Delhi High Court: ಒಮ್ಮತದ ದೈಹಿಕ ಸಂಬಂಧದಲ್ಲಿರುವ ವ್ಯಕ್ತಿ ಸಂಗಾತಿಯ ಜನ್ಮದಿನಾಂಕವನ್ನು ಪರಿಶೀಲಿಸುವ ಅಗತ್ಯವಿಲ್ಲ 

High court
New Delhi High Court

New Delhi : ಒಮ್ಮತದ ದೈಹಿಕ ಸಂಬಂಧದಲ್ಲಿರುವ ವ್ಯಕ್ತಿ ತನ್ನ ಸಂಗಾತಿಯ ಜನ್ಮದಿನಾಂಕವನ್ನು (Birth Date) ಪರಿಶೀಲಿಸುವ ಅಗತ್ಯವಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯವು(High Court),

ಆಪಾದಿತ ಅಪ್ರಾಪ್ತ ಸಂಗಾತಿಯನ್ನು “ಅತ್ಯಾಚಾರ” ಮಾಡಿದ ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಈ ರೀತಿ ಅಭಿಪ್ರಾಯಪಟ್ಟಿದೆ.

ಒಬ್ಬ ವ್ಯಕ್ತಿಯು ತನ್ನೊಂದಿಗೆ ಒಮ್ಮತದ ದೈಹಿಕ ಸಂಬಂಧವನ್ನು ಹೊಂದುವವರ ಆಧಾರ್ ಕಾರ್ಡ್ (Aadhar Card)ಅಥವಾ ಪ್ಯಾನ್ ಕಾರ್ಡ್ (Pan card) ಅನ್ನು ನೋಡುವ ಅಗತ್ಯವಿಲ್ಲ ಅಥವಾ ಅವಳ ಶಾಲಾ ದಾಖಲೆಗಳಿಂದ ಸಂಗಾತಿಯ ಜನ್ಮ ದಿನಾಂಕವನ್ನು ಪರಿಶೀಲಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

https://vijayatimes.com/anupam-kher-speaks-about-bollywood/

ಪ್ರಸ್ತುತ ಪ್ರಕರಣದಲ್ಲಿ, ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನದಾಗಿದೆ ಎಂದು ನಾನು ಭಾವಿಸುತ್ತೇನೆ. ಎಫ್ಐಆರ್‌ನಲ್ಲಿ (FIR) ಹೇಳಿರುವಂತೆ, ಅವಳು 2019 ರಿಂದ ಅರ್ಜಿದಾರರೊಂದಿಗೆ ಸಂಬಂಧವನ್ನು ಹೊಂದಿದ್ದಳು.

ನನ್ನ ದೃಷ್ಟಿಯಲ್ಲಿ, ಅಂತಹ ಘಟನೆ ಹನಿ-ಟ್ರ್ಯಾಪಿಂಗ್ ಪ್ರಕರಣವಾಗಿದೆ ಎಂದು ತೋರುತ್ತದೆ. ಅಂತಹ ಯಾವುದೇ ರೀತಿಯ ಎಫ್‌ಐಆರ್ ಇದ್ದರೆ, ಪೊಲೀಸ್ ಕಮಿಷನರ್ (Police Commissioner)ವಿವರವಾದ ತನಿಖೆಯನ್ನು ಮಾಡಬೇಕು.

ಈ ಕುರಿತು ಸಮಗ್ರ  ತನಿಖೆಯನ್ನು  ನ್ಯಾಯಾಲಯವು ಅಪೇಕ್ಷಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಇನ್ನು ಪ್ರಕರಣಯೊಂದರಲ್ಲಿ ವ್ಯಕ್ತಿಯೋರ್ವ ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದುವ ಮೂಲಕ ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಆದರೆ  ಆ ಅಪ್ರಾಪ್ತೆ ಅನೇಕ ವರ್ಷಗಳಿಂದ ವ್ಯಕ್ತಿಯೊಂದಿಗೆ  ಪರಿಚಯ ಹೊಂದಿದ್ದಳು. ಹೀಗಾಗಿ ಒಮ್ಮತದ ದೈಹಿಕ ಸಂಬಂಧದಲ್ಲಿರುವ ವ್ಯಕ್ತಿ ತನ್ನ ಸಂಗಾತಿಯ ಜನ್ಮದಿನಾಂಕವನ್ನು ಪರಿಶೀಲಿಸುವ ಅಗತ್ಯವಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯವು ಹೇಳಿದೆ.

ಇನ್ನು ಆರೋಪಿಯನ್ನು ₹ 20,000 ಸ್ಥಳೀಯ ಶ್ಯೂರಿಟಿಯೊಂದಿಗೆ ವೈಯಕ್ತಿಕ ಬಾಂಡ್‌ನಲ್ಲಿ (Bond) ಬಿಡುಗಡೆ ಮಾಡುವಂತೆ ನ್ಯಾಯಾಲಯ ಸೂಚಿಸಿದೆ ಮತ್ತು ಅವನು ನಿಯತಕಾಲಿಕವಾಗಿ,

https://vijayatimes.com/anupam-kher-speaks-about-bollywood/

ಪೊಲೀಸ್ ಠಾಣೆಗೆ (Police Station) ವರದಿ ಸಲ್ಲಿಸಬೇಕು ಮತ್ತು ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡಾಗಲೆಲ್ಲಾ ನ್ಯಾಯಾಲಯಕ್ಕೆ ಹಾಜರಾಗಬೇಕು.

ಆರೋಪಿಗಳು ದೇಶವನ್ನು ತೊರೆಯದಂತೆ ಪಾಸ್‌ಪೋರ್ಟ್ ಅನ್ನು ಒಪ್ಪಿಸುವಂತೆ ಯಾವುದೇ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಂತೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದವರೊಂದಿಗೆ ಸಂವಹನ ನಡೆಸದಂತೆಯೂ ಅದು ಹೇಳಿದೆ.
Exit mobile version