ರೀಯ ಮಹಿಳಾ ಆಯೋಗ, ಪ್ಲಾಟ್ ನಂ. 21, ಜಸೋಲಾ ಇನ್ಸ್ಟಿಟ್ಯೂಶನಲ್ ಏರಿಯಾ (Jasola Institutional Area), ನವದೆಹಲಿ (New Delhi)110025 ಗೆ ಕಳುಹಿಸಬೇಕು.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 28-08-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-Sep-2023
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ @ncw.nic.in ಗೆ ಭೇಟಿ ನೀಡಿ

Exit mobile version