ನೀಟ್ ಯುಜಿ ಫಲಿತಾಂಶ ಬಿಡುಗಡೆ :ಫಲಿತಾಂಶ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಲಿಂಕ್..

Karnataka : ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ 2023 ಮೇ 7 ರಂದು ನಡೆದ ನೀಟ್‌ ಯುಜಿ-2023ರ(NEET UG 2023) ಪರೀಕ್ಷೆಯ ಫಲಿತಾಂಶವನ್ನು ಇಂದು ರಾಷ್ಟ್ರೀಯ ಪರೀಕ್ಷಾ ಏಜನ್ಸಿಯು ಬಿಡುಗಡೆ ಮಾಡಿದೆ. ನೀಟ್‌ ಯುಜಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಫಲಿತಾಂಶವನ್ನು ಎನ್‌ಟಿಎ(NTA) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪಡೆಯಬಹುದಾಗಿದೆ.

ಆಂಧ್ರಪ್ರದೇಶದ(Andhra Pradesh) ಬೋರಾ ವರುಣ್ ಚಕ್ರವರ್ತಿ ಮತ್ತು ತಮಿಳುನಾಡಿನ(Tamil Nadu) ಪ್ರಭಂಜನ್ ಜೆ ಶೇಕಡ 99.9 ಅಂಕ ಪಡೆಯುವ ಮೂಲಕ ನೀಟ್ ಯುಜಿ 2023ರ ಫಲಿತಾಂಶದಲ್ಲಿ ಪ್ರಥಮ rank ಹಂಚಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ. ಇನ್ನು ಉತ್ತರ ಪ್ರದೇಶದಿಂದ ಹೆಚ್ಚಿನ ವಿದ್ಯಾರ್ಥಿಗಳು ರಾಜ್ಯವಾರು ಫಲಿತಾಂಶದಲ್ಲಿ ತೇರ್ಗಡೆ ಹೊಂದಿದ್ದಾರೆ ಹಾಗೂ ಮಹಾರಾಷ್ಟ್ರ(Maharashtra) ಹಾಗೂ ರಾಜಸ್ಥಾನ ರಾಜ್ಯಗಳು ನಂತರದ ಸ್ಥಾನದಲ್ಲಿ ಇವೆ.

ಇದನ್ನೂ ಓದಿ : ಉಚಿತ ಗ್ಯಾರಂಟಿಗಳನ್ನು ತಮ್ಮ ಸ್ವಂತ ಆಸ್ತಿ ಮಾರಿ ಹಣ ಹೊಂದಿಸ್ತೀರಾ ಸಿದ್ದರಾಮಯ್ಯನವರೇ ? ಪ್ರತಾಪ್‌ ಸಿಂಹ ಪ್ರಶ್ನೆ

ಅಭ್ಯರ್ಥಿಗಳು ಫಲಿತಾಂಶ ಚೆಕ್ ಮಾಡಲು ಎನ್‌ಟಿಎ ಅಧಿಕೃತ ವೆಬ್‌ಸೈಟ್‌ https://neet.nta.nic.in/ ಗೆ ಭೇಟಿ ನೀಡಿ ಇಂದು ಫಲಿತಾಂಶವನ್ನು ಪಡೆಯಬಹುದು.ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಹಾಗೂ ಇತರೆ ರುಜುವಾತುಗಳನ್ನು ನಮೂದಿಸಿ ಲಾಗಿನ್ ಆಗುವ ಮೂಲಕ ಅಭ್ಯರ್ಥಿಗಳು ಫಲಿತಾಂಶವನ್ನು ಪರಿಶೀಲಿಸಬಹುದು.ಇದಲ್ಲದೇ ತಾತ್ಕಾಲಿಕ ಕೀ ಉತ್ತರಗಳನ್ನು ಜೂನ್ 10 ರಂದು ಬಿಡುಗಡೆ ಮಾಡಲಾಗಿತ್ತು.ಅಖಿಲ ಭಾರತ ಟಾಪರ್‌ಗಳ ಹೆಸರುಗಳು, ಅವರು ಗಳಿಸಿದ ಅಂಕಗಳು ಮತ್ತು ವರ್ಗವಾರು ಕಟ್-ಆಫ್ ಅಂಕಗಳನ್ನು ಸಹ ನೀಟ್ ಫಲಿತಾಂಶದೊಂದಿಗೆ ರಾಷ್ಟ್ರೀಯ ಪರೀಕ್ಷಾ ಏಜನ್ಸಿಯು ಪ್ರಕಟಿಸಿದೆ.

NEET 2023 ಫಲಿತಾಂಶ ಚೆಕ್‌ ಮಾಡಲು ವೆಬ್‌ಸೈಟ್‌ ಲಿಂಕ್‌ ಇಲ್ಲಿದೆ
https://nta.ac.in/
https://ntaresults.nic.in/
https://neet.nta.nic.in/

NEET UG 2023 ಫಲಿತಾಂಶ ಚೆಕ್ ಮಾಡುವ ವಿಧಾನ

  1. ನೀಟ್‌ ಅಧಿಕೃತ ವೆಬ್‌ಸೈಟ್‌ https://ntaresults.nic.in/ ಅಥವಾ https://neet.nta.nic.in/ ಲಿಂಕ್ ಮೇಲೆ ಕ್ಲಿಕ್‌ ಮಾಡಿ.
  2. ನಂತರ ಲಾಗಿನ್‌ ಐಡಿ,ನೋಂದಣಿ ಸಂಖ್ಯೆಯನ್ನು ಮತ್ತು ಜನ್ಮ ದಿನಾಂಕ ವನ್ನು ನಮೂದಿಸಿ.
  3. ಈಗ ನಿಮಗೆ ನೀಟ್‌ ಯುಜಿ ಫಲಿತಾಂಶ ಕಾಣಿಸುತ್ತದೆ.
  4. ನಂತರ ಅದನ್ನು ಡೌನ್‌ಲೋಡ್‌ ಮಾಡಿಕೋಂಡು ಅದನ್ನು ಪ್ರಿಂಟ್‌ ತೆಗೆದುಕೊಳ್ಳಿ.

2023 ರ ಮೇ 7 ರಂದು ಮಧ್ಯಾಹ್ನ 2 ರಿಂದ ಸಂಜೆ 5.20 ರವರೆಗೆ ನೀಟ್‌ ಯುಜಿ 2023 ಪರೀಕ್ಷೆಯನ್ನು ದೇಶದಾದ್ಯಂತ ನಡೆಸಲಾಗಿತ್ತು.ಭಾರತದ ಹೊರಗಿನ 14 ನಗರಗಳಲ್ಲಿ ಮತ್ತು ದೇಶದಾದ್ಯಂತ 499 ನಗರಗಳಲ್ಲಿ ನಡೆಸಲಾಗಿತ್ತು.ಸುಮಾರು 20 ಲಕ್ಷ ವಿದ್ಯಾರ್ಥಿಗಳು ಈ ವರ್ಷ ನೀಟ್ ಯುಜಿ 2023 ಪ್ರವೇಶ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು

ರಶ್ಮಿತಾ ಅನೀಶ್

Exit mobile version